ಬಾಕಿ ಇರುವ ವಿವಾದ ತ್ವರಿತವಾಗಿ ಬಗೆಹರಿಸಿಕೊಳ್ಳಲಿ ಚೀನಾ-ಭಾರತ ಒಪ್ಪಿಗೆ: ಜಂಟಿ ಹೇಳಿಕೆ

ಈಶಾನ್ಯ ಲಡಾಖ್ ನಲ್ಲಿ ಉಭಯ ದೇಶಗಳ ನಡುವೆ ಇರುವ ವಿವಾದಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳುವುದಕ್ಕೆ ಭಾರತ-ಚೀನಾ ಸೇನೆಗಳು ಒಪ್ಪಿಗೆ ಸೂಚಿಸಿವೆ. 
ಈಶಾನ್ಯ ಲಡಾಖ್ ನಲ್ಲಿ ಭಾರತ ಚೀನಾ ಸೇನಾ ಸಿಬ್ಬಂದಿ
ಈಶಾನ್ಯ ಲಡಾಖ್ ನಲ್ಲಿ ಭಾರತ ಚೀನಾ ಸೇನಾ ಸಿಬ್ಬಂದಿ

ನವದೆಹಲಿ: ಈಶಾನ್ಯ ಲಡಾಖ್ ನಲ್ಲಿ ಉಭಯ ದೇಶಗಳ ನಡುವೆ ಇರುವ ವಿವಾದಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳುವುದಕ್ಕೆ ಭಾರತ-ಚೀನಾ ಸೇನೆಗಳು ಒಪ್ಪಿಗೆ ಸೂಚಿಸಿವೆ. 

12 ನೇ ಸುತ್ತಿನ ಮಾತುಕತೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮಾತುಕತೆ ರಚನಾತ್ಮಕವಾಗಿತ್ತು ಎಂದು ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದೆ. 

ಸೇನೆಯ ನಡುವೆ ಮಾತುಕತೆ ನಡೆದ ಎರಡು ದಿನಗಳ ಬಳಿಕ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಎಲ್ಎಸಿಯಾದ್ಯಂತ ಸೇನಾ ಹಿಂತೆಗೆತಕ್ಕೆ ಸಂಬಂಧಿಸಿದಂತೆ ಪ್ರಾಮಾಣಿಕ ಮತ್ತು ಆಳವಾದ ವಿಷಯ ವಿನಿಮಯ ದ್ವಿಪಕ್ಷೀಯ ಸಭೆಯಲ್ಲಿ ಆಗಿದೆ ಎಂದು ಹೇಳಿದೆ. "ಈ ಸುತ್ತಿನ ಮಾತುಕತೆ ರಚನಾತ್ಮಕವಾಗಿದ್ದು, ಈಗಿರುವ ಒಪ್ಪಂದ, ಶಿಷ್ಟಾಚಾರಗಳ ಅಡಿಯಲ್ಲಿ ಬಾಕಿ ಇರುವ ವಿಷಯಗಳನ್ನು ಇತ್ಯರ್ಥಗೊಳಿಸಿಕೊಳ್ಳಲು ಹಾಗೂ ಮಾತುಕತೆ ಮುಂದುವರೆಸಲು ನಿರ್ಧರಿಸಲಾಗಿದೆ" ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com