ಕೋವಿಡ್ ಸಂಕಷ್ಟಕ್ಕೆ ಮಿಡಿದ ಹೃದಯ: ಭಾರತೀಯ-ಅಮೆರಿಕನ್ನರಿಂದ 400 ಆಮ್ಲಜನಕ ಕನ್ಸೆಂಟ್ರೇಟರ್ ರವಾನೆ, 5 ಮಿಲಿಯನ್ ಡಾಲರ್ ನೆರವು

ಜೀವ ಉಳಿಸುವ ಆಮ್ಲಜನಕ ಮತ್ತು ಇತರ ಅಗತ್ಯ ವಸ್ತುಗಳ ತೀವ್ರ ಕೊರತೆ ಎದುರಿಸುತ್ತಿರುವ ಭಾರತ ಇತ್ತೀಚಿನ ಕೋವಿಡ್ -19 ಉಲ್ಬಣದ ಸಮಯದಲ್ಲಿ ತೀವ್ರ ಸಂಕಷ್ಟಕ್ಕೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ, ಭಾರತೀಯ-ಅಮೆರಿಕನ್ನರು ಸಾಂಕ್ರಾಮಿಕ ರೋಗದ ಕಠಿಣ ಪರಿಸ್ಥಿತಿಯಲ್ಲಿ ದೇಶಕ್ಕೆ ಸಹಾಯ ಮಾಡಲು ಸಜ್ಜಾಗುತ್ತಿದ್ದಾರೆ.
ದೇಶಾದ್ಯಂತ ಹೆಚ್ಚುತ್ತಿರುವ ಕೊರೋಣಾ ಪ್ರಕರಣಗಳಿಂದಾಗಿ ಉಂತಾದ ಆಮ್ಲಜನಕ ಹಾಗೂ ಹಾಸಿಗೆ ಕೊರತೆ ನಡುವೆ ಕಾನ್ಪುರದ ಎಲ್ಎಲ್ಆರ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳು ಹಾಸಿಗೆಗಳು ಮತ್ತು ವೈದ್ಯಕೀಯ ಆಮ್ಲಜನಕವನ್ನು ಹಂಚಿಕೊಳ್ಳಲು ಮುಂದಾದರು.
ದೇಶಾದ್ಯಂತ ಹೆಚ್ಚುತ್ತಿರುವ ಕೊರೋಣಾ ಪ್ರಕರಣಗಳಿಂದಾಗಿ ಉಂತಾದ ಆಮ್ಲಜನಕ ಹಾಗೂ ಹಾಸಿಗೆ ಕೊರತೆ ನಡುವೆ ಕಾನ್ಪುರದ ಎಲ್ಎಲ್ಆರ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳು ಹಾಸಿಗೆಗಳು ಮತ್ತು ವೈದ್ಯಕೀಯ ಆಮ್ಲಜನಕವನ್ನು ಹಂಚಿಕೊಳ್ಳಲು ಮುಂದಾದರು.

ಹೂಸ್ಟನ್: ಜೀವ ಉಳಿಸುವ ಆಮ್ಲಜನಕ ಮತ್ತು ಇತರ ಅಗತ್ಯ ವಸ್ತುಗಳ ತೀವ್ರ ಕೊರತೆ ಎದುರಿಸುತ್ತಿರುವ ಭಾರತ ಇತ್ತೀಚಿನ ಕೋವಿಡ್ -19 ಉಲ್ಬಣದ ಸಮಯದಲ್ಲಿ ತೀವ್ರ ಸಂಕಷ್ಟಕ್ಕೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ, ಭಾರತೀಯ-ಅಮೆರಿಕನ್ನರು ಸಾಂಕ್ರಾಮಿಕ ರೋಗದ ಕಠಿಣ ಪರಿಸ್ಥಿತಿಯಲ್ಲಿ ದೇಶಕ್ಕೆ ಸಹಾಯ ಮಾಡಲು ಸಜ್ಜಾಗುತ್ತಿದ್ದಾರೆ.

