ಪ್ರತಿಪಕ್ಷಗಳಲ್ಲಿ ವಿಭಜನೆಯಿಂದಾಗಿ ಉಭಯ ಸದನಗಳಲ್ಲಿ ಸುಗಮ ಕಲಾಪ; ಸರ್ಕಾರದ ಆಶಯ

ಪೆಗಾಸಸ್ ಮತ್ತು ರೈತರ ಪ್ರತಿಭಟನೆ ವಿಚಾರವಾಗಿ ಪ್ರತಿಪಕ್ಷಗಳ ಗದ್ದಲದಿಂದಾಗಿ ಈ ವರೆಗೂ ಸಂಸತ್ತಿನ ಉಭಯ ಸದನಗಳಲ್ಲಿ ಕಲಾಪ ಸುಗಮವಾಗಿರಲಿಲ್ಲ. ಆದರೆ ಇದೀಗ ಕೇಂದ್ರ ಸರ್ಕಾರಕ್ಕೆ ಹೊಸ ಭರವಸೆ ದೊರೆತಿದ್ದು, ವಿಪಕ್ಷಗಳಲ್ಲಿನ ವಿಭಜನೆ ಸುಗಮ ಕಲಾಪಕ್ಕೆ ದಾರಿ ಮಾಡಿಕೊಡುವ  ವಿಶ್ವಾಸ ಹೊಂದಿದೆ.
ಸಂಸತ್
ಸಂಸತ್

ನವದೆಹಲಿ: ಪೆಗಾಸಸ್ ಮತ್ತು ರೈತರ ಪ್ರತಿಭಟನೆ ವಿಚಾರವಾಗಿ ಪ್ರತಿಪಕ್ಷಗಳ ಗದ್ದಲದಿಂದಾಗಿ ಈ ವರೆಗೂ ಸಂಸತ್ತಿನ ಉಭಯ ಸದನಗಳಲ್ಲಿ ಕಲಾಪ ಸುಗಮವಾಗಿರಲಿಲ್ಲ. ಆದರೆ ಇದೀಗ ಕೇಂದ್ರ ಸರ್ಕಾರಕ್ಕೆ ಹೊಸ ಭರವಸೆ ದೊರೆತಿದ್ದು, ವಿಪಕ್ಷಗಳಲ್ಲಿನ ವಿಭಜನೆ ಸುಗಮ ಕಲಾಪಕ್ಕೆ ದಾರಿ ಮಾಡಿಕೊಡುವ  ವಿಶ್ವಾಸ ಹೊಂದಿದೆ.

ಸಂಸತ್ತಿನ ಮುಂಗಾರು ಅಧಿವೇಶನವು ಕೊನೆಯ ಹಂತಕ್ಕೆ ಕಾಲಿಟ್ಟಿದ್ದು, ಪೆಗಾಸಸ್ ವಿವಾದ ಮತ್ತು ರೈತರ ಪ್ರತಿಭಟನೆ ಸೇರಿದಂತೆ ನಾನಾ ವಿಚಾರವಾಗಿ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ನಿರಂತರ ಗದ್ದಲ ಸೃಷ್ಟಿ ಮಾಡುತ್ತಿವೆ. ಹೀಗಾಗಿ ಸುಗಮ ಕಲಾಪವಿಲ್ಲದೇ ಸಂಸತ್ತಿನ ಅಮೂಲ್ಯ ಸಮಯ  ವ್ಯರ್ಥವಾಗುತ್ತಿದ್ದು, ಶಾಸಕಾಂಗ ವ್ಯವಹಾರಗಳು ನೆನೆಗುದಿಗೆ ಬೀಳುತ್ತಿವೆ. ಈ ನಡುವೆ ಕೇಂದ್ರ ಸರ್ಕಾರ ಕೋವಿಡ್ -19 ಮತ್ತು ರೈತರ ಆಂದೋಲನ ವಿಚಾರಗಳನ್ನು ಚರ್ಚೆಗೆ ತೆಗೆದುಕೊಳ್ಳುವ ಮೂಲಕ ಪ್ರತಿಪಕ್ಷಗಳಲ್ಲಿ ವಿಭಜನೆಗೆ ಯತ್ನಿಸಿದ್ದು, ಈ ಮೂಲಕ ಕೊನೆಯ ಹಂತದ ಸುಗಮ ಕಲಾಪವನ್ನು ಎದುರು  ನೋಡುತ್ತಿದೆ.

