ರಾಷ್ಟ್ರೀಯ ಅಗತ್ಯದ ದೃಷ್ಟಿಯಿಂದ ಟುಟಿಕೋರಿನ್ ನ ವೇದಾಂತ ಆಕ್ಸಿಜನ್ ಪ್ಲಾಂಟ್ ಕಾರ್ಯನಿರ್ವಹಣೆಗೆ ಸುಪ್ರೀಂ ಕೋರ್ಟ್ ಅವಕಾಶ

ಮುಚ್ಚಲ್ಪಟ್ಟಿರುವ ತಮಿಳುನಾಡಿನ ಟುಟಿಕೋರಿನ್ ನಲ್ಲಿರುವ ವೇದಾಂತ ಆಕ್ಸಿಜನ್ ಪ್ಲಾಂಟ್ ಕಾರ್ಯ ನಿರ್ವಹಿಸಲು ಸುಪ್ರೀಂಕೋರ್ಟ್ ಮಂಗಳವಾರ ಅವಕಾಶ ನೀಡಿದೆ. ಆಮ್ಲಜನಕಕ್ಕಾಗಿ ರಾಷ್ಟ್ರೀಯ ಅಗತ್ಯದ ದೃಷ್ಟಿಯಿಂದ ಈ ಆದೇಶವನ್ನು ನೀಡಿರುವುದಾಗಿ ಉನ್ನತ ನ್ಯಾಯಾಲಯ ತಿಳಿಸಿದೆ.
ಸ್ಟರ್ಲೈಟ್ ಇಂಡಸ್ಟ್ರೀಸ್ ಲಿಮಿಟೆಡ್
ಸ್ಟರ್ಲೈಟ್ ಇಂಡಸ್ಟ್ರೀಸ್ ಲಿಮಿಟೆಡ್

ನವದೆಹಲಿ: ಮುಚ್ಚಲ್ಪಟ್ಟಿರುವ ತಮಿಳುನಾಡಿನ ಟುಟಿಕೋರಿನ್ ನಲ್ಲಿರುವ ವೇದಾಂತ ಆಕ್ಸಿಜನ್ ಪ್ಲಾಂಟ್ ಕಾರ್ಯ ನಿರ್ವಹಿಸಲು ಸುಪ್ರೀಂಕೋರ್ಟ್ ಮಂಗಳವಾರ ಅವಕಾಶ ನೀಡಿದೆ. ಆಮ್ಲಜನಕಕ್ಕಾಗಿ ರಾಷ್ಟ್ರೀಯ ಅಗತ್ಯದ ದೃಷ್ಟಿಯಿಂದ ಈ ಆದೇಶವನ್ನು ನೀಡಿರುವುದಾಗಿ ಉನ್ನತ ನ್ಯಾಯಾಲಯ ತಿಳಿಸಿದೆ.

ವೇದಾಂತ ಪ್ಲಾಂಟ್ ತಾಮ್ರ ಕರಗಿಸುವ ಘಟಕವನ್ನು ತೆರೆಯಲು ಮತ್ತು ಕಾರ್ಯನಿರ್ವಹಿಸಲು ಈ ಆದೇಶ ಅನುಮತಿಸಿಲ್ಲ ಎಂದು ಜಸ್ಟೀಸ್ ಡಿವೈ ಚಂದ್ರಚೂಡ್, ಎಲ್, ನಾಗೇಶ್ವರ ರಾವ್ ಮತ್ತು ಎಸ್. ರವೀಂದ್ರ ಭಟ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ತಿಳಿಸಿದೆ.

ದೇಶ ರಾಷ್ಟ್ರೀಯ ಬಿಕ್ಕಟ್ಟನ್ನು ಎದುರಿಸುತ್ತಿರುವುದರಿಂದ ವೇದಾಂತ ಪ್ಲಾಂಟ್ ನಿಂದ ಆಕ್ಸಿಜನ್  ಉತ್ಪಾದನೆ ವಿಚಾರದಲ್ಲಿ ರಾಜಕೀಯ ಗಲಾಟೆಗಳು ನಡೆಯಬಾರದು, ವೇದಾಂತ ಆಕ್ಸಿಜನ್ ಪ್ಲಾಂಟ್  ಕಾರ್ಯನಿರ್ವಹಣೆಗೆ ಅನುವು ಮಾಡುವ ಈ ಆದೇಶ ಯಾರ ಪರವಾಗಿಯೂ ಇಲ್ಲ ಎಂದು  ಸುಪ್ರೀಂಕೋರ್ಟ್ ಹೇಳಿದೆ.

ವೇದಾಂತ ಆಕ್ಸಿಜನ್ ಪ್ಲಾಂಟ್ ನ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಜಿಲ್ಲಾಧಿಕಾರಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನೊಳಗೊಂಡ ಸಮಿತಿಯೊಂದನ್ನು ರಚಿಸುವಂತೆ ಸುಪ್ರೀಂಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ.

ಮಾಲಿನ್ಯ ಕಾರಣದಿಂದ ಮೇ 2018 ರಿಂದ ವೇದಾಂತ ಆಕ್ಸಿಜನ್ ಪ್ಲಾಂಟ್ ಮುಚ್ಚಲ್ಪಟ್ಟಿದ್ದು, ಜನ ಆಕ್ಸಿಜನ್ ಕೊರತೆಯಿಂದ ಸಾಯುತ್ತಿರುವಾಗ ಇನ್ನೂ ಏಕೆ ಟುಟಿಕೋರಿನಲ್ಲಿರುವ ವೇದಾಂತ  ಆಕ್ಸಿಜನ್ ಪ್ಲಾಂಟನ್ನು ವಶಕ್ಕೆ ಪಡೆದಿಲ್ಲ ಎಂದು ಏಪ್ರಿಲ್ 23 ರಂದು ತಮಿಳುನಾಡು ಸರ್ಕಾರವನ್ನು ಸುಪ್ರೀಂಕೋರ್ಟ್ ಕೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com