ಜಾತಿ ಆಧಾರಿತ ಜನಗಣತಿ, ಒಬಿಸಿಗೆ ಪ್ರತ್ಯೇಕ ಸಚಿವಾಲಯಕ್ಕೆ ಬಿಜೆಪಿ ಮೈತ್ರಿ ಪಕ್ಷ ಅಪ್ನಾ ದಳ ಒತ್ತಾಯ

ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಮೈತ್ರಿ ಅಪ್ನಾ ದಳ (ಎಸ್ ) ಇತರೆ ಹಿಂದುಳಿದವರ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಮತ್ತು ಸಮುದಾಯದ ನಿಖರವಾದ ಜನಸಂಖ್ಯೆಯನ್ನು ಕಂಡುಹಿಡಿಯಲು ದೇಶಾದ್ಯಂತ ಜಾತಿ ಆಧಾರಿತ ಜನಗಣತಿ ನಡೆಸಬೇಕೆಂದು ಒತ್ತಾಯಿಸಿದೆ.  
ಆಶಿಷ್ ಪಟೇಲ್
ಆಶಿಷ್ ಪಟೇಲ್

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಮೈತ್ರಿ ಅಪ್ನಾ ದಳ (ಎಸ್ ) ಇತರೆ ಹಿಂದುಳಿದವರ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಮತ್ತು ಸಮುದಾಯದ ನಿಖರವಾದ ಜನಸಂಖ್ಯೆಯನ್ನು ಕಂಡುಹಿಡಿಯಲು ದೇಶಾದ್ಯಂತ ಜಾತಿ ಆಧಾರಿತ ಜನಗಣತಿ ನಡೆಸಬೇಕೆಂದು ಒತ್ತಾಯಿಸಿದೆ.  

ಅಪ್ನಾ ದಳ (ಎಸ್ ) ಉತ್ತರ ಪ್ರದೇಶ ಮೂಲದ ಪಕ್ಷವಾಗಿದ್ದು, ಜೆಡಿಯು ನಂತರ ಇದೀಗ ಜಾತಿ ಗಣತಿ ಬೇಡಿಕೆ ಇಟ್ಟ ಎರಡನೇಯ ಬಿಜೆಪಿ ಮೈತ್ರಿ ಪಕ್ಷವಾಗಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳುಗಳು ಇರುವಂತೆಯೇ ಅಪ್ನಾ ದಳ ಈ ಬೇಡಿಕೆ ಇಟ್ಟಿರುವುದು ಮಹತ್ವ ಪಡೆದುಕೊಂಡಿದೆ. ಉತ್ತರ ಪ್ರದೇಶದಲ್ಲಿ ಇತರೆ ಹಿಂದುಳಿದ ವರ್ಗದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 

ವಿಶೇಷವಾಗಿ ಒಬಿಸಿ ಸಮುದಾಯದ ನಿಖರವಾದ ಜನಸಂಖ್ಯೆಯನ್ನು ಕಂಡುಹಿಡಿಯಲು ಜಾತಿ ಆಧಾರಿತ ಜನಗಣತಿ ಅಗತ್ಯವಾಗಿದೆ ಎಂದು ಅಪ್ನಾ ದಳ (ಎಸ್) ಕಾರ್ಯಾಧ್ಯಕ್ಷ ಆಶಿಷ್ ಪಟೇಲ್  ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.  ಸ್ವಾತಂತ್ರ್ಯ ನಂತರ ಎಸ್ ಸಿ, ಎಸ್ ಟಿಯನ್ನು ಎಲ್ಲಾ ಗಣತಿಗಳಲ್ಲಿ ಲೆಕ್ಕ ಹಾಕಲಾಗಿದೆ. ಆದರೆ, ಒಬಿಸಿ ವರ್ಗದವರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದು ನಿಖರವಾಗಿ ತಿಳಿದಿಲ್ಲ. ಆದ್ದರಿಂದ ವಿಶೇಷವಾಗಿ ಒಬಿಸಿಯವರ ನಿಖರ ಜನಸಂಖ್ಯೆ ತಿಳಿಯಲು ಜಾತಿ ಆಧಾರಿತ ಜನಗಣತಿ ನಡೆಸಬೇಕೆಂದ ಸರ್ಕಾರದ ಬಳಿ ಮನವಿ ಮಾಡುವುದಾಗಿ ಅವರು ಹೇಳಿದರು.  

ಒಬಿಸಿ ವರ್ಗದ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ರಚನೆ ಕೂಡಾ ತಮ್ಮ ಪಕ್ಷದ ಬೇಡಿಕೆಯಾಗಿದೆ.  ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಇರುವಂತೆಯೇ ಒಬಿಸಿ ಸಮುದಾಯದ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು. ಅಪ್ನಾ ದಳ (ಎಸ್ ) 2014ರಿಂದಲೂ ಎನ್ ಡಿಎ ಮೈತ್ರಿ ಪಕ್ಷವಾಗಿದೆ. 2021ರ ಜನಗಣತಿ ಕಾರ್ಯ ಕಳೆದ ವರ್ಷದ ಏಪ್ರಿಲ್ ನಿಂದ ಆರಂಭವಾಗಬೇಕಿತ್ತು. ಆದರೆ, ಕೋವಿಡ್-19 ಸಾಂಕ್ರಾಮಿಕ ಕಾರಣದಿಂದಾಗಿ ಜನಗಣತಿ ಕಾರ್ಯ ನಡೆಯುತ್ತಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com