'ಗಾಬರಿ ಹುಟ್ಟಿಸಿದೆ': ಆಮ್ಲಜನಕ, ಲಸಿಕೆ ಕೊರತೆಯಿಲ್ಲ ಎಂಬ ಡಾ. ಹರ್ಷವರ್ಧನ್‌ ಹೇಳಿಕೆಗೆ ಚಿದಂಬರಂ ಕಿಡಿ

ದೇಶದಲ್ಲಿ ಆಮ್ಲಜನಕ ಅಥವಾ ಲಸಿಕೆಗಳ ಕೊರತೆಯಿಲ್ಲ ಎಂಬ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರ ಹೇಳಿಕೆಯಿಂದ ತಮಗೆ ಗಾಬರಿಯಾಗಿದೆ ಎಂದಿರುವ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಕಿಡಿಕಾರಿದ್ದಾರೆ.
ಪಿ ಚಿದಂಬರಂ
ಪಿ ಚಿದಂಬರಂ

ನವದೆಹಲಿ: ದೇಶದಲ್ಲಿ ಆಮ್ಲಜನಕ ಅಥವಾ ಲಸಿಕೆಗಳ ಕೊರತೆಯಿಲ್ಲ ಎಂಬ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರ ಹೇಳಿಕೆಯಿಂದ ತಮಗೆ ಗಾಬರಿಯಾಗಿದೆ ಎಂದಿರುವ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಕಿಡಿಕಾರಿದ್ದಾರೆ.

ಹಾಗಿದಲ್ಲಿ ಎಲ್ಲಾ ವಿದ್ಯುನ್ಯಾನ ಮಾಧ್ಯಮಗಳು ತಪ್ಪಾಗಿ  ಪ್ರಸಾರ ಮಾಡುತ್ತಿವೆಯೇ ಮತ್ತು ಎಲ್ಲಾ ಪತ್ರಿಕೆ ವರದಿಗಳು ಸುಳ್ಳೇ ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.

ತಮ್ಮ ಸರಣಿ ಟ್ವೀಟ್‌ಗಳಲ್ಲಿ ಚಿದಂಬರಂ, "ಆಮ್ಲಜನಕ ಅಥವಾ ಲಸಿಕೆಗಳು ಅಥವಾ ರೆಮೆಡೆಸಿವಿರ್ ಕೊರತೆಯಿಲ್ಲ ಎಂಬ ಕೇಂದ್ರ ಆರೋಗ್ಯ ಸಚಿವರ ಹೇಳಿಕೆಯಿಂದ ನಾನು ದಿಗಿಲುಗೊಂಡಿದ್ದೇನೆ" ಎಂದಿದ್ದಾರೆ.

"ಉತ್ತರಪ್ರದೇಶದಲ್ಲಿ ಲಸಿಕೆಗಳ ಕೊರತೆಯಿಲ್ಲ ಎಂಬ ಅಲ್ಲಿನ ಮುಖ್ಯಮಂತ್ರಿಯ ಹೇಳಿಕೆ ಅಚ್ಚರಿ ಮೂಡಿಸುತ್ತಿದೆ. ಹಾಗಿದ್ದಲ್ಲಿ, ಎಲ್ಲಾ ದೂರದರ್ಶನ ಚಾನೆಲ್‌ಗಳು ನಕಲಿ ದೃಶ್ಯಗಳನ್ನು ಪ್ರಸಾರ ಮಾಡುತ್ತಿವೆ ಮತ್ತು ಎಲ್ಲಾ ಪತ್ರಿಕೆ ಕಥೆಗಳು ತಪ್ಪಾಗಿವೆಯೇ ಎಂದು ಅವರು ಪ್ರಶ್ನಿಸಿದರು.

"ಎಲ್ಲಾ ವೈದ್ಯರು ಸುಳ್ಳು ಹೇಳುತ್ತಾರೆಯೇ? ಕುಟುಂಬದವರೆಲ್ಲರೂ ಸುಳ್ಳು ಹೇಳಿಕೆ ನೀಡುತ್ತಾರೆಯೇ? ಎಲ್ಲಾ ದೃಶ್ಯಗಳು ಮತ್ತು ಛಾಯಾಚಿತ್ರಗಳು ನಕಲಿಯೇ? ಎಂದು ಕಿಡಿಕಾರಿದರು.

ದೇಶದಲ್ಲಿ ಆಮ್ಲಜನಕ ಅಥವಾ ಲಸಿಕೆಗಳ ಕೊರತೆಯಿಲ್ಲ ಎಂದು ಡಾ.ಹರ್ಷವರ್ಧನ್ ಹೇಳಿದ್ದಾರೆ ಎಂದು ಕೆಲವು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com