ಲಸಿಕೆಗಾಗಿ ಮೂರೇ ಗಂಟೆಯಲ್ಲಿ 80 ಲಕ್ಷಕ್ಕೂ ಹೆಚ್ಚು ಜನ ನೋಂದಣಿ, ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ ಸಮಸ್ಯೆ ಇಲ್ಲ: ಕೇಂದ್ರ

ದೇಶದಲ್ಲಿ ಮೇ 1ರಿಂದ ಮೂರನೇ ಹಂತದ ವ್ಯಾಕ್ಸಿನೇಷನ್ ಆರಂಭವಾಗುತ್ತಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಕೋವಿಡ್‌ ಲಸಿಕೆ ಪಡೆಯುವುದಕ್ಕಾಗಿ ಬುಧವಾರ ಮಧ್ಯಾಹ್ನ 4 ಗಂಟೆಯಿಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿ ಮೇ 1ರಿಂದ ಮೂರನೇ ಹಂತದ ವ್ಯಾಕ್ಸಿನೇಷನ್ ಆರಂಭವಾಗುತ್ತಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಕೋವಿಡ್‌ ಲಸಿಕೆ ಪಡೆಯುವುದಕ್ಕಾಗಿ ಬುಧವಾರ ಮಧ್ಯಾಹ್ನ 4 ಗಂಟೆಯಿಂದ ಕೋವಿನ್ ಅಪ್ಲಿಕೇಶನ್ ಮತ್ತು ಕೋವಿಡ್‌ ಪೋರ್ಟಲ್ ಮೂಲಕ  ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ.

ಇಂದು ಲಕ್ಷಾಂತರ ಜನ ಕೇಂದ್ರ ಸರ್ಕಾರ ನಿಗದಿಪಡಿಸಿದ ಕೋವಿನ್ ಮತ್ತು ಆರೋಗ್ಯ ಸೇತು ಆ್ಯಪ್ ಗಳಲ್ಲಿ ಲಸಿಕೆಗಾಗಿ ನೋಂದಣಿ ಮಾಡಿಸಿದ್ದಾರೆ. ಈ ವೇಳೆ ತಾವು ಎದುರಿಸಿದ ತಾಂತ್ರಿಕ ಸಮಸ್ಯೆಗಳ ಬಗ್ಗೆ ಅನೇಕ ಜನ ಸಾಮಾಜಿಕ ಮಾಧ್ಯಮಗಳಲ್ಲಿ ದೂರಿದ್ದಾರೆ.

ಹಲವು ಬಳಕೆದಾರರು ಆ್ಯಪ್ ಸರ್ವರ್ ಡೌನ್ ಆದ ಬಗ್ಗೆ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ ಮತ್ತು ಕೆಲವರು ನೋಂದಣಿಯ ಮೊದಲ ಮತ್ತು ಪ್ರಮುಖ ಹಂತದ ಒಟಿಪಿ ಪಡೆಯುವ ಪ್ರಕ್ರಿಯೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಸರ್ವರ್ ಕ್ರ್ಯಾಶ್ ಆಗಿದೆ ಎಂಬ ಮಾಧ್ಯಮ ವರದಿ "ತಪ್ಪು ಮತ್ತು ಯಾವುದೇ ಆಧಾರವಿಲ್ಲದ ವರದಿ" ಎಂದು ಹೇಳಿದೆ.

ಕೋವಿನ್ ಡಿಜಿಟಲ್ ಪೋರ್ಟಲ್ ಅನ್ನು ಬೆಂಬಲಿಸುವ ಸರ್ವರ್ ಅದರ ಅತ್ಯುನ್ನತ ದಕ್ಷತೆಯಲ್ಲಿ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಾಗಿ 18-44 ವಯಸ್ಸಿನವರು ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳುತ್ತಿದ್ದಾರೆ. ಮಧ್ಯಾಹ್ನ 4:00 ರಿಂದ 7:00 ಗಂಟೆಯವರೆಗೆ ಕೇವಲ 3 ಗಂಟೆಯಲ್ಲಿ 80 ಲಕ್ಷಕ್ಕೂ ಹೆಚ್ಚು ಜನ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com