ಕೇರಳದಲ್ಲಿ ಕೊರೋನಾದಿಂದ ಇಂದು 56 ಸಾವು: 20,728 ಹೊಸ ಪ್ರಕರಣ ಪತ್ತೆ
ಕೇರಳದಲ್ಲಿ ಕೊರೋನಾದಿಂದ ಇಂದು 56 ಮಂದಿ ಸಾವನ್ನಪ್ಪಿದ್ದಾರೆ. ಹೊಸದಾಗಿ 20,728 ಪ್ರಕರಣಗಳು ಪತ್ತೆಯಾಗಿವೆ. 17,792 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
Published: 01st August 2021 08:28 PM | Last Updated: 01st August 2021 08:28 PM | A+A A-

ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್
ತಿರುವನಂತಪುರಂ: ಕೇರಳದಲ್ಲಿ ಕೊರೋನಾದಿಂದ ಇಂದು 56 ಮಂದಿ ಸಾವನ್ನಪ್ಪಿದ್ದಾರೆ. ಹೊಸದಾಗಿ 20,728 ಪ್ರಕರಣಗಳು ಪತ್ತೆಯಾಗಿವೆ. 17,792 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಕಳೆದ 24 ತಾಸಿನಲ್ಲಿ ಒಟ್ಟು 1,70,690 ಕೋವಿಡ್ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ.12.14 ರಷ್ಟಿದೆ. ಈವರೆಗೆ ರಾಜ್ಯದಲ್ಲಿ 2,73,87,700 ಕೋವಿಡ್ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಮುಖ್ಯಮಂತ್ರಿ ಭಾನುವಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೋಂಕಿನಿಂದ ಇಂದು 56 ಮಂದಿ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 16,837ಕ್ಕೆ ಏರಿದೆ. ಕಳೆದ 24 ತಾಸಿನಲ್ಲಿ ಬ್ರಿಟನ್ ನಿಂದ ಕೇರಳಕ್ಕೆ ಆಗಮಿಸಿದ ಯಾರೊಬ್ಬರಲ್ಲೂ ಕೋವಿಡ್- ಸೋಂಕು ಪತ್ತೆಯಾಗಿಲ್ಲ. ಇದುವರೆಗೆ ಬ್ರಿಟನ್ ನಿಂದ ಆಗಮಿಸಿದ 11 ಮಂದಿಗೆ ರೂಪಾಂತರ ವೈರಸ್ ರೋಗ ಪತ್ತೆ ಪರೀಕ್ಷೆ ನಡೆಸಲಾಗಿತ್ತು.