ದೆಹಲಿಗೆ ಫ್ರಾನ್ಸ್‌ನಿಂದ 21, ಬ್ಯಾಂಕಾಂಕ್‌ನಿಂದ 18 ಸಿದ್ಧ ಆಮ್ಲಜನಕ ಘಟಕ ಆಮದು

ರಾಷ್ಟ್ರ ರಾಜಧಾನಿ ದೆಹಲಿಯ ಆಸ್ಪತ್ರೆಗಳಲ್ಲಿ ಸಮರ್ಪಕ ಆಮ್ಲಜನಕ ಪೂರೈಕೆ ಖಚಿತಪಡಿಸಿಕೊಳ್ಳಲು ಫ್ರಾನ್ಸ್‌ನಿಂದ 21 ಸಿದ್ಧ ಆಮ್ಲಜನಕ ಘಟಕಗಳನ್ನು ಮತ್ತು ಬ್ಯಾಂಕಾಕ್‌ನಿಂದ 18 ಆಮ್ಲಜನಕ ಟ್ಯಾಂಕರ್‌ಗಳನ್ನು ಆಮದು...
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಆಸ್ಪತ್ರೆಗಳಲ್ಲಿ ಸಮರ್ಪಕ ಆಮ್ಲಜನಕ ಪೂರೈಕೆ ಖಚಿತಪಡಿಸಿಕೊಳ್ಳಲು ಫ್ರಾನ್ಸ್‌ನಿಂದ 21 ಸಿದ್ಧ ಆಮ್ಲಜನಕ ಘಟಕಗಳನ್ನು ಮತ್ತು ಬ್ಯಾಂಕಾಕ್‌ನಿಂದ 18 ಆಮ್ಲಜನಕ ಟ್ಯಾಂಕರ್‌ಗಳನ್ನು ಆಮದು ಮಾಡಿಕೊಳ್ಳಲು ದೆಹಲಿ ಸರ್ಕಾರ ನಿರ್ಧರಿಸಿದೆ.

ಈ ಕುರಿತು ಮಂಗಳವಾರ ಡಿಜಿಟಲ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಲಭ್ಯವಿರುವ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ. ಕೇಂದ್ರ ಸರ್ಕಾರವು ನಿಗದಿಪಡಿಸಿದ ಆಮ್ಲಜನಕವೂ ಸಹ ಸಂಪೂರ್ಣವಾಗಿ ತಲುಪುತ್ತಿಲ್ಲ. ಆಮ್ಲಜನಕ ಪೂರೈಸುವ ಟ್ಯಾಂಕರ್‌ಗಳ ಕೊರತೆ ಎದುರಾಗಿದೆ ಎಂದರು.

ಸರ್ಕಾರ ಆಮ್ಲಜನಕವನ್ನು ಖರೀದಿಸಿದರೂ, ಟ್ಯಾಂಕರ್‌ಗಳ ಕೊರತೆಯಿಂದಾಗಿ ಅದನ್ನು ದೆಹಲಿಗೆ ಸಾಗಿಸುವುದು ಸಮಸ್ಯೆಯಾಗಿದೆ. ನಾಳೆಯಿಂದ ಬ್ಯಾಂಕಾಕ್‌ನಿಂದ 18 ಟ್ಯಾಂಕರ್‌ಗಳನ್ನು ಆಮದು ಮಾಡಿಕೊಳ್ಳಲು ದೆಹಲಿ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ನಾವು ವಾಯುಪಡೆಯ ವಿಮಾನಗಳನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ. ಕೇಂದ್ರದಿಂದ ಸೂಕ್ತ ಬೆಂಬಲ ದೊರೆಯುವ ನಿರೀಕ್ಷೆಯಿದೆ ಎಂದರು.

ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ ಇವುಗಳನ್ನು ಅಳವಡಿಸಲಾಗುವುದು, ಕನಿಷ್ಠ ಆ ಆಸ್ಪತ್ರೆಗಳಲ್ಲಿ ಸ್ಥಿರವಾದ ಆಮ್ಲಜನಕವನ್ನು ಪೂರೈಸಲಾಗುತ್ತದೆ ಎಂದು ಅವರು ಹೇಳಿದರು.

ದೆಹಲಿಗೆ 5 ಹೆಚ್ಚುವರಿ ಆಮ್ಲಜನಕ ಟ್ಯಾಂಕರ್‌ಗಳನ್ನು ಮಂಜೂರು ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ಅವರು, ಮುಂದಿನ ಒಂದು ತಿಂಗಳಲ್ಲಿ ದೆಹಲಿ ಸರ್ಕಾರವು ದೆಹಲಿಯಲ್ಲಿ 44 ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಿದ್ದು, ಈ ಪೈಕಿ 8 ಸ್ಥಾವರಗಳನ್ನು ಕೇಂದ್ರ ಸರ್ಕಾರ ಸ್ಥಾಪಿಸಲಿದೆ ಎಂದು ಹೇಳಿದರು.

ಕೊರೋನಾ ಎರಡನೇ ಅಲೆ ಅತ್ಯಂತ ಅಪಾಯಕಾರಿಯಾಗಿದ್ದು, ಇದನ್ನು ಎದುರಿಸಲು ಮೇ 10 ರೊಳಗೆ ದೆಹಲಿಯ ಆಸ್ಪತ್ರೆಗಳಿಗೆ 1200 ಹಾಸಿಗೆಗಳನ್ನು ಸೇರಿಸಲಾಗುವುದು ಮತ್ತು ರಾಮ್‌ಲೀಲಾ ಮೈದಾನವನ್ನು ಐಸಿಯು ಬೆಡ್ ಸೆಂಟರ್ ಆಗಿ ಪರಿವರ್ತಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com