9 ತಿಂಗಳ ತುಂಬು ಗರ್ಭಿಣಿ ಮಹಿಳೆಗೆ ರಕ್ತದಾನ ಮಾಡಲು 2 ಗಂಟೆ ಪ್ರಯಾಣ ಮಾಡಿದ 22 ವರ್ಷದ ಯುವತಿ!

9 ತಿಂಗಳ ತುಂಬು ಗರ್ಭಿಣಿ ಮಹಿಳೆ ಜೀವ ರಕ್ಷಣೆಗೆ 22 ವರ್ಷದ ಯುವತಿಯೊಬ್ಬರು 2 ಗಂಟೆ ಪ್ರಯಾಣ ಮಾಡಿ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೈದರಾಬಾದ್: 9 ತಿಂಗಳ ತುಂಬು ಗರ್ಭಿಣಿ ಮಹಿಳೆ ಜೀವ ರಕ್ಷಣೆಗೆ 22 ವರ್ಷದ ಯುವತಿಯೊಬ್ಬರು 2 ಗಂಟೆ ಪ್ರಯಾಣ ಮಾಡಿ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ 9 ತಿಂಗಳ ತುಂಬು ಗರ್ಭಿಣಿ ಮಹಿಳೆ ಜೀವ ರಕ್ಷಣೆಗೆ 22 ವರ್ಷದ ಯುವತಿಯೊಬ್ಬರು 2 ಗಂಟೆ ಪ್ರಯಾಣ ಮಾಡಿ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಿ ಗಮನ ಸೆಳೆದಿದ್ದಾರೆ. 22 ವರ್ಷದ ರವಳಿ ತಿಕ್ಕಾ  ಎಂಬ ಯುವತಿ ಈ ಸಾಹಸದ ಕಾರ್ಯ ಮಾಡಿದ್ದು, ಒಂಬತ್ತು ತಿಂಗಳ ಗರ್ಭಿಣಿ ವಜೀರಾ ಮಹಿಳೆಗೆ ರಕ್ತದಾನ ಮಾಡಿ ಜೀವ ರಕ್ಷಣೆ ಮಾಡಿದ್ದಾರೆ.

ವಜೀರಾ ಅವರ ಪತಿ ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ಬಳಿಕ ವಜೀರಾ ಆರೋಗ್ಯದಲ್ಲಿ ಕೂಡ ಏರುಪೇರಾಗಿತ್ತು. ಹೀಗಾಗಿ ಅವರಿಗೆ ರಕ್ತದ ಅವಶ್ಯಕತೆ ಇತ್ತು. ಆದರೆ ತುರ್ತು ಸಂದರ್ಭದಲ್ಲಿ ರಕ್ತ ಸಿಗಲಿಲ್ಲ. ಬ್ಲಡ್ ಬ್ಯಾಂಕ್ ಗಳಲ್ಲೂ ರಕ್ತ ಖಾಲಿಯಾಗಿತ್ತು. ಬೇರೆ ಸಂಘ ಸಂಸ್ಥೆಗಳಿಗೆಲ್ಲಾ ಕರೆ ಮಾಡಿದ್ದೆವು. ಆದರೆ ಎಲ್ಲೂ  ನಮಗೆ ನೆರವು ಸಿಗಲಿಲ್ಲ. ನಾವು ಎಲ್ಲ ರೀತಿಯ ಭರವಸೆ ಕಳೆದುಕೊಂಡಾಗ ವಾಟ್ಸಪ್ ನಲ್ಲೂ ನಾವು ಮನವಿ ಮಾಡಿದ್ದೆವು. ಈ ವೇಳೆ ಒಂದು ಪ್ರತಿಕ್ರಿಯೆ ಬಂದಿತ್ತು. ಅದು ರವಳಿ ಅವರದ್ದು ಎಂದು 26 ವರ್ಷದ ಜಿ ಪ್ರಶಾಂತ್ ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿದ ರವಳಿ ಅವರು, ಎಲ್ಲಕ್ಕಿಂತ ಜೀವ ಮುಖ್ಯ. ವಾಟ್ಸಪ್ ನಲ್ಲಿ ರಕ್ತ ಬೇಕಿದೆ ಎಂದು ಮಾಹಿತಿ ಬಂದಾಗ ಆ ಸುದ್ದಿಯನ್ನು ನೋಡಿದ್ದೆ. ಪರಿಸ್ಥಿತಿ ಅರ್ಥವಾಗಿತ್ತು. ಹೀಗಾಗಿ ನಾನು ಮುಲುಗುಗೆ ತೆರಳಲು ಸಿದ್ಧಳಾದೆ. ಆದರೆ ಕೋವಿಡ್ ಸೋಂಕಿನಿಂದಾಗಿ ನಾನು ಪ್ರಯಾಣ ಬೆಳೆಸಲು  ಪೋಷಕರು ವಿರೋಧಿಸಿದ್ದರು. ಆದರೆ ನಾನು ರಕ್ತದಾನ ಮಾಡಲು ನಿರ್ಧರಿಸಿದ್ದೆ. ಹೀಗಾಗಿ ನನ್ನ ಪೋಷಕರನ್ನು ಸಮಾಧಾನಗೊಳಿಸಿ ಪ್ರಯಾಣಕ್ಕೆ ಒಪ್ಪಿಸಿದ್ದೆ. ನಾನು ಮತ್ತು ನನ್ನ ಪೋಷಕರು ಖಾಸಗಿ ಬಸ್ ನಲ್ಲು ಮುಲುಗುಗೆ ಬಂದು ಆಸ್ಪತ್ರೆಗೆ ಬಂದು ರಕ್ತದಾನ ಮಾಡಿದೆವು. ಇದು ನನ್ನ ಮೊದಲ ರಕ್ತದಾನವಾಗಿದ್ದು,  ಅದರಲ್ಲೂ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ರಕ್ತದಾನ ಮಾಡಿದ್ದು ಖುಷಿ ನೀಡಿದೆ. 

ಇನ್ನು ವ್ಯಾಕ್ಸಿನೇಷನ್ ತೆಗೆದುಕೊಂಡು 28 ದಿನಗಳನ್ನು ಪೂರೈಸದ ಜನರು ರಕ್ತದಾನ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿಯೇ ಹೆಚ್ಚಿನ ರಕ್ತ ಬ್ಯಾಂಕುಗಳು ಕೊರತೆಯನ್ನು ಎದುರಿಸುತ್ತಿವೆ ಎಂದು ತೆಲಂಗಾಣ ಬ್ಲಡ್ ಬ್ಯಾಂಕ್ ಸೊಸೈಟಿಯ ಅಧ್ಯಕ್ಷ ಎಸ್. ಸಾಯಿ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com