ಸಂಸತ್ ಅಧಿವೇಶನ: ಪ್ರಧಾನಿ ಮೋದಿ ವಿರೋಧಿ ಬಣ ರಚಿಸಿದ ರಾಹುಲ್ ಗಾಂಧಿ ಉಪಹಾರ ಕೂಟ?

ಶತಾಯಗತಾಯ ಸಂಸತ್ ಅಧಿವೇಶನದಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಹಣಿಯಲು ನಿರ್ಧರಿಸಿರುವ ಕಾಂಗ್ರೆಸ್ ಪಕ್ಷ, ಈ ಸಂಬಂಧ ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷಯ ನಾಯಕರಿಗೆ ಉಪಾಹರಕೂಟ ಏರ್ಪಡಿಸಿ ಗಮನ ಸೆಳೆದಿದ್ದೆ.
ರಾಹುಲ್ ಗಾಂಧಿ ನಿವಾಸದಲ್ಲಿ ಉಪಾಹಾರಕೂಟ
ರಾಹುಲ್ ಗಾಂಧಿ ನಿವಾಸದಲ್ಲಿ ಉಪಾಹಾರಕೂಟ

ನವದೆಹಲಿ: ಶತಾಯಗತಾಯ ಸಂಸತ್ ಅಧಿವೇಶನದಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಹಣಿಯಲು ನಿರ್ಧರಿಸಿರುವ ಕಾಂಗ್ರೆಸ್ ಪಕ್ಷ, ಈ ಸಂಬಂಧ ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷಯ ನಾಯಕರಿಗೆ ಉಪಾಹರಕೂಟ ಏರ್ಪಡಿಸಿ ಗಮನ ಸೆಳೆದಿದ್ದೆ.

ಹೌದು.. ಈ ಬಗ್ಗೆ ರಾಜಕೀಯ ತಜ್ಞರು ಹಲವು ವಿಶ್ಲೇಷಣಗಳನ್ನು ಮಾಡುತ್ತಿದ್ದು, '2024ರ ಲೋಕಸಭೆ ಚುನಾವಣೆಗಾಗಿ ಮೋದಿ ವಿರೋಧಿ ಬಣ ರಚಿಸುವತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿಪಕ್ಷಗಳು ಮುಂದಡಿ ಇಟ್ಟಿವೆ ಎನ್ನಲಾಗಿದೆ. ಇದಕ್ಕೆ ಇಂಬು ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್  ಗಾಂಧಿ ನಿವಾಸದಲ್ಲಿ ಇಂದು ನಡೆದ ಉಪಹಾರ ಕೂಟ ವಿಪಕ್ಷ ನಾಯಕರ ಒಗ್ಗೂಡುವಿಕೆಗೆ ವೇದಿಕೆ ಕಲ್ಪಿಸಿದೆ. 

ಈಗಾಗಲೇ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪೆಗಾಸಸ್ ಫೋನ್ ಕದ್ದಾಲಿಕೆ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದ್ದು, ವಿಪಕ್ಷಗಳು ಚರ್ಚೆಗೆ ಪಟ್ಟು ಹಿಡಿದಿವೆ. ಈ ಮಧ್ಯೆ ರಾಹುಲ್ ಗಾಂಧಿ ವಿಪಕ್ಷ ನಾಯಕರನ್ನು ಉಪಹಾರ ಕೂಟಕ್ಕೆ ಆಹ್ವಾನಿಸಿದ್ದು, ಅದರಂತೆ ಪ್ರಮುಖ ವಿಪಕ್ಷ ನಾಯಕರು ಈ ಸಭೆಯಲ್ಲಿ  ಭಾಗವಹಿಸಿದ್ದರು. ಸಭೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಪ್ರಮುಖ ವಿಪಕ್ಷ ಸದಸ್ಯರು ಭಾಗವಹಿಸಿದ್ದರು. ಆದರೆ ಈ ಸಭೆಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕರು ಭಾಗವಹಿಸದಿರುವುದು ಕೂಡ ಗಮನ ಸೆಳೆದಿದೆ.

ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ್ನು ಸೈದ್ಧಾಂತಿಕವಾಗಿ ವಿರೋಧಿಸುವ ವಿಪಕ್ಷಗಳ ಧ್ವನಿ ಗಟ್ಟಿಯಾಗಬೇಕಾದ ಸಮಯ ಬಂದಿದೆ. ದೇಶದ ಜ್ವಲಂತ ಸಮಸ್ಯೆಗಳನ್ನು ಎದುರಿಸುವಲ್ಲಿ ವಿಫಲವಾಗಿರುವ ಮೋದಿ ಸರ್ಕಾರ, ಜನರನ್ನು ಒಡೆದು ಆಳುವ  ಆರ್‌ಎಸ್‌ಎಸ್‌ನ ದುಷ್ಟ ನೀತಿಯ ಮೊರೆ ಹೋಗಿದೆ. ಕೋಮುವಾದಿ ರಾಜಕಾರಣವನ್ನು ಸೋಲಿಸಲು ಜಾತ್ಯಾತೀತ ಮನೋಭಾವದ ಪಕ್ಷಗಳು ಒಂದಾಗಲೇಬೇಕಿದೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, 'ಸರ್ಕಾರ ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಿಲ್ಲ. ನಮ್ಮ ಪ್ರತಿಭಟನೆ ರಸ್ತೆಯಿಂದ ಸಂಸತ್ ವರೆಗೂ ನಡೆಯಬೇಕು. ಅದೇ ರೀತಿ ಸದನದಲ್ಲಿ ಕೊರೊನಾ ಮತ್ತು ಪೆಗಾಸಸ್ ಸಂಬಂಧ ಸುಧೀರ್ಘ ಚರ್ಚೆ ನಡೆಯಬೇಕಿದೆ  ಎಂದು ಹೇಳಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com