ಭಾರತೀಯ-ಅಮೇರಿಕನ್ ಲಾಭರಹಿತ ಸಂಸ್ಥೆ ಸೆವಾ ಇಂಟರ್ನ್ಯಾಷನಲ್ ಯುಎಸ್ಎ, ಐದು ಮಿಲಿಯನ್ ಡಾಲರ್ ಗಲನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ - ಈಗಾಗಲೇ 1.5 ಮಿಲಿಯನ್ ಡಾಲರ್ ಗಳನ್ನು ಸಂಗ್ರಹಿಸಿದೆ ಇದು 400 ಆಮ್ಲಜನಕ ಕನ್ಸೆಂಟ್ರೇಟರ್ ಗಳನ್ನು, ಇತರ ತುರ್ತು ವೈದ್ಯಕೀಯ ಸಾಧನಗಳನ್ನು ಭಾರತಕ್ಕೆ ತಕ್ಷಣ ಕಳುಹಿಸುತ್ತಿದೆ ಎಂದು ಸಂಸ್ಥೆ ತಿಳಿಸಿದೆ. ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಪ್ರಕರಣಗಳಿಂದ ಉಂಟಾಗುವ ಆಮ್ಲಜನಕದ ಕೊರತೆಯನ್ನು ನೀಗಿಸಲು ವಿಶ್ವದಾದ್ಯಂತದ ಅನೇಕ ಆಮ್ಲಜನಕ ಪೂರೈಕೆದಾರರಿಂದ ದಾಸ್ತಾನು ಸಂಗ್ರಹಿಸಲು ಸಂಸ್ಥೆ ನೆರವಾಗುತ್ತಿದೆ.

ಭಾರತೀಯ ಆಸ್ಪತ್ರೆಗಳಿಗೆ ಆಮ್ಲಜನಕ: ಕನ್ಸೆಂಟ್ರೇಟರ್ ಗಳನ್ನು ರವಾನಿಸಲು "ಹೆಲ್ಪ್ ಇಂಡಿಯಾ ಡಿಫೀಟ್ ಕೋವಿಡ್ -19" ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಸಂಸ್ಥೆ ಹೇಳಿದೆ. ಸುಮಾರು 10,000 ಕುಟುಂಬಗಳು ಮತ್ತು 1,000 ಕ್ಕೂ ಹೆಚ್ಚು ಅನಾಥಾಶ್ರಮಗಳು ಮತ್ತು ದೇಶಾದ್ಯಂತ ಹಿರಿಯ ನಾಗರಿಕ ಕೇಂದ್ರಗಳಿಗೆ ಆಹಾರ ಮತ್ತು ಔಷಧಿಗಳನ್ನು ಒದಗಿಸುತ್ತಿದೆ ಎಂದು ಅದು ಹೇಳಿದೆ. ಹೂಸ್ಟನ್ ನಲ್ಲಿನ ಸಂಸ್ಥೆಯ ವಕ್ತಾರ ಗೀತೇಶ್ ದೇಸಾಯಿ "ಯುಎಸ್ ನಾದ್ಯಂತ ಭಾರತೀಯ-ಅಮೇರಿಕನ್ ಸಮುದಾಯದಿಂದ ದೇಣಿಗೆ ಮತ್ತು ಬೆಂಬಲವನ್ನುಪಡೆಯುವ ಮೂಲಕ ಸೇವಾ ಇಂಟರ್ನ್ಯಾಷನಲ್ ಸೇವೆಗೆ ಮುಂದಾಗಿದೆ. ಭಾರತೀಯ ಅಮೆರಿಕನ್ನರು ಭಾರತದಲ್ಲಿ ತಮ್ಮ ಸಹೋದರ-ಸಹೋದರಿಯರ ನೋವು ಮತ್ತು ಸಂಕಟವನ್ನು ಅನುಭವಿಸುತ್ತಿದ್ದಾರೆಂದು ಅರಿತು ಸಂಸ್ಥೆಯು 1.5 ಮಿಲಿಯನ್ ಡಾಲರ್‌ಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಿದೆ ಮತ್ತು ಕೋವಿಡ್ 19 ಸಾಂಕ್ರಾಮಿಕ ರೋಗವು ಸೃಷ್ಟಿಸಿದ ದುರಂತದ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರ ಯೋಗಕ್ಷೇಮಕ್ಕಾಗಿ ಕಾಳಜಿ ವಹಿಸಿದೆ. ಸಂಸ್ಥೆಗೆ ಸಾವಿರಾರು ದಾನಿಗಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.ಬಿಕ್ಕಟ್ಟನ್ನು ನಿವಾರಿಸಲು ಭಾರತಕ್ಕೆ ಸಹಾಯ ಮಾಡುವ ಎಲ್ಲಾ ಪ್ರಯತ್ನ ಸಾಗಿದೆ" ಎಂದಿದ್ದಾರೆ.

