ತೆಲಂಗಾಣ: ಕೋವಿಡ್ 2ನೇ ಅಲೆ ನಡುವೆ ನಗರ ಸ್ಥಳೀಯ ಸಂಸ್ಥೆ ಚುನಾವಣೆ, ಆಯೋಗಕ್ಕೆ ಹೈಕೋರ್ಟ್ ತರಾಟೆ!

ನಗರ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ  ತೆಲಂಗಾಣ ಹೈಕೋರ್ಟ್, ಕೋವಿಡ್-19 ಸಾಂಕ್ರಾಮಿಕದಿಂದ ಜನ  ಸಾಯುತ್ತಿರುವಾಗ ನಗರ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವುದೇ ಮುಖ್ಯವೇ ಎಂದು ಚುನಾವಣಾ ಆಯೋಗವನ್ನು ಗುರುವಾರ ತರಾಟೆಗೆ ತೆಗೆದುಕೊಂಡಿದೆ.
ಕೋವಿಡ್-19 ತಪಾಸಣೆ ಚಿತ್ರ
ಕೋವಿಡ್-19 ತಪಾಸಣೆ ಚಿತ್ರ

ಹೈದ್ರಾಬಾದ್: ನಗರ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ತೆಲಂಗಾಣ ಹೈಕೋರ್ಟ್, ಕೋವಿಡ್-19 ಸಾಂಕ್ರಾಮಿಕದಿಂದ ಜನ ಸಾಯುತ್ತಿರುವಾಗ  ನಗರ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವುದೇ ಮುಖ್ಯವೇ ಎಂದು ಚುನಾವಣಾ ಆಯೋಗವನ್ನು ಗುರುವಾರ ತರಾಟೆಗೆ ತೆಗೆದುಕೊಂಡಿದೆ.

ರಾಜ್ಯದಲ್ಲಿನ ಕೋವಿಡ್-19 ಪರಿಸ್ಥಿತಿ ವಿಚಾರಣೆ ವೇಳೆ, ಸರ್ಕಾರದೊಂದಿಗೆ ಸಮಾಲೋಚಿಸದೆ ರಾಜ್ಯ ಚುನಾವಣಾ ಆಯೋಗ ಏಕೆ ತಾನೇ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿತು. ಏಪ್ರಿಲ್ 30 ರಂದು ಎರಡು ಮುನ್ಸಿಪಲ್ ಕಾರ್ಪೋರೇಷನ್ ಹಾಗೂ ಐದು ಮುನ್ಸಿಪಾಲಿಟಿಗೆ ಚುನಾವಣೆ ನಿಗದಿಯಾಗಿದೆ

ರಾಜ್ಯ ಚುನಾವಣಾ ಆಯೋಗದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಾಲಯ, ಚುನಾವಣೆ ಅಥವಾ ಜನರ ಜೀವನ ಯಾವುದಕ್ಕೆ ಪ್ರಾಮುಖ್ಯತೆ ನೀಡಬೇಕು ಎಂಬುದನ್ನು ತಿಳಿಯಲು ಬಯಸಿದ ನ್ಯಾಯಾಲಯ, ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ಭೂಮಿ ಮೇಲಿದ್ದಾರಾ ಅಥವಾ ಆಕಾಶದಲ್ಲಿದ್ದಾರಾ ಎಂಬುದು ಗೊತ್ತಾಗಬೇಕಾಗಿದೆ ಎಂದು ಹೇಳಿತು.

ಕೋವಿಡ್-19 ಸಾಂಕ್ರಾಮಿಕ ಏರಿಕೆಯಾಗುತ್ತಿರುವಾಗ ಚುನಾವಣೆಗೆ ಅಧಿಸೂಚನೆ ಏಕೆ ಹೊರಡಿಬೇಕಿತ್ತು ಎಂದು ಪ್ರಶ್ನಿಸಿದ ನ್ಯಾಯಾಲಯ, ಸೋಂಕು ನಿಯಂತ್ರಣದಲ್ಲಿ ಸರ್ಕಾರ ಗಂಭೀರತೆ ವಹಿಸುತ್ತಿಲ್ಲ ಎಂದು ಆರೋಪಿಸಿತು. ವಾಸ್ತವತೆಯನ್ನು ಅರಿತು
ಸೋಂಕು ಹರಡದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಸಲಹೆ ನೀಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com