ಸೆರಂ ನಂತರ ರಾಜ್ಯಗಳಿಗೆ ಕೋವಿಡ್ ಲಸಿಕೆ ಬೆಲೆ ಕಡಿತಗೊಳಿಸಿದ ಭಾರತ್ ಬಯೋಟೆಕ್

ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ನಂತರ ಭಾರತ್ ಬಯೋಟೆಕ್ ಸಹ ರಾಜ್ಯಗಳಿಗೆ ತನ್ನ ಕೋವಿಡ್ -19 ಲಸಿಕೆ 'ಕೋವಾಕ್ಸಿನ್' ಬೆಲೆಯನ್ನು ಕಡಿತಗೊಳಿಸಿರುವುದಾಗಿ ಗುರುವಾರ ಪ್ರಕಟಿಸಿದೆ.
ಕೋವಾಕ್ಸಿನ್ ಸಾಂದರ್ಭಿಕ ಚಿತ್ರ
ಕೋವಾಕ್ಸಿನ್ ಸಾಂದರ್ಭಿಕ ಚಿತ್ರ

ನವದೆಹಲಿ: ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ನಂತರ ಭಾರತ್ ಬಯೋಟೆಕ್ ಸಹ ರಾಜ್ಯಗಳಿಗೆ ತನ್ನ ಕೋವಿಡ್ -19 ಲಸಿಕೆ 'ಕೋವಾಕ್ಸಿನ್' ಬೆಲೆಯನ್ನು ಕಡಿತಗೊಳಿಸಿರುವುದಾಗಿ ಗುರುವಾರ ಪ್ರಕಟಿಸಿದೆ.

ಈ ಹಿಂದೆ ಭಾರತ್ ಬಯೋಟೆಕ್ ರಾಜ್ಯಗಳಿಗೆ ಲಸಿಕೆಯ ಬೆಲೆ ಪ್ರತಿ ಡೋಸ್ ಗೆ 600 ರೂ.ನಿಗದಿಪಡಿಸಿತ್ತು. ಈಗ ಅದನ್ನು 400 ರೂ.ಗೆ ಮಾರಾಟ ಮಾಡಲು ಯೋಜಿಸಿದೆ.

ಕೋವಾಕ್ಸಿನ್ ಅನ್ನು ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್‌ಗೆ 150 ರೂ.ಗೆ ಮಾರಾಟ ಮಾಡಿದ್ದರಿಂದ ಇದು ಅದರ ಬೆಲೆ ನೀತಿಯ ಬಗ್ಗೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈಗ "ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿನ ಅಗಾಧ ಸವಾಲುಗಳನ್ನು ಗುರುತಿಸಿ, ನಾವು ಕೋವಾಕ್ಸಿನ್ ಅನ್ನು ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್ 400 ರೂ. ಬೆಲೆಗೆ ಲಭ್ಯಗೊಳಿಸಿದ್ದೇವೆ" ಎಂದು ಭಾರತ್ ಬಯೋಟೆಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸೆರಂ ಇನ್‌ಸ್ಟಿಟ್ಯೂಟ್ ಈ ಹಿಂದೆ ತಾನು ತಯಾರಿಸುವ ಕೋವಿಶೀಲ್ಡ್ ಲಸಿಕೆಯ ಪ್ರತಿ ಡೋಸ್ ಗೆ 400 ಬೆಲೆ ನಿಗದಿಪಡಿಸಿತ್ತು. ಆದರೆ ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತು ಕೇಂದ್ರ ಸರ್ಕಾರ ಸಹ ಬೆಲೆ ಕಡಿತಗೊಳಿಸುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ ನಿನ್ನೆ ರಾಜ್ಯಗಳಿಗೆ ಪ್ರತಿ ಡೋಸ್‌ಗೆ 300 ರೂ.ಗೆ ಮಾರಾಟ ಮಾಡುವುದಾಗಿ ಪ್ರಕಟಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com