ಮಹಾರಾಷ್ಟ್ರ: ಕೋವಿಡ್-19 ನಿಂದ ಮೃತಪಟ್ಟ 22 ಮಂದಿಯ ಮೃತದೇಹ ಒಂದೇ ಆಂಬುಲೆನ್ಸ್ ನಲ್ಲಿ ರವಾನೆ

ಕೋವಿಡ್-19 ನಿಂದ ಮೃತಪಟ್ಟ 22 ಮಂದಿಯ ಮೃತದೇಹವನ್ನು ಒಂದೇ ಆಂಬುಲೆನ್ಸ್ ನಲ್ಲಿ ಚಿತಾಗಾರಕ್ಕೆ ರವಾನೆ ಮಾಡಿರುವ ಘಟನೆ ಮಹಾರಾಷ್ಟ್ರದ ಬೀಡ್ ನಲ್ಲಿ ವರದಿಯಾಗಿದೆ. 
ಮಹಾರಾಷ್ಟ್ರ: ಕೋವಿಡ್-19 ನಿಂದ ಮೃತಪಟ್ಟ 22 ಮಂದಿಯ ಮೃತದೇಹ ಒಂದೇ ಆಂಬುಲೆನ್ಸ್ ನಲ್ಲಿ ರವಾನೆ
ಮಹಾರಾಷ್ಟ್ರ: ಕೋವಿಡ್-19 ನಿಂದ ಮೃತಪಟ್ಟ 22 ಮಂದಿಯ ಮೃತದೇಹ ಒಂದೇ ಆಂಬುಲೆನ್ಸ್ ನಲ್ಲಿ ರವಾನೆ

ಮುಂಬೈ: ಕೋವಿಡ್-19 ನಿಂದ ಮೃತಪಟ್ಟ 22 ಮಂದಿಯ ಮೃತದೇಹವನ್ನು ಒಂದೇ ಆಂಬುಲೆನ್ಸ್ ನಲ್ಲಿ ಚಿತಾಗಾರಕ್ಕೆ ರವಾನೆ ಮಾಡಿರುವ ಘಟನೆ ಮಹಾರಾಷ್ಟ್ರದ ಬೀಡ್ ನಲ್ಲಿ ವರದಿಯಾಗಿದೆ. 

ವೈದ್ಯಕೀಯ ಸಾಗಣೆ ವಾಹನಗಳ ಕೊರತೆ ಇರುವುದರಿಂದ ಈ ರೀತಿಯಾಗಿದೆ ಎಂದು ಜಿಲ್ಲಾಡಳಿತ ಕಾರಣ ನೀಡಿದೆ. ಬೀಡ್ ನಲ್ಲಿರುವ ಅಂಬಜೋಗೈ ನ ಸ್ವಾಮಿ ರಮಾನಂದ ತೀರ್ಥ ಗ್ರಾಮೀಣ ಸರ್ಕಾರಿ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇರಿಸಲಾಗಿದ್ದ ಶವಗಳನ್ನು ಅಂತ್ಯಕ್ರಿಯೆಗಾಗಿ ಒಟ್ಟಿಗೆ ಕಳಿಸಲಾಗಿದೆ.

ಆಸ್ಪತ್ರೆಯಲ್ಲಿ ಸಾಕಷ್ಟು ಆಂಬುಲೆನ್ಸ್ ಗಳು ಇಲ್ಲದ ಕಾರಣದಿಂದಾಗಿ ಈ ರೀತಿ ಮಾಡಲಾಗಿದೆ ಎಂದು ಕಾಲೇಜಿನ ಡೀನ್ ಡಾ. ಶಿವಾಜಿ ಸುಕ್ರೆ ತಿಳಿಸಿದ್ದಾರೆ. ಕಳೆದ ವರ್ಷ ಕೋವಿಡ್-19 ಮೊದಲ ಅಲೆಯಲ್ಲಿ 5 ಆಂಬುಲೆನ್ಸ್ ಗಳಿದ್ದವು, ಈ ಪೈಕಿ 3 ಆಂಬುಲೆನ್ಸ್ ಗಳನ್ನು ಪರಿಸ್ಥಿತಿ ಸುಧಾರಿಸುತ್ತಿದ್ದಂತೆಯೇ ವಾಪಸ್ ತೆಗೆದುಕೊಳ್ಳಲಾಯಿತು. ಈಗ ಆಸ್ಪತ್ರೆ ಕೇವಲ 2 ಆಂಬುಲೆನ್ಸ್ ಗಳೊಂದಿಗೆ ನಿರ್ವಹಣೆ ಮಾಡುತ್ತಿದೆ ಎಂದು ಆಸ್ಪತ್ರೆ ತಿಳಿಸಿದೆ.

"ಕೆಲವೊಮ್ಮೆ ಮೃತರ ಕುಟುಂಬ ಸದಸ್ಯರನ್ನು ಪತ್ತೆ ಮಾಡುವುದಕ್ಕಾಗಿ ಸಮಯ ಬೇಕಾಗುತ್ತದೆ. ಲೋಖಂಡಿ ಸಾವರ್ಗಾಂವ್ ಗ್ರಾಮದಿಂದಲೂ ಸಹ ಕೋವಿಡ್ ಕೇಂದ್ರಕ್ಕೆ ಶವಗಳನ್ನು ಕಳಿಸಿದ್ದರು. ಪರಿಸ್ಥಿತಿ ನಿಭಾಯಿಸುವುದಕ್ಕಾಗಿ ಮೂರು ಹೆಚ್ಚುವರಿ ಆಂಬುಲೆನ್ಸ್ ಗಳನ್ನು ಕಳಿಸುವುದಕ್ಕಾಗಿ ಜಿಲ್ಲಾಡಳಿತಕ್ಕೆ ಮಾ.17 ರಂದೇ ಮನವಿ ಮಾಡಲಾಗಿದೆ. ಅಷ್ಟೇ ಅಲ್ಲದೇ ಗೊಂದಲಗಳನ್ನು ತಡೆಯುವ ಉದ್ದೇಶದಿಂದ ಕೋವಿಡ್-19 ಮೃತರ ಅಂತ್ಯಕ್ರಿಯೆಯನ್ನು ಬೆಳಿಗ್ಗೆ 8 ರಿಂದ ರಾತ್ರಿ 10 ವರೆಗೆ ನಡೆಸುವಂತೆ ಮನವಿ ಮಾಡಲಾಗಿದೆ. ಮೃತ ದೇಹಗಳನ್ನು ಆಸ್ಪತ್ರೆಯ ವಾರ್ಡ್ ಗಳಿಂದ ನೇರವಾಗಿ ಚಿತಾಗಾರಕ್ಕೇ ಕಳಿಸಲಾಗುವುದು ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com