ಲೋಕಾಯುಕ್ತರಿಂದ ತರಾಟೆ: ಹಿರಿಯ ನಾಗರಿಕರಿಗೆ ನಿವೇಶನ ವಾಪಸ್ ನೀಡಿದ ಬಿಡಿಎ, 50 ಸಾವಿರ ದಂಡ 

ಲೋಕಾಯುಕ್ತ ಬಿಡಿಎಗೆ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಹಿರಿಯ ನಾಗರಿಕರಿಗೆ ಮಾರಾಟ ಮಾಡಲಾಗಿದ್ದ ನಿವೇಶನವನ್ನು ವಾಪಸ್ ಅವರ ಹೆಸರಿಗೆ ಮರಳಿ ನೀಡಲಾಗಿದೆ. 
ಬಿಡಿಎ
ಬಿಡಿಎ

ಬೆಂಗಳೂರು: ಲೋಕಾಯುಕ್ತ ಬಿಡಿಎಗೆ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಹಿರಿಯ ನಾಗರಿಕರಿಗೆ ಮಾರಾಟ ಮಾಡಲಾಗಿದ್ದ ನಿವೇಶನವನ್ನು ವಾಪಸ್ ಅವರ ಹೆಸರಿಗೆ ಮರಳಿ ನೀಡಲಾಗಿದೆ. 

ಹೆಚ್ಎಎಲ್ 2 ನೇ ಹಂತದಲ್ಲಿದ್ದ ನಿವೇಶನವನ್ನು ಹಿರಿಯ ನಾಗರಿಕರಿಗೆ ಮರಳಿ ನೀಡುತ್ತಿರುವುದಾಗಿ ಬಿಡಿಎ ಕಾರ್ಯದರ್ಶಿ ಲೋಕಾಯುಕ್ತರ ಎದುರು ಸ್ಪಷ್ಟನೆ ನೀಡಿದ್ದಾರೆ. 

ಹೆಚ್ಎಎಲ್ 2 ನೇ ಹಂತದಲ್ಲಿರುವ ನಂ. 3504/ಸಿ ನಿವೇಶನವನ್ನು ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಿದ್ದ ದೂರುದಾರರಾದ ವಿಎಸ್ ಕನಕರಾಜ್ ಹಾಗೂ ಅವರ ಪತ್ನಿ ವಸಂತ ಕೋಕಿಲಂ ಕನಕರಾಜ್ ಅವರಿಗೆ ಮರುಮಂಜೂರು ಮಾಡಲಾಗಿದೆ. 

ಲೋಕಾಯುಕ್ತರು ನೀಡಿರುವ ಆದೇಶದ ಪ್ರಕಾರ 2003 ರಲ್ಲಿ ಮೇಲೆ ಹೇಳಿದ ನಿವೇಶನವನ್ನು ಹಿರಿಯ ನಾಗರಿಕ ದಂಪತಿಗೆ 64.74 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿ ಸೇಲ್ ಡೀಡ್ ನ್ನು ಬಿಡಿಎ 2005 ರಲ್ಲಿ ನೀಡಿತ್ತು.  ಆದರೆ ಅದೇ ನಿವೇಶನವನ್ನು ರವಿಕುಮಾರ್ ಹಾಗೂ ರಮೇಶ್ ಎಂಬುವವರಿಗೆ 2018 ರಲ್ಲಿ ಬೆಂಗಳೂರು ದಕ್ಷಿಣಾ ತಾಲೂಕಿನ ಯಡಿಯೂರಿನಲ್ಲಿ 19.5 ಗುಂಟೆ ಪ್ರದೇಶವನ್ನು ರಸ್ತೆಗಾಗಿ ಸ್ವಾಧೀನಪಡಿಸಿಕೊಂಡಿದ್ದಕ್ಕೆ ಪರ್ಯಾಯವಾಗಿ ಹೊಸ ನಂಬರ್ ನೊಂದಿಗೆ ಮಂಜೂರು ಮಾಡಲಾಯಿತು. ಈ ರೀತಿ ಮಂಜೂರಾಗಿದ್ದ ನಿವೇಶನವನ್ನು ಮತ್ತೆ ಶಶಿಕುಮಾರ್ ನಾಯ್ಕ್ ಎಂಬುವವರಿಗೆ ಮಾರಾಟ ಮಾಡಲಾಗಿತ್ತು. ಬಿಡಿಎ ವಿಜಿಲೆನ್ಸ್ ವಿಭಾಗಕ್ಕೆ ಈ ಸಂಬಂಧ ವರದಿ ಸಲ್ಲಿಸಿದಾಗ ಮೂಲತಃ ಈ ನಿವೇಶನ ಹರಾಜು ಪ್ರಕ್ರಿಯೆಯಲ್ಲಿ ಹಿರಿಯ ನಾಗರಿಕರಿಗೆ ಮಾರಾಟ ಮಾಡಲಾಗಿದ್ದ ನಿವೇಶನ ಎಂಬುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಗೊಂದಲಗಳುಂಟಾಗಿತ್ತು. ಈಗ ಲೋಕಾಯುಕ್ತರು ನೀಡಿರುವ ಆದೇಶದ ಪ್ರಕಾರ ಅದು ಹಿರಿಯ ನಾಗರಿಕ ದಂಪತಿಗೆ ಸೇರಿದ ನಿವೇಶನವಾಗಿದೆ. 

ದೂರು ನೀಡಿದ್ದ ವೃದ್ಧ ದಂಪತಿಗೆ ಬಿಡಿಎ ದುರಾಡಳಿತದ ಪರಿಣಾಮವಾಗಿ ಅನಾನುಕೂಲ ಉಂಟುಮಾಡಿದ್ದಕ್ಕಾಗಿ  50 ಸಾವಿರ ರೂಪಾಯಿಗಳ ಪರಿಹಾರ ಮೊತ್ತವನ್ನು ಪಾವತಿ ಮಾಡಲು ಸೂಚಿಸಲಾಗಿದೆ. ಬಿಡಿಎ ನಕಲಿ ದಾಖಲೆ ಸೃಷ್ಟಿಸಿದ ಅಧಿಕಾರಿಗಳಿಂದ ಈ ಮೊತ್ತಕ್ಕೆ ವಾರ್ಷಿಕ ಶೇ.12 ರಷ್ಟು ಬಡ್ಡಿ ಸಮೇತ ಹಣ ಪಡೆಯಬಹುದಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com