ದೆಹಲಿಯಲ್ಲಿ ಶರದ್ ಯಾದವ್ ಭೇಟಿ ಮಾಡಿದ ಲಾಲು, ಚಿರಾಗ್ ಪಾಸ್ವಾನ್ ಗೆ ಬೆಂಬಲ

ದೀರ್ಘಕಾಲದ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಶರದ್ ಯಾದವ್ ಅವರನ್ನು ಆರ್ ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಮಂಗಳವಾರ ಭೇಟಿ ಮಾಡಿದರು.
ಶರದ್ ಯಾದವ್ - ಲಾಲು ಪ್ರಸಾದ್ ಯಾದವ್
ಶರದ್ ಯಾದವ್ - ಲಾಲು ಪ್ರಸಾದ್ ಯಾದವ್

ನವದೆಹಲಿ: ದೀರ್ಘಕಾಲದ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಶರದ್ ಯಾದವ್ ಅವರನ್ನು ಆರ್ ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಮಂಗಳವಾರ ಭೇಟಿ ಮಾಡಿದರು ಮತ್ತು ಇಬ್ಬರೂ ನಾಯಕರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌ಜೆಡಿ ನಾಯಕ, ಶರದ್ ಯಾದವ್, ಮುಲಾಯಂ ಸಿಂಗ್ ಯಾದವ್ ಅವರಂತಹ ಸಮಾಜವಾದಿ ನಾಯಕರ ಅನುಪಸ್ಥಿತಿಯು ಸಂಸತ್ತಿನಲ್ಲಿ ಜನರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ಲಕ್ಷಿಸಲು ಕಾರಣವಾಗಿದೆ ಎಂದರು.

ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಅವರನ್ನು ಬೆಂಬಲಿಸಿದ ಲಾಲು ಪ್ರಸಾದ್ ಯಾದವ್ ಅವರು, ಯುವ ಸಂಸದ ವೈಷಮ್ಯದ ಹೊರತಾಗಿಯೂ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು.

ಚಿರಾಗ್ ಪಾಸ್ವಾನ್ ಮತ್ತು ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಪರವಾಗಿ ಮಾತನಾಡಿದ ಲಾಲು, ಜನ ಎಲ್‌ಜೆಪಿ ನಾಯಕನ ಜೊತೆ ಇದ್ದಾರೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಹೇಳಿದರು.

ಆರ್‌ಜೆಡಿ ಮುಖ್ಯಸ್ಥರೊಂದಿಗೆ ಪಕ್ಷದ ಸಂಸದರಾದ ಪ್ರೇಮ್ ಚಂದ್ ಗುಪ್ತಾ ಮತ್ತು ಮಿಸಾ ಭಾರತಿ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com