ಕೋವಿಡ್-19 ಎದುರಿಸಲು ಭಾರತಕ್ಕೆ ಭೂತಾನ್ ನಿಂದ ಲಿಕ್ವಿಡ್ ಆಕ್ಸಿಜನ್ ಪೂರೈಕೆ

ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆಯಿಂದ ತೀವ್ರ ರೀತಿಯ ಹೋರಾಟ ನಡೆಸುತ್ತಿರುವ ಭಾರತಕ್ಕೆ ಜೀವ ರಕ್ಷಕ ಲಿಕ್ವಿಡ್ ಆಕ್ಸಿಜನ್ ನ್ನು ಭೂತಾನ್ ಪೂರೈಸಲಿದೆ.
ಪ್ರಧಾನಿ ಮೋದಿ ಅವರೊಂದಿಗೆ ಭೂತಾನ್ ಪ್ರಧಾನಿ ಲೊಟೆ ಶೆರಿಂಗ್‌
ಪ್ರಧಾನಿ ಮೋದಿ ಅವರೊಂದಿಗೆ ಭೂತಾನ್ ಪ್ರಧಾನಿ ಲೊಟೆ ಶೆರಿಂಗ್‌

ಥಿಂಪು: ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆಯಿಂದ ತೀವ್ರ ರೀತಿಯ ಹೋರಾಟ ನಡೆಸುತ್ತಿರುವ ಭಾರತಕ್ಕೆ ಜೀವ ರಕ್ಷಕ ಲಿಕ್ವಿಡ್ ಆಕ್ಸಿಜನ್ ನ್ನು ಭೂತಾನ್ ಪೂರೈಸಲಿದೆ.

ಇದು ನಿಕಟ ಮತ್ತು ಸ್ನೇಹಪರ" ದ್ವಿಪಕ್ಷೀಯ ಸಂಬಂಧಗಳ ಪ್ರಾಯೋಗಿಕ ಅಭಿವ್ಯಕ್ತಿಯ ಸಂಕೇತವಾಗಿದೆ ಎಂದು ಇಲ್ಲಿನ ಭಾರತೀಯ ರಾಯಭಾರಿ ಕಚೇರಿ ಮಂಗಳವಾರ ತಿಳಿಸಿದೆ.

ಇಲ್ಲಿನ ಆಕ್ಸಿಜನ್ ಪ್ಲಾಂಟ್ ನಿಂದ ಪ್ರತಿದಿನ 40 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ಉತ್ಪಾದಿಸಲಾಗುತ್ತಿದ್ದು, ಕ್ರಯೋಜೆನಿಕ್ ಟ್ಯಾಂಕರ್ ಗಳಿಂದ ಅಸ್ಸಾಂಗೆ ರಫ್ತು ಮಾಡಲಾಗುವುದು ಎಂದು ರಾಯಭಾರಿ ಕಚೇರಿ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಮೊಟಾಂಗ ಇಂಡಸ್ಟ್ರೀಯಲ್ ಎಸ್ಟೇಟ್ ನಲ್ಲಿ ಭೂತಾನ್ ಎಸ್ ಡಿ ಕ್ರಯೋಜೆನಿಕ್ಸ್ ಗ್ಯಾಸ್ ಪ್ರೈ.ಲಿಮಿಟೆಡ್ ನಿಂದ ಸ್ಥಾಪಿಸಲಾಗಿರುವ ಹೊಸ ಪ್ಲಾಂಟ್ ನಿಂದ ಭಾರತಕ್ಕೆ ಲಿಕ್ವಿಡ್ ಆಕ್ಸಿಜನ್ ಪೂರೈಸಲಾಗುವುದು  ಎಂದು ಮಾಹಿತಿ ನೀಡಲಾಗಿದೆ.

ಈ ಆಕ್ಸಿಜನ್ ಪ್ಲಾಂಟ್ ನಲ್ಲಿ ಭೂತಾನ್ ಕಂಪನಿ ಶೇ.51 ರಷ್ಟು ಹೂಡಿಕೆ ಮಾಡಿದ್ದರೆ, ಅಸ್ಸಾಂ ಮೂಲದ ಭಾರತೀಯ ಕಂಪನಿ ಮೇಘಾಲಯ ಆಕ್ಸಿಜನ್ ಪ್ರೈ. ಲಿಮಿಟೆಡ್ ನ ಎಫ್ ಡಿಐ  ಶೇ.49 ರಷ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com