ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್

ನ್ಯಾಯಾಲಯಗಳ ಮೌಖಿಕ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಬಾರದು: ಚುನಾವಣಾ ಆಯೋಗದ ಮನವಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್

ನ್ಯಾಯಾಲಯಗಳು ಮೌಖಿಕವಾಗಿ ಹೇಳಿದ್ದನ್ನು ಮಾಧ್ಯಮಗಳು ವರದಿ ಮಾಡಬಾರದೆಂದು ಕೋರ್ಟ್ ನಿರ್ದೇಶನ ಕೋರಿ ಭಾರತದ ಚುನಾವಣಾ ಆಯೋಗವು ಸಲ್ಲಿಸಿದ ಮನವಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ವಜಾಮಾಡಿದೆ.

ಚೆನ್ನೈ: ನ್ಯಾಯಾಲಯಗಳು ಮೌಖಿಕವಾಗಿ ಹೇಳಿದ್ದನ್ನು ಮಾಧ್ಯಮಗಳು ವರದಿ ಮಾಡಬಾರದೆಂದು ಕೋರ್ಟ್ ನಿರ್ದೇಶನ ಕೋರಿ ಭಾರತದ ಚುನಾವಣಾ ಆಯೋಗವು ಸಲ್ಲಿಸಿದ ಮನವಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ವಜಾಮಾಡಿದೆ.

ಸುಯೋ ಮೋಟು ಮನವಿಯ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್ಕುಮಾರ್ ರಾಮಮೂರ್ತಿ ಅವರನ್ನೊಳಗೊಂಡ ನ್ಯಾಯಪೀಠ ಭಾರತದ ಚುನಾವಣಾ ಆಯೋಗದ ಪರ  ರಾಕೇಶ್ ದ್ವಿವೇದಿ ಸಲ್ಲಿಸಿದ ಮನವಿಗೆ ಸಮ್ಮತಿಸಲು ನಿರಾಕರಿಸಿದೆ.

"ಯಾವುದನ್ನೂ ಸಂವೇದನಾಶೀಲಗೊಳಿಸದಂತೆ ಮಾಧ್ಯಮಗಳಿಗೆ ಸೂಚನೆ ನೀಡಬೇಕು, ಈ ಕಾಲದಲ್ಲಿ ಚುನಾವಣೆ ನಡೆಸುವುದು ಕಷ್ಟದ ಕೆಲಸ" ಎಂದು ದ್ವಿವೇದಿ ಮನವಿ ಸಲ್ಲಿಸಿದ್ದರು, ಆದರೆ, ನ್ಯಾಯಪೀಠವು "ನಾವು ಅದನ್ನು ಒಪ್ಪುವುದಿಲ್ಲ" ಎಂದು ಹೇಳಿದೆ.

ಕೋವಿಡ್ -19 ಎರಡನೇ ಅಲೆ ನಡುವೆ ನಡೆದ ಚುನಾವಣಾ ರ್ಯಾಲಿಗಳ ಬಗ್ಗೆ ಕಣ್ಣುಮುಚ್ಚಿ ಕುಳಿತಿದ್ದಕ್ಕಾಗಿ ಮದ್ರಾಸ್ ಹೈಕೋರ್ಟ್ ಸೋಮವಾರ " ಚುನಾವಣಾ  ಆಯೀಗದ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು" ಎಂದು ಮೌಖಿಕವಾಗಿ ಹೇಳಿತ್ತು. "ಕೆಲವು ಜನ ಚುನಾವಣಾ ಅಧಿಕಾರಿಗಳನ್ನು ಕೊಲೆಗಾರರು ಎಂದು ಕರೆಯುವುದರ ವಿರುದ್ಧ ಎಫ್ಐಆರ್ ದಾಖಲಿಸಲು ಮುಂದಾಗಿದ್ದಾರೆ, ಅಂತಹವರಿಗೆ ರಕ್ಷಣೆ ನೀಡಬಹುದೆ ಎಂದು ಆಯೋಗದ ಪರ ವಕೀಲರು ಅರ್ಜಿಯಲ್ಲಿ ಕೇಳಿದ್ದರು, ಅದಕ್ಕೆ ಸಮ್ಮತಿಸಲು ನಿರಾಕರಿಸಿದ ನ್ಯಾಯಪೀಠ, "ನ್ಯಾಯಾಲಯಗಳು ಅಂತಹ ಕ್ಷುಲ್ಲಕ ವಿಷಯಗಳನ್ನು ನಿಭಾಯಿಸಲು ಇರುವುದಲ್ಲ" ಎಂದು ಅಭಿಪ್ರಾಯಪಟ್ಟಿದೆ.

