ಆಗಸ್ಟ್ ತಿಂಗಳಲ್ಲಿ ಕೋವಿಡ್ 3 ನೇ ಅಲೆ, ಅಕ್ಟೋಬರ್ ನಲ್ಲಿ ತೀವ್ರ ಸಾಧ್ಯತೆ: ವರದಿ

ಭಾರತದಲ್ಲಿ ಕೊರೋನಾದ ಹೊಸ ರೂಪಾಂತರಿ ತಳಿ ಸೋಂಕು ಹರಡಲು ಪ್ರಾರಂಭವಾಗಿದ್ದು ಆಗಸ್ಟ್ ನಲ್ಲಿ ಪ್ರಸರಣ ಸಂಖ್ಯೆ ಏರಿಕೆ ಕಾಣಲಿದ್ದು ಅಕ್ಟೋಬರ್ ನಲ್ಲಿ ತೀವ್ರಗೊಳ್ಳುವ ಸಾಧ್ಯತೆ ಇದೆ.
ಕೊರೋನಾ
ಕೊರೋನಾ

ನವದೆಹಲಿ: ಭಾರತದಲ್ಲಿ ಕೊರೋನಾದ ಹೊಸ ರೂಪಾಂತರಿ ತಳಿ ಸೋಂಕು ಹರಡಲು ಪ್ರಾರಂಭವಾಗಿದ್ದು ಆಗಸ್ಟ್ ನಲ್ಲಿ ಪ್ರಸರಣ ಸಂಖ್ಯೆ ಏರಿಕೆ ಕಾಣಲಿದ್ದು ಅಕ್ಟೋಬರ್ ನಲ್ಲಿ ತೀವ್ರಗೊಳ್ಳುವ ಸಾಧ್ಯತೆ ಇರುವುದನ್ನು ಗಣಿತದ ಮಾಡಲ್ ಆಧಾರದಲ್ಲಿ ಸಂಶೋಧಕರು ಅಂದಾಜಿಸಿದ್ದಾರೆ. 

ಈ ವರ್ಷದ 2ನೇ ಅಲೆ ಭೀಕರವಾಗಿರಲಿದೆ ಎಂಬುದನ್ನೂ ಈ ಸಂಶೋಧಕರು ಎಚ್ಚರಿಸಿದ್ದರು. ಹೈದರಾಬಾದ್ ನ ಐಐಟಿ ಹಾಗೂ ಕಾನ್ಪುರ ಐಐಟಿಯ ಮತ್ತುಕುಮ್ಮಲ್ಲಿ ವಿದ್ಯಾಸಾಗರ್,  ಮಣೀಂದ್ರ ಅಗರ್ವಾಲ್ ಗಣಿತ ಮಾಡಲ್ ನ ಆಧಾರದಲ್ಲಿ ಕೋವಿಡ್-19 3 ನೇ ಅಲೆಯ ಸಾಧ್ಯತೆಯನ್ನು ವಿಶ್ಲೇಶಿಸಿದ್ದು, ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳು ಮೂರನೇ ಅಲೆಗೆ ಕಾರಣವಾಗಲಿದ್ದು ಅಕ್ಟೋಬರ್ ತಿಂಗಳಲ್ಲಿ ತೀವ್ರಗೊಳ್ಳಲಿದೆ ಎಂದು ಹೇಳಿದ್ದಾರೆ. 

ಕೊರೋನಾ ಹೆಚ್ಚಿರುವ ರಾಜ್ಯಗಳಾದ ಕೇರಳ, ಮಹಾರಾಷ್ಟ್ರಗಳಲ್ಲಿನ ಪರಿಸ್ಥಿತಿ ಕೋವಿಡ್-19 ಮೂರನೆ ಅಲೆಯ ಅಂದಾಜಿಗೆ ಸಿಗುತ್ತಿದೆ ಎಂದು ಹೇಳಿದ್ದಾರೆ. 

ಎರಡನೇ ಅಲೆಗಿಂತಲೂ ಈ ಅಲೆ ಸಣ್ಣದಾಗಿರಲಿದೆ. ಆದರೂ ಭಾರತ ಲಸಿಕೆ ಅಭಿಯಾನದ ವೇಗವನ್ನು ಹೆಚ್ಚಿಸಬೇಕಿದೆ, ಕಣ್ಗಾವಲು ವಿಧಾನಗಳನ್ನು ಹೆಚ್ಚಿಸಬೇಕಿದೆ, ಮುಂದೆ ಬರಬಹುದಾದ ಹೊಸ ತಳಿಗಳನ್ನು ಪತ್ತೆ ಮಾಡುವುದಕ್ಕೆ ಜಿನೋಮ್ ಸೀಕ್ವೆನ್ಸಿಂಗ್ ಮೂಲಕ ಜಾಗೃತವಾಗಿರಬೇಕಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. 

ತಜ್ಞರ ಪ್ರಕಾರ ಡೆಲ್ಟಾ ರೂಪಾಂತರಿ ಕೊರೋನಾ ವೈರಸ್ ಸಿಡುಬು ಹರಡಿದಷ್ಟೇ ವೇಗವಾಗಿ ಹರಡುವ ಸಾಧ್ಯತೆ ಇದ್ದು ಲಸಿಕೆಯ ಮೂಲಕವೇ ನಿಯಂತ್ರಿಸಬೇಕೆಂದು ಸಲಹೆ ನೀಡಿದ್ದಾರೆ. 

ಭಾರತದಲ್ಲಿ ನಡೆದಿರುವ ಜೀನೋಮಿಕ್ ಕನ್ಸೋರ್ಟಿಯಂ ನ ಡೇಟಾದ ಪ್ರಕಾರ ಮೇ, ಜೂನ್, ಜುಲೈಗಳಲ್ಲಿನ ಕೋವಿಡ್-19 ಸೋಂಕು ಪ್ರಕರಣಗಳಲ್ಲಿ ಪ್ರತಿ 10 ಪ್ರಕರಣಗಳಲ್ಲಿ 8 ಪ್ರಕರಣಗಳು ಡೆಲ್ಟಾ ರೂಪಾಂತರಿಯಿಂದ ಹರಡುತ್ತಿತ್ತು ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com