ಯುಎನ್‍ಎಸ್‍ಸಿಯಲ್ಲಿ ಕಡಲ ಭದ್ರತಾ ಸಹಕಾರಕ್ಕಾಗಿ 5 ತತ್ವಗಳನ್ನು ಮುಂದಿಟ್ಟ ಪ್ರಧಾನಿ ಮೋದಿ

ಉನ್ನತ ಮಟ್ಟದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಕ್ತ ಚರ್ಚೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಕಡಲ ವ್ಯಾಪಾರಕ್ಕೆ ಅಡೆತಡೆಗಳನ್ನು ತೆಗೆದುಹಾಕುವುದು ಮತ್ತು ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸುವುದು ಸೇರಿದಂತೆ ಐದು ತತ್ವಗಳನ್ನು ಮಂಡಿಸಿದರು.
ನರೇಂದ್ರ ಮೋದಿ
ನರೇಂದ್ರ ಮೋದಿ

ವಿಶ್ವಸಂಸ್ಥೆ/ನವದೆಹಲಿ: ಉನ್ನತ ಮಟ್ಟದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಕ್ತ ಚರ್ಚೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಕಡಲ ವ್ಯಾಪಾರಕ್ಕೆ ಅಡೆತಡೆಗಳನ್ನು ತೆಗೆದುಹಾಕುವುದು ಮತ್ತು ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸುವುದು ಸೇರಿದಂತೆ ಐದು ತತ್ವಗಳನ್ನು ಮಂಡಿಸಿದರು. ಇದರ ಆಧಾರದ ಮೇಲೆ ಕಡಲ ಭದ್ರತಾ ಸಹಕಾರಕ್ಕಾಗಿ ಜಾಗತಿಕ ಮಾರ್ಗಸೂಚಿ ತಯಾರಿಸಬಹುದು ಎಂದು ಹೇಳಿದರು. 

* ಕಾನೂನುಬದ್ಧ ಕಡಲ ವ್ಯಾಪಾರಕ್ಕಾಗಿ ನಾವು ಅಡೆತಡೆಗಳನ್ನು ತೆಗೆದುಹಾಕಬೇಕು. ಜಾಗತಿಕ ಸಮೃದ್ಧಿಯು ಸಮುದ್ರ ವ್ಯಾಪಾರದ ಸಕ್ರಿಯ ಹರಿವನ್ನು ಅವಲಂಬಿಸಿರುತ್ತದೆ. ಕಡಲ ವ್ಯಾಪಾರದಲ್ಲಿ ಯಾವುದೇ ಅಡಚಣೆಯು ಜಾಗತಿಕ ಆರ್ಥಿಕತೆಗೆ ಧಕ್ಕೆ ತರಬಹುದು ಎಂದು ಮೋದಿ ಮೊದಲ ತತ್ವವನ್ನು ವಿವರಿಸಿದರು.

* ಕಡಲ ವಿವಾದಗಳ ಇತ್ಯರ್ಥ ಶಾಂತಿಯುತವಾಗಿರಬೇಕು ಮತ್ತು ಅಂತಾರಾಷ್ಟ್ರೀಯ ಕಾನೂನಿನ ಆಧಾರದ ಮೇಲೆ ಇರಬೇಕು.

* ಇದು ಪರಸ್ಪರ ನಂಬಿಕೆ ಮತ್ತು ಆತ್ಮವಿಶ್ವಾಸಕ್ಕೆ ಬಹಳ ಮುಖ್ಯವಾಗಿದೆ. ಜಾಗತಿಕ ಶಾಂತಿ ಮತ್ತು ಸ್ಥಿರತೆಯನ್ನು ನಾವು ಖಚಿತಪಡಿಸಿಕೊಳ್ಳಲು ಇದೊಂದೇ ಮಾರ್ಗ ಎಂದು ಹೇಳಿದರು.

* ಪ್ರಾಕೃತಿಕ ವಿಕೋಪಗಳನ್ನು ಮತ್ತು ರಾಜ್ಯೇತಕ ಘಟಕಗಳಿಂದ ಉಂಟಾಗುವ ಕಡಲ ಬೆದರಿಕೆಗಳನ್ನು ಒಟ್ಟಾಗಿ ಎದುರಿಸುವ ಅವಶ್ಯಕತೆ ಇದೆ ಎಂಬುದು ಮೂರನೇ ಪ್ರಮುಖ ತತ್ವವಾಗಿದೆ. ಈ ವಿಷಯದ ಮೇಲೆ ಪ್ರಾದೇಶಿಕ ಸಹಕಾರವನ್ನು ಹೆಚ್ಚಿಸಲು ಭಾರತವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.

* ಕಡಲ ಪರಿಸರ ಮತ್ತು ಕಡಲ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಮತ್ತು ಜವಾಬ್ದಾರಿಯುತ ಕಡಲ ಸಂಪರ್ಕವನ್ನು ಪ್ರೋತ್ಸಾಹಿಸುವುದು ಪ್ರಧಾನಿ ಮೋದಿ ಅವರ ನಾಲ್ಕನೇ ಮತ್ತು ಐದನೆಯ ತತ್ವಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com