ಪ್ರಧಾನಿ ಮೋದಿಗೆ ಪತ್ರ ಬರೆದು 'ಜನವಿರೋಧಿ' ವಿದ್ಯುತ್ ಮಸೂದೆ ವಿರುದ್ಧ ಮಮತಾ ಪ್ರತಿಭಟನೆ

"ಜನವಿರೋಧಿ" ವಿದ್ಯುತ್(ತಿದ್ದುಪಡಿ) ವಿಧೇಯಕ 2020 ಅನ್ನು ಸಂಸತ್ತಿನಲ್ಲಿ ಮಂಡಿಸುತ್ತಿರುವ ಕೇಂದ್ರದ ಕ್ರಮವನ್ನು ವಿರೋಧಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ...
ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ
ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ

ಕೋಲ್ಕತಾ: "ಜನವಿರೋಧಿ" ವಿದ್ಯುತ್(ತಿದ್ದುಪಡಿ) ವಿಧೇಯಕ 2020 ಅನ್ನು ಸಂಸತ್ತಿನಲ್ಲಿ ಮಂಡಿಸುತ್ತಿರುವ ಕೇಂದ್ರದ ಕ್ರಮವನ್ನು ವಿರೋಧಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

'ಜನವಿರೋಧಿ' ವಿದ್ಯುತ್ ಮಸೂದೆಯನ್ನು ಜಾರಿಗೆ ತರಬಾರದು ಎಂದು ಪ್ರಧಾನಿಗೆ ಒತ್ತಾಯಿಸಿರುವ ಮಮತಾ ಬ್ಯಾನರ್ಜಿ, ಈ ವಿಷಯದ ಬಗ್ಗೆ ವಿಸ್ತೃತ ಮತ್ತು ಪಾರದರ್ಶಕ ಚರ್ಚೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

"ಹೆಚ್ಚು ಟೀಕೆಗೊಳಗಾದ ವಿದ್ಯುತ್(ತಿದ್ದುಪಡಿ) ಮಸೂದೆ 2020ರ ವಿರುದ್ಧ ಪ್ರತಿಭಟನೆ ದಾಖಲಿಸಲು ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. "ಇದನ್ನು ಕಳೆದ ವರ್ಷ ಮಂಡಿಸುವ ಪ್ರಸ್ತಾಪ ಇತ್ತು. ಆದರೆ ನಮ್ಮಲ್ಲಿ ಹಲವರು ಕರಡು ಶಾಸನದ ಜನವಿರೋಧಿ ಅಂಶಗಳನ್ನು ಒತ್ತಿಹೇಳಿದ್ದರು ಮತ್ತು ಕನಿಷ್ಠ ನಾನು ಜೂನ್ 12, 2020 ರಂದು ನಿಮಗೆ ಬರೆದ ಪತ್ರದಲ್ಲಿ ಮಸೂದೆಯ ಎಲ್ಲಾ ಪ್ರಮುಖ ಅಪಾಯಗಳನ್ನು ವಿವರಿಸಿದ್ದೇನೆ" ಎಂದು ಪಶ್ಚಿಮ ಬಂಗಾಳ ಸಿಎಂ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಕಳೆದ ವರ್ಷ ಜೂನ್ 12 ರಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು ಮತ್ತು ಇದು ದೇಶದ ಒಕ್ಕೂಟ ರಚನೆಯನ್ನು "ನಾಶಪಡಿಸುವ" ಕೇಂದ್ರದ ಪ್ರಯತ್ನ ಎಂದು ಕರಡು ವಿದ್ಯುತ್(ತಿದ್ದುಪಡಿ) ಮಸೂದೆ 2020ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಮಸೂದೆಯು ಇಡೀ ರಾಜ್ಯ ವಿದ್ಯುತ್ ಗ್ರಿಡ್ ಅನ್ನು ರಾಷ್ಟ್ರೀಯ ಗ್ರಿಡ್‌ ನ ಭಾಗವಾಗಿ ಮಾಡುವ ಗುರಿ ಹೊಂದಿದೆ ಎಂದು ದೀದಿ ಹೇಳಿದ್ದಾರೆ. 

"ನಮ್ಮ ವಿರೋಧಗಳನ್ನು ಪರಿಗಣಿಸದೆ ಮಸೂದೆ ಮರಳಿ ಬರುತ್ತಿದೆ ಎಂದು ಕೇಳಿದಾಗ ನಾನು ದಿಗ್ಭ್ರಮೆಗೊಂಡಿದ್ದೇನೆ ಮತ್ತು ವಾಸ್ತವವಾಗಿ ಈ ಬಾರಿ ಕೆಲವು ಜನವಿರೋಧಿ ವೈಶಿಷ್ಟ್ಯಗಳೊಂದಿಗೆ ಮಸೂದೆ ಬರುತ್ತಿದೆ" ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com