ಇನ್ನು ದಾನಿಗಳ ಉದಾರ ಕೊಡುಗೆಗೆ ನಾವು ಧನ್ಯವಾದ ಹೇಳಲಿದ್ದೇವೆ ಎಂದು ಸೇವಾ ಇಂಟರ್ನ್ಯಾಷನಲ್ ಅಧ್ಯಕ್ಷ ಅರುಣ್ ಕಂಕಣಿ ಹೇಳಿದರು.

"ಆಂಬುಲೆನ್ಸ್ ಸೇವೆಗಳು, ಆಸ್ಪತ್ರೆಯ ಹಾಸಿಗೆ ಲಭ್ಯತೆ ಮತ್ತು ಜನರಿಗೆ ರಕ್ತ ಮತ್ತು ಔಷಧೀಯ ಸರಬರಾಜುಗಳ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಒದಗಿಸಲು ಸೇವಾ ಸ್ವಯಂಸೇವಕರು ಡಿಜಿಟಲ್ ಹೆಲ್ಪ್‌ಡೆಸ್ಕ್ ನಿರ್ಮಿಸುವ ಕೆಲಸ ಮಾಡುತ್ತಿದ್ದಾರೆ ಭಾರತವು ಅನೇಕ ಸಂಪನ್ಮೂಲಗಳನ್ನು ಹೊಂದಿರುವುದರಿಂದ ನಾವು ಹತಾಶರಾಗಬೇಕಾಗಿಲ್ಲ, ಆದರೆ ಕೋವಿಡ್ 19 ವಿರುದ್ಧದ ಹೋರಾಟವನ್ನು ಗೆಲ್ಲಲು ನಾವು ಇನ್ನೂ ಜನರಿಗೆ ಸಹಾಯ ಮಾಡಬಹುದು. ಎಲ್ಲರೂ ಸಕಾರಾತ್ಮಕ ಆಲೋಚನೆ ಮಾಡಲು ಅಗತ್ಯ ನೆರವು ನೀಡಲು ನಾನು ವಿನಂತಿಸುತ್ತೇನೆ. " ಸೆವಾ ಉಪಾಧ್ಯಕ್ಷ ಸ್ವದೇಶ್ ಕಟೋಚ್ ಹೇಳಿದ್ದಾರೆ. ಎಎಪಿಐ, ಐಐಟಿಎಜಿಎಚ್ (ಗ್ರೇಟರ್ ಹೂಸ್ಟನ್‌ನ ಐಐಟಿ ಅಲುಮ್ನಿ), ಪ್ಯಾನ್ ಐಐಟಿ ಮತ್ತು ಇತರ ಬೃಅಹ್ತ್ ಸಂಸ್ಥೆಗಳು ಸೇರಿದಂತೆ ಪ್ರಮುಖ ವೃತ್ತಿಪರ ಸಂಘಗಳು ಈ ಪ್ರಯತ್ನದಲ್ಲಿ ಸೆವಾ ಇಂಟರ್‌ನ್ಯಾಷನಲ್‌ನೊಂದಿಗೆ ಸಹಯೋಗದಲ್ಲಿದೆ ಎಂದು ಸಂಸ್ಥೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com