ಒತ್ತಡ: ವೈದ್ಯನಿಗೆ ಸಾರ್ವಜನಿಕವಾಗಿ ಕಪಾಳ ಮೋಕ್ಷ ಮಾಡಿದ ನರ್ಸ್; ವಿಡಿಯೋ ವೈರಲ್

ನರ್ಸ್ ಒಬ್ಬರು ವೈದ್ಯರಿಗೆ ಕಪಾಳ ಮೋಕ್ಷ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 
ಒತ್ತಡ: ವೈದ್ಯನಿಗೆ ಸಾರ್ವಜನಿಕವಾಗಿ ಕಪಾಳ ಮೋಕ್ಷ ಮಾಡಿದ ನರ್ಸ್: ವಿಡಿಯೋ ವೈರಲ್
ಒತ್ತಡ: ವೈದ್ಯನಿಗೆ ಸಾರ್ವಜನಿಕವಾಗಿ ಕಪಾಳ ಮೋಕ್ಷ ಮಾಡಿದ ನರ್ಸ್: ವಿಡಿಯೋ ವೈರಲ್

ರಾಮ್ ಪುರ: ನರ್ಸ್ ಒಬ್ಬರು ವೈದ್ಯರಿಗೆ ಕಪಾಳ ಮೋಕ್ಷ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 

ರಾಮ್ ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು ಮರಣ ಪ್ರಮಾಣ ಪತ್ರದ ವಿಷಯವಾಗಿ ವಾಗ್ವಾದ ನಡೆದ ಪರಿಣಾಮವಾಗಿ ನರ್ಸ್ ವೈದ್ಯರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ವರದಿಗಳ ಪ್ರಕಾರ ಅದಾಗಲೇ ರೋಗಿಗಳಿಂದ ತುಂಬಿದ್ದ ವೈದ್ಯರಿದ್ದ ಕೋಠಡಿಗೆ ಬಂದ ನರ್ಸ್ ಮೃತರೋರ್ವರ ಮರಣ ಪ್ರಮಾಣಪತ್ರ ನೀಡುವಂತೆ ಕೇಳಿದರು. 

ತಕ್ಷಣವೇ ಇಬ್ಬರ ನಡುವೆ ವಾಗ್ವಾದ ಪ್ರಾರಂಭವಾಯಿತು. ನರ್ಸ್ ವೈದ್ಯರ ಕಪಾಳಕ್ಕೆ ಹೊಡೆದಿದ್ದು, ವೈದ್ಯರೂ ನರ್ಸ್ ಗೆ ಹೊಡೆದಿದ್ದಾರೆ. ಈ ಘಟನಾವಳಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗತೊಡಗಿದೆ. 

ಸೋಮವಾರದಂದು ಈ ಘಟನೆ ನಡೆದರೂ ಈ ವರೆಗೂ ರಾಮ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಆದರೂ ಜಿಲ್ಲಾ ನ್ಯಾಯಾಧಿಕಾರಿಗಳಾದ ರವೀಂದ್ರ ಕುಮಾರ್ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. "ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಅತಿಯಾದ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಈ ರೀತಿಯ ಘಟನೆ ನಡೆದಿದೆ" ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com