ಪೆಗಾಸಸ್ ವಿಷಯದಲ್ಲಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರಮಣಕಾರಿ ಹಾದಿಯಲ್ಲಿದ್ದು, ಸಂಸತ್ತಿನಲ್ಲಿ ನಡೆಯುತ್ತಿರುವ ನಿಲುವಳಿಯಲ್ಲಿ ಭಾನುವಾರ ತಡರಾತ್ರಿಯವರೆಗೆ ಯಾವುದೇ ಸೂಚನೆ ಬಂದಿಲ್ಲ. ಉಭಯ ಸದನಗಳಲ್ಲಿ ಎನ್‌ಡಿಎ ನಾಯಕರು ಮಾಡಿದ ಹಲವಾರು ಪ್ರಯತ್ನಗಳ ಹೊರತಾಗಿಯೂ ಯಾವುದೇ  ಸಕಾರಾತ್ಮಕ ಬೆಳವಣಿಗೆ ಇಲ್ಲ. ಆದಾಗ್ಯೂ, ಲೋಕಸಭೆಯ ಕಾರ್ಯಸೂಚಿಯು ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಹೊರಹೊಮ್ಮುವ ಸನ್ನಿವೇಶಗಳ ಬಗ್ಗೆ ಒಂದು ಸಣ್ಣ ಚರ್ಚೆಯನ್ನು ಒಳಗೊಂಡಿದ್ದು, ಇದನ್ನು ಆರ್‌ಎಸ್‌ಪಿ ನಾಯಕ ಎನ್ ಕೆ ಪ್ರೇಮಚಂದ್ರನ್ ಮತ್ತು ಶಿವಸೇನೆಯ ವಿನಾಯಕ್ ಭೌರಾವ್ ರೌತ್  ಅವರು 193 ರ ನಿಯಮದ ಅಡಿಯಲ್ಲಿ ಸಚಿವರಿ ಪ್ರತಿಕ್ರಿಯೆ  ಪಡೆಯಲಿದ್ದಾರೆ.

ಇನ್ನು ಕೆಳಮನೆಯಲ್ಲಿ, "ರಾಷ್ಟ ರಾಜಧಾನಿ ದೆಹಲಿ ಪ್ರದೇಶದಲ್ಲಿ ವಾಯು ಗುಣಮಟ್ಟ ನಿರ್ವಹಣೆಯ ಆಯೋಗ ಮತ್ತು ನೆರೆಯ ಪ್ರದೇಶಗಳ ಸುಗ್ರೀವಾಜ್ಞೆ, 2021, ಮತ್ತು ಅದನ್ನು ಬದಲಿಸಲು ಮಸೂದೆಯ ಅಂಗೀಕಾರವನ್ನು ಕೋರುವ ಶಾಸನಬದ್ಧ ನಿರ್ಣಯವನ್ನು ಚರ್ಚೆಗೆ ಅವಕಾಶ ನೀಡುವ ಸಾಧ್ಯತೆ ಇದೆ. ಅಲ್ಲದೆ  ರೈತರ ಪ್ರತಿಭಟನೆ ವಿಚಾರವಾಗಿ ಸರ್ಕಾರ ಈ ಹಿಂದಿನ ಚರ್ಚೆಗಳಲ್ಲಿನ ಒಪ್ಪಂದಕ್ಕೆ ಅನುಗುಣವಾಗಿ ನಡೆದುಕೊಳ್ಳುವಂತೆ ಮನವಿ ಮಾಡಿದೆ.  ಇದೇ ವೇಳೆ ವಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ನಿರಂತರ ಪ್ರತಿಭಟನೆ ನಡೆಸಿದರೂ, ಎನ್ ಡಿಎ ಸದಸ್ಯರು ಮಾತ್ರ .ಯೋಜಿತ ಮಸೂದೆಗಳನ್ನು ಜಾರಿಗೆ ತರುವ  ದೃಢ ಸಂಕಲ್ಪ ತೋರಲಿದ್ದಾರೆ. ಆದರೆ "ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಾಯಕರು ಸಂಸತ್ತಿನಲ್ಲಿನ ಬಿಕ್ಕಟ್ಟು ಶಮನಗೊಳಿಸಲು ಮುಂದಾಗದೇ ಇರುವುದು ಕುತೂಹಲಕ್ಕೆ ಕಾರಣವಾಗಿದೆ.

ಪೆಗಾಸಸ್ ವಿಷಯದ ಕುರಿತು ಚರ್ಚೆಗಳನ್ನು ತೆಗೆದುಕೊಳ್ಳಲು ಸರ್ಕಾರವು ವಿಪಕ್ಷಗಳ ಷರತ್ತುಗಳನ್ನು ಒಪ್ಪಿಕೊಳ್ಳುವ ಯಾವುದೇ ಅವಕಾಶವಿಲ್ಲ, ಪ್ರಧಾನಮಂತ್ರಿ ಅಥವಾ ಗೃಹ ಸಚಿವರು ಸದನದಲ್ಲಿ ಉಪಸ್ಥಿತರಿರುತ್ತಾರೆ ಮತ್ತು ವಿಪಕ್ಷಗಳ ಪ್ರಶ್ನೆಗಳಿಗೆ ಇಬ್ಬರೂ ನಂತರ ಉತ್ತರಿಸುತ್ತಾರೆ. ಆದಾಗ್ಯೂ, ಇತರ ವಿರೋಧ  ಪಕ್ಷಗಳು ರಾಜಿಗಾಗಿ ಉತ್ಸುಕತೆಯನ್ನು ವ್ಯಕ್ತಪಡಿಸಿರುವುದು ಹೊಸ ಭರವಸೆಗೆ ಕಾರಣವಾಗಿದೆ. ಕೋವಿಡ್ -19 ಕುರಿತ ಚರ್ಚೆಯನ್ನು ವೀಕ್ಷಿಸಲಾಗುವುದು ಎಂದು ಕೇಂದ್ರ ಸಚಿವರೊಬ್ಬರು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com