ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ ಎಂದು ಪೋಸ್ ಕೊಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಸಿಬಿಐ

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ಎಚ್ಎಐ)ದ ಅಧ್ಯಕ್ಷ ಎಂದು ಹೇಳಿಕೊಂಡು 80 ಲಕ್ಷ ರೂಪಾಯಿ ವಂಚಿಸಿದ ವ್ಯಕ್ತಿಯನ್ನು ಸಿಬಿಐ ಬಂಧಿಸಿರುವುದಾಗಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಸಿಬಿಐ
ಸಿಬಿಐ

ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ಎಚ್ಎಐ)ದ ಅಧ್ಯಕ್ಷ ಎಂದು ಹೇಳಿಕೊಂಡು 80 ಲಕ್ಷ ರೂಪಾಯಿ ವಂಚಿಸಿದ ವ್ಯಕ್ತಿಯನ್ನು ಸಿಬಿಐ ಬಂಧಿಸಿರುವುದಾಗಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಎನ್ಎಚ್ಎಐ ನಕಲಿ ಅಧ್ಯಕ್ಷ ಬಿಹಾರದ ಮಧುಬನಿ ನಿವಾಸಿ ಮನೋಜ್ ಕುಮಾರ್ ಅವರನ್ನು ಗುರ್ಗಾಂವ್ ನಿಂದ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಂಧನದ ನಂತರ, ಕೇಂದ್ರ ತನಿಖಾ ಸಂಸ್ಥೆ ದೆಹಲಿ, ಕೋಲ್ಕತಾ, ಮಧುಬನಿ ಮತ್ತು ಬೊಕಾರೊ ಸ್ಟೀಲ್ ಸಿಟಿಯ ಎಂಟು ಆವರಣಗಳಲ್ಲಿ ತೀವ್ರ ಶೋಧ ನಡೆಸಿತು. ಈ ವೇಳೆ ವಿವಿಧ ಅಪರಾಧ ದಾಖಲೆಗಳು ಮತ್ತು ಸುಮಾರು 200 ಸಿಮ್ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಈ ನಕಲಿ ಅಧ್ಯಕ್ಷ ಎನ್ಎಚ್ಎಐನಲ್ಲಿ ಒಬ್ಬ ಹಿರಿಯ ಅಧಿಕಾರಿಯನ್ನು ಭೇಟಿ ಮಾಡಿದ್ದಾನೆ ಎಂದು ಆಪಾದಿಸಲಾಗಿದೆ. ಅಲ್ಲದೆ ತುರ್ತು ಉದ್ದೇಶಗಳಿಗಾಗಿ ಎರಡು-ಮೂರು ದೊಡ್ಡ ಪ್ರತಿಷ್ಠಿತ ಗುತ್ತಿಗೆದಾರರಿಗೆ ಅಧ್ಯಕ್ಷರಿಗೆ ಮಾತನಾಡಲು ಸೂಚಿಸಲಾಗಿದೆ ಎಂದು ಆರೋಪಿಸಲಾಗಿದೆ" ಎಂದು ಸಿಬಿಐ ವಕ್ತಾರ ಆರ್ ಸಿ ಜೋಶಿ ಹೇಳಿದ್ದಾರೆ.


ದೂರುದಾರ, ಗುತ್ತಿಗೆದಾರರೊಬ್ಬರು ಅವರನ್ನು ಸಂಪರ್ಕಿಸಿದಾಗ, ಆರೋಪಿ ತಮ್ಮ ಮಗಳಿಗೆ ಕೋಲ್ಕತ್ತಾದಲ್ಲಿ ತುರ್ತಾಗಿ 80 ಲಕ್ಷ ರೂಪಾಯಿಗಳ ಅಗತ್ಯವಿದೆ ಎಂದು ಹೇಳಿ, ಆತನ ಅಳಿಯನಿಂದ ಹಣ ಸಂಗ್ರಹಿಸಿದ್ದಾನೆ.

"ಹಣವನ್ನು ಹವಾಲಾ ಜಾಲದ ಮೂಲಕ ಕೋಲ್ಕತ್ತಾಗೆ ವರ್ಗಾಯಿಸಲಾಗಿದೆ ಮತ್ತು ಆರೋಪಿಯು ಸ್ವತಃ ಹಣ ಸಂಗ್ರಹಿಸಿದ್ದಾನೆಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com