ಭಾರತದ ಮೊದಲ ಸ್ಥಳೀಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಸಮುದ್ರ ಪ್ರಯೋಗ ಪ್ರಾರಂಭ 

ಭಾರತದ ಮೊದಲ ದೇಶೀಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಸಮುದ್ರ ಪ್ರಯೋಗವನ್ನು ಪ್ರಾರಂಭಿಸಿದೆ. 
ಐಎನ್ಎಸ್ ವಿಕ್ರಾಂತ್
ಐಎನ್ಎಸ್ ವಿಕ್ರಾಂತ್

ಕೊಚ್ಚಿ: ಭಾರತದ ಮೊದಲ ದೇಶೀಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಸಮುದ್ರ ಪ್ರಯೋಗವನ್ನು ಪ್ರಾರಂಭಿಸಿದೆ. 

ಭಾರತದ ನೌಕಾಪಡೆಗೆ ಐಎನ್ಎಸ್ ವಿಕ್ರಾಂತ್ 2022 ಕ್ಕೆ ಸೇರ್ಪಡೆಗೊಳ್ಳಲು ಸಜ್ಜಾಗಿದೆ. ಇದರ ಭಾಗವಾಗಿ ಕೊಚ್ಚಿಯ ಸಮುದ್ರದಲ್ಲಿ ಅಭ್ಯಾಸದಲ್ಲಿ ತೊಡಗಿದೆ. 

ನೌಕಾ ಪಡೆ ಈ ಬಗ್ಗೆ ಟ್ವೀಟ್ ಮಾಡಿದ್ದು, ದೇಶದ ಇತಿಹಾಸದಲ್ಲಿ ಪ್ರಮುಖವಾದ ದಿನ ಎಂದು ಬಣ್ಣಿಸಿದೆ.  ಭಾರತದಲ್ಲಿ ವಿನ್ಯಾಸಗೊಂಡು ನಿರ್ಮಾಣವಾಗಿರುವ ದೇಶದ ಅತ್ಯಂತ ದೊಡ್ಡ, ಸಂಕೀರ್ಣ ಯುದ್ಧನೌಕೆ ಎಂದು ಇದನ್ನು ಬಣ್ಣಿಸಿದೆ. ಈ ಯುದ್ಧನೌಕೆಗೆ 1999 ರಲ್ಲಿ ವಿನ್ಯಾಸ ಪ್ರಾರಂಭಿಸಲಾಗಿತ್ತು. 2009 ರ ಫೆಬ್ರವರಿಯಲ್ಲಿ ನಿರ್ಮಾಣ ಪ್ರಾರಂಭವಾಗಿತ್ತು.

2013 ರ ಆಗಸ್ಟ್ 12 ರಂದು ಯುದ್ಧನೌಕೆಯನ್ನು ಉದ್ಘಾಟಿಸಲಾಗಿತ್ತು.  ಬೇಸಿನ್ ಟ್ರಯಲ್ ನ್ನು ಡಿಸೆಂಬರ್ 2020 ರಲ್ಲಿ ಪೂರ್ಣಗೊಳಿಸಲಾಗಿದ್ದು, ಪ್ರಾದೇಶಿಕವಾಗಿ ಭಾರತದ ಕಡಲತೀರದ ಹಿತಾಸಕ್ತಿಗಳನ್ನು ಕಾಪಾಡಲು ಈ ಯುದ್ಧನೌಕೆ ಸಹಕಾರಿಯಾಗಿದೆ. ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ 23,000 ಕೋಟಿ ರೂಪಾಯಿ ವೆಚ್ಚದಲ್ಲಿ ವಿಕ್ರಾಂತ್ ನ್ನು ನಿರ್ಮಾಣ ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com