ಕೋವಿಡ್ ಲಸಿಕೆ: 2.29 ಕೋಟಿ ಡೋಸ್ ಲಸಿಕೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಇದೆ: ಕೇಂದ್ರ ಸರ್ಕಾರ

ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಇನ್ನೂ 2.29 ಕೋಟಿ ಡೋಸ್ ಲಸಿಕೆ  ಬಳಕೆಯಾಗದೇ ಉಳಿದಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕೋವಿಶೀಲ್ಡ್ ಲಸಿಕೆ ನೀಡಲು ತಯಾರಾಗುತ್ತಿರುವ ಆರೋಗ್ಯ ಕಾರ್ಯಕರ್ತೆ
ಕೋವಿಶೀಲ್ಡ್ ಲಸಿಕೆ ನೀಡಲು ತಯಾರಾಗುತ್ತಿರುವ ಆರೋಗ್ಯ ಕಾರ್ಯಕರ್ತೆ

ನವದೆಹಲಿ:  ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಇನ್ನೂ 2.29 ಕೋಟಿ ಡೋಸ್ ಲಸಿಕೆ  ಬಳಕೆಯಾಗದೇ ಉಳಿದಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ದೇಶದಲ್ಲಿ ಕೋವಿಡ್ ಲಸಿಕೆ ನೀಡಿಕೆ ಕಾರ್ಯಕ್ರಮ ಹೊಸ ಮೈಲುಗಲ್ಲಿಗೇರಿದ್ದು, ಈ ವರೆಗೂ ದೇಶಾದ್ಯಂತ 50 ಕೋಟಿ ಡೋಸ್ ದೂ ಅಧಿಕ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ವರೆಗೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 51.66 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದ್ದು, ಈ ಪೈಕಿ 49.74 ಕೋಟಿ ಡೋಸ್ ಲಸಿಕೆಗಳನ್ನು ರಾಜ್ಯ ಸರ್ಕಾರಗಳು ಬಳಕೆ ಮಾಡಿಕೊಂಡಿವೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com