ವ್ಯವಸ್ಥೆಯ ವಿಫಲತೆ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಜನರಿಗೆ ನೆರವಾಗಿ- ರಾಹುಲ್ ಗಾಂಧಿ
ದೇಶದಲ್ಲಿ ಕೋವಿಡ್-19 ಕೇಸ್ ಗಳು ಹೆಚ್ಚಾಗುತ್ತಿದ್ದು,ತೀವ್ರ ಆಕ್ಸಿಜನ್ ಬಿಕ್ಕಟ್ಟು ಉದ್ಬವಿಸಿರುವಂತೆಯೇ, ಪ್ರಸ್ತುತ ವ್ಯವಸ್ಥೆ ವೈಫಲ್ಯಗೊಂಡಿದ್ದು, ಪಕ್ಷದ ಕಾರ್ಯಕರ್ತರು ಜನರಿಗೆ ನೆರವು ನೀಡುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
Published: 25th April 2021 12:44 PM | Last Updated: 25th April 2021 12:46 PM | A+A A-

ರಾಹುಲ್ ಗಾಂಧಿ
ನವದೆಹಲಿ:ದೇಶದಲ್ಲಿ ಕೋವಿಡ್-19 ಕೇಸ್ ಗಳು ಹೆಚ್ಚಾಗುತ್ತಿದ್ದು,ತೀವ್ರ ಆಕ್ಸಿಜನ್ ಬಿಕ್ಕಟ್ಟು ಉದ್ಬವಿಸಿರುವಂತೆಯೇ, ಪ್ರಸ್ತುತ ವ್ಯವಸ್ಥೆ ವೈಫಲ್ಯಗೊಂಡಿದ್ದು, ಪಕ್ಷದ ಕಾರ್ಯಕರ್ತರು ಜನರಿಗೆ ನೆರವು ನೀಡುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ವ್ಯವಸ್ಥೆ ವಿಫಲವಾಗಿದೆ. ಆದ್ದರಿಂದ ಜನರ ಧ್ವನಿ ಕೇಳುವುದು ಅಗತ್ಯವಾಗಿದೆ. ಈ ಬಿಕ್ಕಟ್ಟಿನಲ್ಲಿ ದೇಶಕ್ಕೆ ಜವಾಬ್ದಾರಿಯುತ ನಾಗರಿಕರ ಅಗತ್ಯವಿದೆ. ಎಲ್ಲಾ ರಾಜಕೀಯ ಕೆಲಸಗಳನ್ನು ತೊರೆದು, ತೊಂದರೆಯಲ್ಲಿ ಸಿಲುಕಿರುವ ನಮ್ಮ ದೇಶದ ಜನರಿಗೆ ಅಗತ್ಯ ನೆರವು ನೀಡುವಂತೆ ಕಾಂಗ್ರೆಸ್ ಸಹೋದ್ಯೋಗಿಗಳಲ್ಲಿ ಮನವಿ ಮಾಡುವುದಾಗಿ ಬರೆದುಕೊಂಡಿದ್ದಾರೆ. ಇದು ಕಾಂಗ್ರೆಸ್ ಕುಟುಂಬದ ಧರ್ಮ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
‘System’ failed, so it’s important to do Jan ki baat:
— Rahul Gandhi (@RahulGandhi) April 25, 2021
In this crisis, the country needs responsible citizens. I request my Congress colleagues to leave all political work- just provide all help and ease the pain of our countrymen.
This is the Dharma of the Congress family.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,49,691 ಹೊಸ ಕೋವಿಡ್-19 ಪ್ರಕರಣಗಲು ದಾಖಲಾಗಿದ್ದು, 2,767 ಮಂದಿ ಸಾವನ್ನಪ್ಪಿದ್ದಾರೆ.