ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋವಿಡ್-19: ಆಕ್ಸಿಜನ್ ಬದಲಿಗೆ ಅಗ್ನಿ ನಿರೋಧಕ ಸಿಲಿಂಡರ್ ಮಾರಾಟ ಮಾಡಿದ್ದ ಇಬ್ಬರು ವಂಚಕರ ಬಂಧನ

ಕೋವಿಡ್-19 ಪಾಸಿಟಿವ್ ಬಂದಿದ್ದ ಸಂಬಂಧಿಕರೊಬ್ಬರಿಗೆ ಆಕ್ಸಿಜನ್ ಸಿಲಿಂಡರ್ ಕೇಳಿದ್ದ ಮಹಿಳೆಗೆ ಅಗ್ನಿ ನಿರೋಧಕ ಸಿಲಿಂಡರ್ ಮಾರಾಟ ಮಾಡಿ ವಂಚಿಸಿದ ಆರೋಪದ ಮೇರೆಗೆ ಇಬ್ಬರು ವ್ಯಕ್ತಿಗಳನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ನವದೆಹಲಿ: ಕೋವಿಡ್-19 ಪಾಸಿಟಿವ್ ಬಂದಿದ್ದ ಸಂಬಂಧಿಕರೊಬ್ಬರಿಗೆ ಆಕ್ಸಿಜನ್ ಸಿಲಿಂಡರ್ ಕೇಳಿದ್ದ ಮಹಿಳೆಗೆ ಅಗ್ನಿ ನಿರೋಧಕ ಸಿಲಿಂಡರ್ ಮಾರಾಟ ಮಾಡಿ ವಂಚಿಸಿದ ಆರೋಪದ ಮೇರೆಗೆ ಇಬ್ಬರು ವ್ಯಕ್ತಿಗಳನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ವಿಕಾಸ್ ಪುರಿ ನಿವಾಸಿಗಳಾದ ಅಶುತೋಷ್ (19) ಮತ್ತು ಆಯುಷ್ ( 22) ಬಂಧಿತ ಆರೋಪಿಗಳು. ಅವರನ್ನು ಪಶ್ಚಿಮ ದೆಹಲಿಯ ಉತ್ತಮ್ ನಗರದಿಂದ ಬಂಧಿಸಲಾಗಿದೆ. ಅವರಿಂದ ಐದು ಅಗ್ನಿ ನಿರೋಧಕ ಸಿಲಿಂಡರ್ ವಶಕ್ಕೆ ಪಡೆಯಲಾಗಿದೆ. ಆಕ್ಸಿಜನ್ ಸಿಲಿಂಡರ್ ಎಂದು ನಂಬಿಸಿ 10 ಸಾವಿರ ರೂ. ಗೆ ಅಗ್ನಿ ನಿರೋಧಕ ಸಿಲಿಂಡರ್ ಮಾರಾಟ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಸಿಜನ್ ಬದಲಿಗೆ ಅಗ್ನಿ ನಿರೋಧಕ ಸಿಲಿಂಡರ್ ಮಾರಾಟ ಮಾಡಿರುವ ಬಗ್ಗೆ ಬಿಂದಾಪುರದ ಶಿಶ್ರಾಮ್ ಪಾರ್ಕ್ ನಿವಾಸಿ ಗೀತಾ ಅರೋರಾ ಎಂಬವರು ದೂರು ನೀಡಿದ್ದಾಗಿ ದ್ವಾರದ ಡಿಸಿಪಿ ಸಂತೋಷ್  ಕುಮಾರ್ ಮೀನಾ ತಿಳಿಸಿದ್ದಾರೆ.

ಆಕೆಯ ಸಂಬಂಧಿ ಕೋವಿಡ್-19 ನಿಂದ ಆಕ್ಸಿಜನ್ ಮಟ್ಟ ಕಡಿಮೆಯಾಗಿ ಉಸಿರಾಟ ಸಮಸ್ಯೆಯಿಂದ ನರಳುತ್ತಿದ್ದಾಗ ಆಕ್ಸಿಜನ್ ಸಿಲಿಂಡರ್ ಗಾಗಿ ವಂಚಕರ ಸಂಪರ್ಕಕ್ಕೆ ಬಂದಿದ್ದಾರೆ. ನಂತರ ಅವರನ್ನು ಸಂಪರ್ಕಿಸಿ ಮತ್ತೆ ತನ್ನ ಹಣವನ್ನು ಕೇಳಿದಾಗ ಆಕೆಯ ಫೋನ್ ಕರೆಯನ್ನು ಅವರು ಸ್ವೀಕರಿಸುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಐಪಿಸಿ ಸೆಕ್ಷನ್ ಅನ್ವಯ ದೂರು ದಾಖಲಿಸಿಕೊಂಡು, ವಿಶೇಷ ತಂಡ ಆರೋಪಿಗಳ ಜಾಡು  ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು  ಮೀನಾ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com