ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾರ ಭೇಟಿ ಮಾಡಿದ ಆದಾರ್ ಪೂನಾವಾಲ

ಕೋವಿಶೀಲ್ಡ್ ತಯಾರಿಕಾ ಸಂಸ್ಥೆ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಆದಾರ್ ಪೂನಾವಾಲ ಅವರು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಆದಾರ್ ಪೂನಾವಾಲ-ಮನ್ಸುಖ್ ಮಾಂಡವಿಯಾ ಭೇಟಿ
ಆದಾರ್ ಪೂನಾವಾಲ-ಮನ್ಸುಖ್ ಮಾಂಡವಿಯಾ ಭೇಟಿ

ನವದೆಹಲಿ: ಕೋವಿಶೀಲ್ಡ್ ತಯಾರಿಕಾ ಸಂಸ್ಥೆ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಆದಾರ್ ಪೂನಾವಾಲ ಅವರು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ನಿರ್ಣಾಯಕ ಪಾತ್ರವಹಿಸಿರುವ ಲಸಿಕೆಗಳಲ್ಲಿ ಕೋವಿಶೀಲ್ಜ್ ಕೂಡ ಒಂದಾಗಿದ್ದು, ಈ ಲಸಿಕೆಯನ್ನು ಆದಾರ್ ಪೂನಾವಾಲ ಅವರ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ತಯಾರಿಸುತ್ತಿದೆ. 

ಈಗಾಗಲೇ ದೇಶಾದ್ಯಂತ ಕೋಟ್ಯಂತರ ಡೋಸ್ ಲಸಿಕೆ ವಿತರಣೆಯಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಮಾಣದ ಲಸಿಕೆ ಸರಬರಾಜು ಕುರಿತಂತೆ ಆದಾರ್ ಪೂನಾವಾಲರೊಂದಿಗೆ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಆದಾರ್ ಪೂನಾವಾಲ ಅವರು, 'ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವ ಕುರಿತು ನಾವು ಚರ್ಚಿಸಿದ್ದೇವೆ. ಯುರೋಪಿನ 17 ಕ್ಕೂ ಹೆಚ್ಚು ದೇಶಗಳು ಈಗಾಗಲೇ ಕೋವಿಡ್‌ಶೀಲ್ಡ್ ಲಸಿಕೆಯನ್ನು ಅನುಮೋದಿಸಿವೆ ಮತ್ತು ಇನ್ನೂ ಅನೇಕ ದೇಶಗಳು ಅನುಮೋದನೆ ನೀಡಲು ಸರದಿಯಲ್ಲಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಉತ್ಪಾದನಾ ಪ್ರಮಾಣ ಹೆಚ್ಚಿಸುವ ಕುರಿತು ಚರ್ಚೆ ನಡೆಸಲಾಯಿತು ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com