ಇಂದು ಭಗವಾನ್ ಮಹಾವೀರ ಜಯಂತಿ: ಗಣ್ಯರಿಂದ ಶುಭಾಶಯ
ಇಂದು ಭಗವಾನ್ ಮಹಾವೀರ ಜಯಂತಿ.ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ,ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರ ಜನತೆಗೆ ಶುಭಾಶಯ ಕೋರಿದ್ದಾರೆ.
Published: 25th April 2021 11:36 AM | Last Updated: 25th April 2021 11:40 AM | A+A A-

ಮಹಾವೀರ, ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ
ನವದೆಹಲಿ: ಇಂದು ಭಗವಾನ್ ಮಹಾವೀರ ಜಯಂತಿ.ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ,ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಜನತೆಗೆ ಶುಭಾಶಯ ಕೋರಿದ್ದಾರೆ.
ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ದೇಶ ಹೋರಾಡುತ್ತಿರುವ ಸಂದರ್ಭದಲ್ಲಿ, ಭಗವಾನ್ ಮಹಾವೀರ ಎಲ್ಲರನ್ನು ಆರೋಗ್ಯದಿಂದ ಇಡಲಿ ಹಾಗೂ ನಮ್ಮ ಪ್ರಯತ್ನದೊಂದಿಗೆ ಯಶಸ್ವಿಯಾಗಲು ಆಶೀರ್ವದಿಸಲಿ ಎಂದು ಪ್ರಾರ್ಥಿಸುವುದಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
भगवान महावीर का जीवन संदेश हमें शांति और आत्मसंयम की सीख देता है। जब हम सभी देशवासी मिलकर कोरोना के इस संकट का मुकाबला कर रहे हैं, ऐसे समय में महावीर जयंती पर मेरी भगवान महावीर से प्रार्थना है कि सभी को स्वस्थ रखें और हमारे प्रयासों को सफलता का आशीर्वाद दें।
— Narendra Modi (@narendramodi) April 25, 2021
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡಾ ದೇಶದ ಜನತೆಗೆ ಮಹಾವೀರ ಜಯಂತಿಯ ಶುಭಾಶಯ ಕೋರಿದ್ದು, ಅವರ ಬೋಧನೆಗಳನ್ನು ಪಾಲಿಸುವಂತೆ ಹಾಗೂ ಸಾಮೂಹಿಕ ಶಿಸ್ತಿನ ಮೂಲಕ ಕೋವಿಡ್-19 ಸೋಲಿಸಲು ಪಣ ತೊಡುವಂತೆ ಜನರಿಗೆ ಕರೆ ನೀಡಿದ್ದಾರೆ.
सभी देशवासियों, विशेषकर जैन समुदाय को महावीर जयंती की हार्दिक शुभकामनाएं। भगवान महावीर ने ‘अहिंसा परमो धर्म:’ तथा ‘जियो और जीने दो’ के आदर्शों के माध्यम से मानवता को नई राह दिखाई। आइए, हम सब उनकी शिक्षाओं का अनुसरण करें व सामूहिक अनुशासन के बल पर कोविड-19 को हराने का संकल्प लें।
— President of India (@rashtrapatibhvn) April 25, 2021
ಅಧಿಕೃತ ನಿವಾಸ ಕಾವೇರಿಯಲ್ಲಿ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಾಡಿನ ಸಂಕಷ್ಠಗಳೆಲ್ಲಾ ದೂರಸರಿದು ಜನರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರು. ಮಹಾವೀರರ ಆಧ್ಯಾತ್ಮಿಕ ಉಪದೇಶಗಳ ಬೆಳಕು ಸದಾ ನಮಗೆ ದಾರಿ ದೀಪವಾಗಿರಲಿ ಎಂದು ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
ಮಹಾವೀರ ಜಯಂತಿಯ ಅಂಗವಾಗಿ ಮುಖ್ಯಮಂತ್ರಿ @BSYBJP ರವರು ಇಂದು ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.#MahavirJayanti2021 pic.twitter.com/9IkJuioD55
— CM of Karnataka (@CMofKarnataka) April 25, 2021