ಸಂಸತ್ ಕಲಾಪ ಅಡ್ಡಿಗೆ ಸರ್ಕಾರವನ್ನು ದೂಷಿಸಿದ ವಿಪಕ್ಷಗಳು, ಪೆಗಾಸಸ್, ರೈತರ ವಿಷಯಗಳ ಬಗ್ಗೆ ಚರ್ಚೆಗೆ ಆಗ್ರಹ

ಸಂಸತ್ ಕಲಾಪ ಅಡ್ಡಿಗೆ ಸರ್ಕಾರವೇ ಹೊಣೆ ಎಂದು 14 ವಿಪಕ್ಷಗಳ ನಾಯಕರು ಆರೋಪಿಸಿದ್ದಾರೆ. 
ಸಂಸತ್ ನ ಮುಂಗಾರು ಅಧಿವೇಶನ
ಸಂಸತ್ ನ ಮುಂಗಾರು ಅಧಿವೇಶನ

ನವದೆಹಲಿ: ಸಂಸತ್ ಕಲಾಪ ಅಡ್ಡಿಗೆ ಸರ್ಕಾರವೇ ಹೊಣೆ ಎಂದು 14 ವಿಪಕ್ಷಗಳ ನಾಯಕರು ಆರೋಪಿಸಿದ್ದಾರೆ. ಪೆಗಾಸಸ್ ಹಾಗೂ ರೈತರ ವಿಷಯಗಳ ಚರ್ಚೆಗೆ ಪ್ರತಿಪಕ್ಷಗಳ ಬೇಡಿಕೆಯನ್ನು ಒಪ್ಪಿಗೆ ನೀಡಿ ಸಂಸದೀಯ ಪ್ರಜಾಪ್ರಭುತ್ವವನ್ನು ಗೌರವಿಸುವಂತೆ ವಿಪಕ್ಷಗಳು ಮನವಿ ಮಾಡಿವೆ. 

ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ 14 ಪಕ್ಷಗಳ 18 ನಾಯಕರು, "ಕಲಾಪಗಳ ಅಡ್ಡಿಗೆ ಪ್ರತಿಪಕ್ಷಗಳನ್ನು ಹೊಣೆ ಮಾಡುವ ಮೂಲಕ ಸರ್ಕಾರ ವಿಪಕ್ಷಗಳ ಒಕ್ಕೂಟವಕ್ಕೆ ಅಪಖ್ಯಾತಿ ತರಲು ಯತ್ನಿಸುತ್ತಿದೆ" ಎಂದು ಆರೋಪಿಸಿದ್ದಾರೆ. 

"ಕಲಾಪ ವ್ಯರ್ಥವಾಗುತ್ತಿರುವುದಕ್ಕೆ ಸರ್ಕಾರವೇ ನೇರ ಹೊಣೆಯಾಗಿದೆ. ಸರ್ಕಾರ ಪ್ರತಿಪಕ್ಷಗಳ ಬೇಡಿಕೆಗಳಿಗೆ ಸೊಕ್ಕು ಅಹಂಕಾರಗಳಿಂದ ವರ್ತಿಸುತ್ತಿದ್ದು, ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಚರ್ಚೆಯ ಬೇಡಿಕೆಯನ್ನು ಒಪ್ಪಲು ನಿರಾಕರಿಸುತ್ತಿದೆ ಎಂದು ಹೇಳಿದ್ದಾರೆ. 

ಚರ್ಚೆಗೆ ಒಪ್ಪಿ ಸಂಸದೀಯ ಪ್ರಜಾಪ್ರಭುತ್ವಕ್ಕೆ ಒಪ್ಪಿಗೆ ನೀಡಲು ಸರ್ಕಾರವನ್ನು ಮತ್ತೊಮ್ಮೆ ಒತ್ತಾಯಿಸುತ್ತೇವೆ. ಪೆಗಾಸಸ್ ವಿಷಯವಾಗಿ ಎರಡೂ ಸದನಗಳಲ್ಲಿ ಚರ್ಚೆ ನಡೆಯಬೇಕೆಂಬ ಬೇಡಿಕೆಗೆ ವಿಪಕ್ಷಗಳು ಬದ್ಧವಾಗಿದ್ದು, ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಇದು ರಾಷ್ಟ್ರೀಯ ಭದ್ರತೆಯ ಅಂಶಗಳನ್ನು ಒಳಗೊಂಡಿರುವುದರಿಂದ ಗೃಹ ಸಚಿವರು ಪ್ರತಿಕ್ರಿಯೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದ್ದಾರೆ.   

ಜಂಟಿ ಹೇಳಿಕೆಯನ್ನು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, ಡಿಎಂಕೆ ನಾಯಕ ಟಿ ಆರ್ ಬಾಲು ಹಾಗೂ ಕಾಂಗ್ರೆಸ್ ತಿರುಚಿ ಶಿವಾ, ಕಾಂಗ್ರೆಸ್ ನ ಆನಂದ್ ಶರ್ಮಾ, ಎಸ್ ಪಿಯ ರಾಮಗೋಪಾಲ್ ಯಾದವ್, ಟಿಎಂಸಿ ಯ ಕಲ್ಯಾಣ್ ಬ್ಯಾನರ್ಜಿ, ಶಿವಸೇನೆಯ ಸಂಜಯ್ ರೌತ್, ವಿನಾಯಕ್ ರೌತ್ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com