ದೇಶದ ಎಲ್ಲ ನಾಗರಿಕರಿಗೂ ಕಡ್ಡಾಯವಾಗಿ ಉಚಿತ ಕೋವಿಡ್ ಲಸಿಕೆ ನೀಡಬೇಕು: ರಾಹುಲ್ ಗಾಂಧಿ

ದೇಶದ ಎಲ್ಲ ನಾಗರಿಕರಿಗೂ ಕಡ್ಡಾಯವಾಗಿ ಉಚಿತ ಕೋವಿಡ್ ಲಸಿಕೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ದೇಶದ ಎಲ್ಲ ನಾಗರಿಕರಿಗೂ ಕಡ್ಡಾಯವಾಗಿ ಉಚಿತ ಕೋವಿಡ್ ಲಸಿಕೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಕೋವಿಡ್ ಲಸಿಕೆಗೆ ಹಣ ನೀಡುವ ಅವಶ್ಯಕತೆ ಇರಬಾರದು. ಭಾರತದ ಪ್ರತೀಯೊಬ್ಬ ಭಾರತೀಯನಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಬೇಕು. ಈ ಭಾರಿ ಅದು ಸಾಧ್ಯವಾಗುತ್ತದೆ ಎಂದು ಭಾವಿಸೋಣ ಎಂದು ಹೇಳಿದ್ದಾರೆ. 

ಇದೇ ವಿಚಾರವಾಗಿ ಬುಧವಾರ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಕೋವಿಡ್ ಲಸಿಕೆ ತಯಾರಿಸಲು ಲಸಿಕೆ ತಯಾರಿಕಾ ಸಂಸ್ಥೆಗಳಿಗೆ ಜನರ ಲಕ್ಷಾಂತರ ಕೋಟಿ ಹಣ ವ್ಯಯಿಸಲಾಗಿದೆ. ಈಗ ಮತ್ತೆ ಲಸಿಕೆಗಾಗಿ ಹಣ ಪಡೆಯುದು ಸರಿಯಲ್ಲ. ದುಬಾರಿ ಬೆಲೆಗೆ ಲಸಿಕೆ ಮಾರಾಟವಾಗುವ ಚರ್ಚೆಗಳು ನಡೆಯುತ್ತಿವೆ. ಆದರೆ  ದೇಶದಲ್ಲಿ ಕೋವಿಡ್ ಲಸಿಕೆ ಉಚಿತವಾಗಿ ವಿತರಣೆಯಾಗಬೇಕು ಎಂದು ಹೇಳಿದ್ದರು. 

ಏಪ್ರಿಲ್ 19 ರಂದು ಕೇಂದ್ರ ಸರ್ಕಾರ "ಉದಾರೀಕೃತ" ಕೋವಿಡ್ ಲಸಿಕೆ ನೀತಿಯನ್ನು ಘೋಷಿಸಿತ್ತು....ಮೇ 1 ರಿಂದ ಲಸಿಕೆ ಪಡೆಯಲು 18 ವರ್ಷಕ್ಕಿಂತ ಮೇಲ್ಪಟ್ಟವರೆಲ್ಲರೂ ಅರ್ಹರಾಗಿದ್ದಾರೆ. ಇದು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಉತ್ಪಾದಕರಿಂದ ಲಸಿಕೆಗಳನ್ನು ಖರೀದಿಸಲು ಅವಕಾಶ  ಮಾಡಿಕೊಟ್ಟಿದೆ. ಬುಧವಾರದಿಂದಲೇ ಅರ್ಹ ಫಲಾನುಭವಿಗಳು ಲಸಿಕೆ ಪಡೆಯಲು ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಕೋವಿನ್ ಪೋರ್ಟಲ್ ಅಥವಾ ಆರೋಗ್ಯ ಸೇತು ಆ್ಯಪ್ ಮೂಲಕ ನೋಂದಣಿ ಮಾಡಬಹುದಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com