ಕೋವಿಡ್-19: ವೈದ್ಯಕೀಯೇತರ ಲಿಕ್ವಿಡ್ ಆಕ್ಸಿಜನ್ ಬಳಕೆ ಮೇಲೆ ನಿಷೇಧ, ಈ ಮೂರು ಕ್ಷೇತ್ರಗಳಿಗೆ ಕೇಂದ್ರದಿಂದ ವಿನಾಯಿತಿ

ವೈದ್ಯಕೀಯೇತರ ಉದ್ದೇಶಕ್ಕಾಗಿ ಲ್ವಿಕಿಡ್ ಆಕ್ಸಿಜನ್ ಬಳಕೆಯನ್ನು ನಿಷೇಧಿಸಿದ ಬೆನ್ನಲ್ಲೇ, ಆಂಪಲ್ಸ್ ಗಳು ಮತ್ತು ಬಾಟಲಿಗಳು, ಔಷಧಗಳು ಮತ್ತು ಸರಕು ಬಳಕೆಗಾಗಿ ರಕ್ಷಣಾ ಪಡೆಗಳಿಗೆ ಸೋಮವಾರ ಕೇಂದ್ರ ಸರ್ಕಾರ ಅವಕಾಶ ನೀಡಿದೆ.
ಮೆಡಿಕಲ್ ಆಕ್ಸಿಜನ್ ಗಾಗಿ ಕಾಯುತ್ತಿರುವ ರೋಗಿಯೊಬ್ಬರ ಸಂಬಂಧಿ
ಮೆಡಿಕಲ್ ಆಕ್ಸಿಜನ್ ಗಾಗಿ ಕಾಯುತ್ತಿರುವ ರೋಗಿಯೊಬ್ಬರ ಸಂಬಂಧಿ

ನವದೆಹಲಿ: ವೈದ್ಯಕೀಯೇತರ ಉದ್ದೇಶಕ್ಕಾಗಿ ಲ್ವಿಕಿಡ್ ಆಕ್ಸಿಜನ್ ಬಳಕೆಯನ್ನು ನಿಷೇಧಿಸಿದ ಬೆನ್ನಲ್ಲೇ, ಆಂಪಲ್ಸ್ ಗಳು ಮತ್ತು ಬಾಟಲಿಗಳು, ಔಷಧಗಳು ಮತ್ತು ಸರಕು ಬಳಕೆಗಾಗಿ ರಕ್ಷಣಾ ಪಡೆಗಳಿಗೆ ಸೋಮವಾರ ಕೇಂದ್ರ ಸರ್ಕಾರ ಅವಕಾಶ ನೀಡಿದೆ.

 ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಅನೇಕ ಕಡೆಗಳಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆ ನಡುವೆ ವೈದ್ಯಕೀಯೇತರ ಉದ್ದೇಶಕ್ಕಾಗಿ ಲಿಕ್ವಿಡ್ ಆಕ್ಸಿಜನ್ ಬಳಕೆ ಮೇಲೆ  ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಭಾನುವಾರ ನಿರ್ಬಂಧ ಹೇರಿದ್ದರು. 

ಆಂಪಲ್ಸ್ ಗಳು ಮತ್ತು ಬಾಟಲಿಗಳು, ಔಷಧಗಳು ಮತ್ತು ಸರಕು ಬಳಕೆಗಾಗಿ ರಕ್ಷಣಾ ಪಡೆಗಳಿಗೆ ಇದೀಗ ನಿಷೇಧ ಆದೇಶದಿಂದ  ವಿನಾಯಿತಿ ನೀಡಲಾಗಿದೆ ಎಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಲ್ಲಾ ಸೋಮವಾರ ಪತ್ರ ಬರೆದಿದ್ದಾರೆ.

ಕೊರೋನಾವೈರಸ್ ಎರಡನೇ ಅಲೆ ಅನೇಕ ರಾಜ್ಯಗಳಲ್ಲಿ ತೀವ್ರ ರೀತಿಯಲ್ಲಿ ವ್ಯಾಪಿಸುತ್ತಿರುವಂತೆ ಆಕ್ಸಿಜನ್ ಗೆ ಅನೇಕ ಕಡೆಗಳಲ್ಲಿ ಬಿಕ್ಕಟ್ಟು ಉಂಟಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಆಕ್ಸಿಜನ್ ಲಭ್ಯವಿರುವ ಸ್ಥಳಗಳಿಂದ ವಿಶೇಷ ರೈಲುಗಳ ಮೂಲಕ ಆಕ್ಸಿಜನ್ ತರಿಸಿಕೊಂಡು ಕೊರೋನಾ ಪೀಡಿತ ರಾಜ್ಯಗಳಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. 

ಆಕ್ಸಿಜನ್ ಸಾಗಿಸಲು ಸಿಂಗಾಪುರ ಮತ್ತು ಯುಎಇ ಯಂತರ ರಾಷ್ಟ್ರಗಳಿಂದ ಕ್ರಿಯೋಜೆನಿಕ್ ಟ್ಯಾಂಕ್ ಗಳನ್ನು ಪಡೆಯಲಾಗುತ್ತಿದೆ ಮತ್ತು ಅಮೆರಿಕದಿಂದ ಆಮ್ಲಜನಕ ಸಾಂದ್ರಕಗಳನ್ನು ತರಿಸಿಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com