ಟೋಕಿಯೊ ಒಲಂಪಿಕ್ಸ್: ಪದಕ ನಿರಾಸೆ ಹೊರತಾಗಿಯೂ, ಎಲ್ಲರ ಮನ ಗೆದ್ದ ಭಾರತ ಮಹಿಳಾ ಹಾಕಿ ತಂಡಕ್ಕೆ ಭರ್ಜರಿ ಉಡುಗೊರೆ!

ಟೋಕಿಯೊ ಒಲಂಪಿಕ್ಸ್ ಟೂರ್ನಿಯಲ್ಲಿ ಪದಕ ಗೆಲುವಲ್ಲಿ ನಿರಾಸೆ ಅನುಭವಿಸಿದರೂ ತಮ್ಮ ಅಮೋಘ ಪ್ರದರ್ಶನದ ಮೂಲಕ ಕ್ರೀಡಾ ಪ್ರೇಮಿಗಳ ಮನಗೆದ್ದಿರುವ ಭಾರತ ಮಹಿಳಾ ಹಾಕಿ ತಂಡಕ್ಕೆ ಹರ್ಯಾಣ ಸರ್ಕಾರ ಭರ್ಜರಿ ಉಡುಗೊರೆ ಘೋಷಣೆ ಮಾಡಿದೆ.
ಭಾರತ ಹಾಕಿ ತಂಡ
ಭಾರತ ಹಾಕಿ ತಂಡ

ಚಂಡೀಘಡ: ಟೋಕಿಯೊ ಒಲಂಪಿಕ್ಸ್ ಟೂರ್ನಿಯಲ್ಲಿ ಪದಕ ಗೆಲುವಲ್ಲಿ ನಿರಾಸೆ ಅನುಭವಿಸಿದರೂ ತಮ್ಮ ಅಮೋಘ ಪ್ರದರ್ಶನದ ಮೂಲಕ ಕ್ರೀಡಾ ಪ್ರೇಮಿಗಳ ಮನಗೆದ್ದಿರುವ ಭಾರತ ಮಹಿಳಾ ಹಾಕಿ ತಂಡಕ್ಕೆ ಹರ್ಯಾಣ ಸರ್ಕಾರ ಭರ್ಜರಿ ಉಡುಗೊರೆ ಘೋಷಣೆ ಮಾಡಿದೆ.

ಹೌದು.. ಹರ್ಯಾಣ ಸರ್ಕಾರವು ರಾಜ್ಯದ ಒಂಬತ್ತು ಮಹಿಳಾ ಹಾಕಿ ಆಟಗಾರರಿಗೆ ತಲಾ 50 ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಿದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಶುಕ್ರವಾರ ಹೇಳಿದ್ದಾರೆ.

ಹರ್ಯಾಣದ ಒಲಂಪಿಕ್ ಮಹಿಳಾ ಹಾಕಿ ತಂಡದ ಒಂಬತ್ತು ಸದಸ್ಯರಿಗೆ ಹರ್ಯಾಣ ಸರ್ಕಾರ ತಲಾ 50 ಲಕ್ಷ ರೂಪಾಯಿಗಳನ್ನು ನೀಡಿ ಗೌರವಿಸುತ್ತದೆ ಎಂದು ಹೇಳಲಾಗಿದೆ. 

ಟೋಕಿಯೊದಲ್ಲಿ ಶುಕ್ರವಾರ ನಡೆದ ಕಂಚಿನ ಪದಕದ ಪ್ಲೇ-ಆಫ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 3-4 ಅಂತರದಲ್ಲಿ ಸೋತ ನಂತರ ಭಾರತ ಮಹಿಳಾ ಹಾಕಿತಂಡ ನಾಲ್ಕನೇ ಸ್ಥಾನಕ್ಕೆ ಕುಸಿಯಿತು. ಆ ಮೂಲಕ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಪದಕ ಗೆಲ್ಲಲಾಗಿಲ್ಲ.  

ಇನ್ನು ಹಾಲಿ ಮಹಿಳಾ ಹಾಕಿ ತಂಡದಲ್ಲಿ ಹರ್ಯಾಣ ಮೂಲದ 8 ಆಟಗಾರ್ತಿಯರಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com