ಕೋವಿಡ್ -19 ಲಸಿಕೆಗಳನ್ನು ತೆಗೆದುಕೊಳ್ಳಲು ಜನರನ್ನು ಪ್ರೋತ್ಸಾಹಿಸಲು ರಾಜ್ಯವು ವಿಶೇಷ ಅಭಿಯಾನಗಳನ್ನುನಡೆಸಬೇಕೆಂದು ನ್ಯಾಯಪೀಠ ತನ್ನ ವಿಚಾರಣೆಯಲ್ಲಿ ಸೂಚಿಸಿದೆ. ಎಣಿಕೆ ದಿನದಂದು ಎಲ್ಲಾ ರಾಜಕೀಯ ಪಕ್ಷಗಳು ಕೋವಿಡ್ -19 ಪ್ರೋಟೋಕಾಲ್ ಅನ್ನು ಅನುಸರಿಸಬೇಕೆಂದು ನ್ಯಾಯಾಲಯವು ನಿರ್ದೇಶಿಸಿತು ಮತ್ತು ವಿಜಯೋತ್ಸವದ ಅಂಗವಾಗಿ ಮೆರವಣಿಗೆ, ಪಟಾಕಿ ಸಿಡಿಸಿ ಸಂಭ್ರಮಾಚರಣೆಗಳನ್ನು ನಡೆಸಬಾರದು ಎಂದು ಸೂಚಿಸಿದೆ.

ಮಧ್ಯಂತರ ಆದೇಶಗಳಲ್ಲಿ, ನ್ಯಾಯಪೀಠವು ".. ಅಂತರ್ಜಾಲ ಮತ್ತು ಇನ್ನಾವುದೇ ಮಾಧ್ಯಮದಲ್ಲಿ ಮಾಹಿತಿ ಲಭ್ಯವಾಗಬೇಕು ಆದ್ದರಿಂದ ಔಷಧ ಹುಡುಕುವುದರಲ್ಲಿ ಅಥವಾ ಆಮ್ಲಜನಕದ ಸರಬರಾಜುಗಳನ್ನು ಪಡೆಯುವಲ್ಲಿ ಅಥವಾ ಹತ್ತಿರದ ಬೆಡ್ ಉಪಲಭ್ಯತೆ ಕಂಡುಹಿಡಿಯುವಲ್ಲಿ ಯಾವುದೇ ಭೀತಿ ಉಂಟಾಗುವುದಿಲ್ಲ" ಎಂದು ಹೇಳಿದೆ. ಲಸಿಕೆ, ಔಷಧ ಪ್ರಮಾಣಗಳ  ಲಭ್ಯತೆಯ ಸ್ಪಷ್ಟ ಚಿತ್ರ ಮೇ 3 ರೊಳಗೆ ಲಭ್ಯವಾಗಲಿದೆ ಎಂದು ಕೇಂದ್ರ ಸರ್ಕಾರದ ಎಎಸ್‌ಜಿ ಆರ್ ಶಂಕರನಾರಾಯಣನ್ ಹೇಳೀದ್ದಾರೆ. ಈ ಕುರುತಂತೆ ಹೆಚ್ಚಿನ ಸಲಹೆಗಳಿಗಾಗಿ ನ್ಯಾಯಾಲಯವು ಮನವಿಯನ್ನು ಮೇ 5 ಕ್ಕೆ ಮುಂದೂಡಿದೆ.

Related Stories

No stories found.

Advertisement

X
Kannada Prabha
www.kannadaprabha.com