ಕೋವಿಡ್ ನಿಂದ ಚೇತರಿಕೆ: ಡಾ. ಮನ್ ಮೋಹನ್ ಸಿಂಗ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ಕೋವಿಡ್-19 ನಿಂದ ಚೇತರಿಸಿಕೊಂಡಿರುವ ಮಾಜಿ ಪ್ರಧಾನಿ ಡಾ. ಮನ್ ಮೋಹನ್ ಸಿಂಗ್  ಗುರುವಾರ ಏಮ್ಸ್ ನ ಟ್ರಾಮ ಸೆಂಟರ್ ನಿಂದ ಡಿಸ್ಚಾರ್ಜ್ ಆಗಿದ್ದಾರೆ.
ಡಾ.ಮನ್ ಮೋಹನ್ ಸಿಂಗ್
ಡಾ.ಮನ್ ಮೋಹನ್ ಸಿಂಗ್

ನವದೆಹಲಿ: ಕೋವಿಡ್-19 ನಿಂದ ಚೇತರಿಸಿಕೊಂಡಿರುವ ಮಾಜಿ ಪ್ರಧಾನಿ ಡಾ. ಮನ್ ಮೋಹನ್ ಸಿಂಗ್  ಗುರುವಾರ ಏಮ್ಸ್ ನ ಟ್ರಾಮ ಸೆಂಟರ್ ನಿಂದ ಡಿಸ್ಚಾರ್ಜ್ ಆಗಿದ್ದಾರೆ.

ಹಿರಿಯ ಕಾಂಗ್ರೆಸ್ ಮುಖಂಡರಾಗಿರುವ ಡಾ.ಮನ್ ಮೋಹನ್ ಸಿಂಗ್ ಅವರಿಗೆ ಏಪ್ರಿಲ್ 19 ರಂದು ಕೋವಿಡ್-19 ಪಾಸಿಟಿವ್ ಕಾಣಿಸಿಕೊಂಡಿತ್ತು. ತದ ನಂತರ ಅವರು ಏಮ್ಸ್ ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.

ಸುಮಾರು ಹತ್ತು ದಿನಗಳ ಬಳಿಕ ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, ಕೋವಿಡ್-19 ನೆಗೆಟಿವ್ ವರದಿ ಬಂದ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.  

88 ವರ್ಷದ ಡಾ. ಮನ್ ಮೋಹನ್ ಸಿಂಗ್ ಕೋವಿಡ್-19 ನಿಂದ ಚೇತರಿಕೆಯಾಗಿರುವುದು ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂತಸವನ್ನುಂಟುಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com