ಸೆರಂ ಇನ್ಸ್ಟಿಟ್ಯೂಟ್, ಭಾರತ್ ಬಯೋಟೆಕ್ ಲಸಿಕೆ ದರ ಪ್ರತಿ ಡೋಸ್ ಗೆ 150 ರೂ. ನಿಗದಿಪಡಿಸಿ: ಮುಂಬೈ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್-19 ಲಸಿಕೆಗಳಿಗೆ ವಿವಿಧ ದರ ನಿಗದಿಪಡಿಸಿರುವುದನ್ನು ಪ್ರಶ್ನಿಸಿ ಮುಂಬೈ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. 
ಕೋವಿಶೀಲ್ಡ್ ಮತ್ತು ಕೊವಾಕ್ಸಿನ್
ಕೋವಿಶೀಲ್ಡ್ ಮತ್ತು ಕೊವಾಕ್ಸಿನ್

ಮುಂಬೈ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್-19 ಲಸಿಕೆಗಳಿಗೆ ವಿವಿಧ ದರ ನಿಗದಿಪಡಿಸಿರುವುದನ್ನು ಪ್ರಶ್ನಿಸಿ ಮುಂಬೈ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಸೆರಂ ಇನ್ಸ್ ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳು ಸಮಾನ ದರದಲ್ಲಿ ಪ್ರತಿ ಡೋಸ್ ಗೆ 150 ರೂಪಾಯಿಗಳಂತೆ ಲಸಿಕೆಗಳನ್ನು ಮಾರಾಟ ಮಾಡಲು ಆದೇಶ ನೀಡಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

ಅಡ್ವೊಕೇಟ್ ಫೈಜಾನ್ ಖಾನ್ ಮತ್ತು ಮೂವರು ಕಾನೂನು ವಿದ್ಯಾರ್ಥಿಗಳು ಮುಂಬೈ ಹೈಕೋರ್ಟ್ ನಲ್ಲಿ ಮೊನ್ನೆ 24ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಈ ಕೊರೋನಾ ಸೋಂಕಿನ ಸಮಯದಲ್ಲಿ ಲಸಿಕೆ ಅತ್ಯಂತ ಅಮೂಲ್ಯವಾದದ್ದು ಎಂದು ಹೇಳಲಾಗುತ್ತಿದ್ದು, ಅವುಗಳ ನಿರ್ವಹಣೆ ಮತ್ತು ವಿತರಣೆಯನ್ನು ಖಾಸಗಿ ಕಂಪೆನಿಗಳ ಕೈಗೆ ಬಿಟ್ಟುಬಿಡಬಾರದು, ಈ ಫಾರ್ಮ ಕಂಪೆನಿಗಳು ಕೋವಿಡ್-19 ಸಂಕಷ್ಟ ಕಾಲದಲ್ಲಿ ಮನಸೋ ಇಚ್ಛೆ ದರ ವಿಧಿಸುವ ಮೂಲಕ ಜನರ ಭೀತಿಯನ್ನು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳುತ್ತಿವೆ ಎಂದು ಅರ್ಜಿಯಲ್ಲಿ ದೂರಿದ್ದಾರೆ.

ಮುಂದಿನ ತಿಂಗಳು ಮೇ 1ರಂದು ದೇಶಾದ್ಯಂತ ಮೂರನೇ ಹಂತದ ಲಸಿಕಾ ಅಭಿಯಾನ ಆರಂಭವಾಗುತ್ತಿದೆ. ಖಾಸಗಿ ಫಾರ್ಮ ಕಂಪೆನಿಗಳು ತಮ್ಮ ಉತ್ಪಾದನೆಯ ಲಸಿಕೆಯ ಶೇಕಡಾ 50ನ್ನು ದರಕ್ಕೆ ಮತ್ತು ಉಳಿದ ಶೇಕಡಾ 50ನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಉಚಿತ ವಿತರಣೆಗೆ ನೀಡುತ್ತಿವೆ. ದೇಶದ ಜನರು ಕೊರೋನಾ ಸಂಕಷ್ಟ ಎದುರಿಸುತ್ತಿರುವಾಗ ಲಸಿಕೆಯ ಮೇಲೆ ಸರ್ಕಾರ ದರ ನಿಯಂತ್ರಣ ಮಾಡಬೇಕು. ಇಂತಹ ಲೂಟಿ, ಬೆದರಿಕೆ ತಂತ್ರಗಳಿಗೆ ಅವಕಾಶ ನೀಡಬಾರದು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

ಅರ್ಜಿ ವಿಚಾರಣೆಯನ್ನು ತುರ್ತಾಗಿ ನಡೆಸಬೇಕೆಂದು ಒತ್ತಾಯಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com