ಅಸ್ಸಾಂ ಸಿಎಂ ವಿರುದ್ಧ ಎಫ್ಐಆರ್ ಸಾಮಾನ್ಯದ ಸಂಗತಿ: ಗೃಹ ಖಾತೆ ರಾಜ್ಯ ಸಚಿವರು

ಮಿಜೊರಾಮ್ ಪೊಲೀಸರು ಅಸ್ಸಾಂ ಸಿಎಂ ವಿರುದ್ಧ ಎಫ್ಐಆರ್ ದಾಖಲಿಸುವುದು ಸಾಮಾನ್ಯದ ಸಂಗತಿಯಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಹೇಳಿದ್ದಾರೆ.
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ

ಅಸ್ಸಾಂ: ಮಿಜೊರಾಮ್ ಪೊಲೀಸರು ಅಸ್ಸಾಂ ಸಿಎಂ ವಿರುದ್ಧ ಎಫ್ಐಆರ್ ದಾಖಲಿಸುವುದು ಸಾಮಾನ್ಯದ ಸಂಗತಿಯಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಹೇಳಿದ್ದಾರೆ.

ಅಸ್ಸಾಂ-ಮಿಜೊರಾಮ್ ನ ನಡುವಿನದ್ದು ಹಳೆಯ ವಿವಾದ ಎಂದು ಸಚಿವರು ತಿಳಿಸಿದ್ದಾರೆ. ಅಸ್ಸಾಂ-ಮಿಜೊರಾಮ್ ನಡುವೆ ಗಡಿ ವಿವಾದಗಳು ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಗಡಿ ವಿಚಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಶೀಘ್ರವೇ ವಿವಾದ ಬಗೆಹರಿಯಲಿದೆ. ಈಗ ನಡೆಯುತ್ತಿರುವ ಗಡಿ ವಿವಾದ ಹಳೆಯ ವಿವಾದವಾಗಿದೆ. ಅಮಿತ್ ಶಾ ಹಾಗೂ ಮೋದಿ ಅದರ ಬಗ್ಗೆ ನಿರಂತರವಾಗಿ ನಿಗಾ ವಹಿಸಿದ್ದಾರೆ. ಗಡಿ ವಿಚಾರದಲ್ಲಿ ಅಸ್ಸಾಂ ಸಿಎಂ ವಿರುದ್ಧ ಮಿಜೊರಾಮ್ ಪೊಲೀಸರು ಎಫ್ಐಆರ್ ದಾಖಲಿಸುವುದು ಸಾಮಾನ್ಯದ ಸಂಗತಿ ಎಂದು ಹೇಳಿದ್ದಾರೆ.

ಮಿಜೊರಾಮ್ ಪೊಲೀಸರು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ, ಅಸ್ಸಾಂ ನ ಹಿರಿಯ ಪೊಲೀಸ್ ಅಧಿಕಾರಿಗಳು, ಇನ್ನೂ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಗಡಿಯಲ್ಲಿನ ಉಭಯ ರಾಜ್ಯಗಳ ಭದ್ರತಾ ಪಡೆಗಳ ನಡುವೆ ಜು.31 ರಂದು ಗುಂಡಿನ ಚಕಮಕಿ ನಡೆದಿತ್ತು. ಪರಿಣಾಮ ಅಸ್ಸಾಂ ನ ಓರ್ವ ನಾಗರಿಕ, ಐವರು ಪೊಲೀಸ್ ಸಿಬ್ಬಂದಿಗಳು ಸಾವನ್ನಪ್ಪಿದ್ದರು.

ಗಾಯಗೊಂಡ ಓರ್ವ ಪೊಲೀಸ್ ಸಿಬ್ಬಂದಿ ಆಸ್ಪತ್ರೆಯಲ್ಲಿ ಅಸುನೀಗಿದ್ದು, ಪೊಲೀಸ್ ಸಿಬ್ಬಂದಿಗಳ ಸಾವಿನ ಸಂಖ್ಯೆಯನ್ನು 6 ಕ್ಕೆ ಏರಿಕೆ ಮಾಡಿದೆ. ಘಟನೆಯಲ್ಲಿ 50 ಮಂದಿಗೆ ತೀವ್ರ ಗಾಯಗಳಾಗಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com