ದೇಶದಲ್ಲಿ ಏಪ್ರಿಲ್‌ ನಲ್ಲಿ ದಾಖಲೆಯ 66 ಲಕ್ಷ ಕೊರೋನಾ ಪ್ರಕರಣ ವರದಿ, ಇದು ಸಾಂಕ್ರಾಮಿಕ ರೋಗದ ಅತ್ಯಂತ ಕೆಟ್ಟ ತಿಂಗಳು

ದೇಶದಲ್ಲಿ ಏಪ್ರಿಲ್‌ ತಿಂಗಳಲ್ಲಿ ದಾಖಲೆಯ 66 ಲಕ್ಷಕ್ಕೂ ಹೆಚ್ಚು ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದು ಸಾಂಕ್ರಾಮಿಕ ರೋಗ ಅತ್ಯಂತ ಕೆಟ್ಟ ತಿಂಗಳು ಮತ್ತು ಒಂದೇ ತಿಂಗಳಲ್ಲಿ ದಾಖಲಾದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿ ಏಪ್ರಿಲ್‌ ತಿಂಗಳಲ್ಲಿ ದಾಖಲೆಯ 66 ಲಕ್ಷಕ್ಕೂ ಹೆಚ್ಚು ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದು ಸಾಂಕ್ರಾಮಿಕ ರೋಗ ಅತ್ಯಂತ ಕೆಟ್ಟ ತಿಂಗಳು ಮತ್ತು ಒಂದೇ ತಿಂಗಳಲ್ಲಿ ದಾಖಲಾದ ಒಟ್ಟು ಹೊಸ ಪ್ರಕರಣಗಳು ಹಿಂದೆ ಆರು ತಿಂಗಳಲ್ಲಿ ವರದಿಯಾದ ಪ್ರಕರಣಗಳಿಗೆ ಸಮನಾಗಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 3.86 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿದ್ದು, ಭಾರತದ ಕೊರೋನಾ ಪಾಸಿಟಿವ್ ಪ್ರಕಣಗಳ ಸಂಖ್ಯೆ 1,87,67,962 ಕ್ಕೆ ಏರಿದೆ.

ಏಪ್ರಿಲ್‌ನಿಂದ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದು, 

ಏಪ್ರಿಲ್ 5 ರಿಂದ ದೇಶದಲ್ಲಿ ಒಂದು ದಿನದಲ್ಲಿ ಒಂದು ಲಕ್ಷ ಪ್ರಕರಣಗಳು ವರದಿಯಾಗಿದ್ದರೆ, ಏಪ್ರಿಲ್ 15 ರಿಂದ ನಿತ್ಯ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಎರಡು ಲಕ್ಷ ದಾಟಿದೆ ಮತ್ತು ಏಪ್ರಿಲ್ 22 ರಿಂದ ಪ್ರತಿದಿನ ಮೂರು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ ಎಂದು ತಿಳಿಸಿದೆ.

ಕಳೆದ ನಾಲ್ಕು ವಾರಗಳಲ್ಲಿ ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ, ಛತ್ತೀಸ್‌ಗಢ, ಗುಜರಾತ್, ಜಾರ್ಖಂಡ್, ಪಂಜಾಬ್, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳು ಅತ್ಯಂತ ಕಳವಳಕಾರಿ ರಾಜ್ಯಗಳಾಗಿ ಹೊರಹೊಮ್ಮಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್‌ವಾಲ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com