ಐತಿಹಾಸಿಕ ಕ್ಷಣ: ಪರೀಕ್ಷಾರ್ಥ ಸಂಚಾರ ಮುಗಿಸಿದ ಭಾರತದ ಹೆಮ್ಮೆಯ ವಿಮಾನವಾಹಕ ನೌಕೆ 'ಐಎಸಿ ವಿಕ್ರಾಂತ್'

ಭಾರತೀಯ ನೌಕಾದಳಕ್ಕೆ ಇಂದು ಐತಿಹಾಸಿಕ ದಿನವಾಗಿದ್ದು, ಭಾರತದ ಹೆಮ್ಮೆಯ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ 'ಐಎಸಿ ವಿಕ್ರಾಂತ್' ತನ್ನ ಪರೀಕ್ಷಾರ್ಥ ಸಂಚಾರ ಮುಗಿಸಿ ಸೇವೆಗೆ ಸರ್ವಸನ್ನದ್ಧವಾಗಿದೆ.
ಐಎಸಿ ವಿಕ್ರಾಂತ್
ಐಎಸಿ ವಿಕ್ರಾಂತ್

ಕೊಚ್ಚಿ: ಭಾರತೀಯ ನೌಕಾದಳಕ್ಕೆ ಇಂದು ಐತಿಹಾಸಿಕ ದಿನವಾಗಿದ್ದು, ಭಾರತದ ಹೆಮ್ಮೆಯ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ 'ಐಎಸಿ ವಿಕ್ರಾಂತ್' ತನ್ನ ಪರೀಕ್ಷಾರ್ಥ ಸಂಚಾರ ಮುಗಿಸಿ ಸೇವೆಗೆ ಸರ್ವಸನ್ನದ್ಧವಾಗಿದೆ.

ಹೌದು.. ಭಾರತದ ಮೊದಲ ದೇಶೀಯ ವಿಮಾನ ವಾಹಕ ಯುದ್ಧನೌಕೆ ವಿಕ್ರಾಂತ್ ತನ್ನ ಐದು ದಿನಗಳ ಪರೀಕ್ಷಾರ್ಥ ಸಂಚಾರ ಮುಗಿಸಿ ಹಿಂದಿರುಗಿದೆ. 

 ಮುಂದಿನ ವರ್ಷ ಆಗಸ್ಟ್ ವೇಳೆಗೆ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸುವ ಹಿನ್ನಲೆಯಲ್ಲಿ ಅದಕ್ಕೂ ಮುಂಚಿತವಾಗಿ ನಿರ್ಣಾಯಕ ಸಮುದ್ರ ಪ್ರಯೋಗಗಳಿಗಾಗಿ ಆಗಸ್ಟ್ 4 ರಂದು ಕೊಚ್ಚಿಯಿಂದ  ಐಎಸಿ ವಿಕ್ರಾಂತ್ ಪ್ರಯಾಣ ಬೆಳೆಸಿತ್ತು.  ಸುಮಾರು 40,000 ಟನ್​ ತೂಕದ ಈ ಯುದ್ಧನೌಕೆಯ ಕಾರ್ಯಕ್ಷಮತೆಯನ್ನು ಪರೀಕ್ಷೆ ಮಾಡಲು, ಐದು ದಿನಗಳ ಸಮುದ್ರ ಪ್ರಯೋಗ ಕಳೆದ ಬುಧವಾರದಿಂದ ಪ್ರಾರಂಭವಾಗಿತ್ತು. ಇಂದು ತನ್ನ ಪರೀಕ್ಷಾರ್ಥ ಪ್ರಯಾಣ ಪೂರ್ಣಗೊಳಿಸಿ ನೌಕೆ ವಾಪಸ್ ಆಗಿದೆ. 

ದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ
ಐಎಸಿ ವಿಕ್ರಾಂಕ್ ದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆಯಾಗಿದ್ದು, ಅಂದಾಜು 23 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ವಿಕ್ರಾಂತ್​ ಯುದ್ಧನೌಕೆಯನ್ನು ತಯಾರಿಸಲಾಗಿದ್ದು. ಈ ಸ್ವದೇಶಿ ನಿರ್ಮಿತ ವಿಮಾನ ವಾಹಕ ಯುದ್ಧನೌಕೆ ಮುಂದಿನ ವರ್ಷ ಆಗಸ್ಟ್​​ನಿಂದ ಭಾರತೀಯ ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸಲಿದೆ. ಈ ಯುದ್ಧ ನೌಕೆಯೀಗ ಯಶಸ್ವಿಯಾಗಿ ಪರೀಕ್ಷಾರ್ಥ ಸಂಚಾರವನ್ನು ಪೂರ್ಣಗೊಳಿಸಿದೆ. 

ಐಎಸಿ ವಿಕ್ರಾಂತ್ ವಿಶೇಷತೆಗಳು
ಈ ನೌಕೆಯನ್ನು ಸುಮಾರು 23 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಈ ಯುದ್ಧನೌಕೆ 262 ಮೀಟರ್​ ಉದ್ದವಿದ್ದು, 62 ಮೀಟರ್​ ಅಗಲವಾಗಿದೆ. 59 ಮೀಟರ್​ ಎತ್ತರವಿದೆ. ಒಟ್ಟಾರೆ 14 ಡೆಕ್​ಗಳಿವೆ.  ಈ ಯುದ್ಧನೌಕೆಯಲ್ಲಿ ಮಿಗ್ -29 ಕೆ ಯುದ್ಧ ವಿಮಾನಗಳು, ಕಮೋವ್-31 ಹೆಲಿಕಾಪ್ಟರ್‌ಗಳು, ಎಂಎಚ್ -60 ಆರ್ ಮಲ್ಟಿ ರೋಲ್ ಹೆಲಿಕಾಪ್ಟರ್‌ಗಳು ಕಾರ್ಯ ನಿರ್ವಹಿಸುತ್ತವೆ.  ಇದು ಸುಮಾರು 28 ನಾಟಿಕಲ್ ಗರಿಷ್ಠ ವೇಗವನ್ನು ಹೊಂದಿದ್ದು, ಸುಮಾರು 7,500 ನಾಟಿಕಲ್ ಮೈಲುಗಳನ್ನು 18 ನಾಟಿಕಲ್ ವೇಗದೊಂದಿಗೆ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ನೌಕೆಯಲ್ಲಿ 2,300 ಕ್ಕೂ ಹೆಚ್ಚು ಕಂಪಾರ್ಟ್ ಮೆಂಟ್ ಗಳಿದ್ದು, ಸುಮಾರು 1,700 ಸಿಬ್ಬಂದಿಗಾಗಿ ವಿನ್ಯಾಸಗೊಳಿಸಲಾಗಿದೆ. ಮಹಿಳಾ ಅಧಿಕಾರಿಗಳಿಗೆ ಲಿಂಗ-ಸೂಕ್ಷ್ಮ ವಸತಿ ಸೌಕರ್ಯಗಳಿವೆ. ಯಂತ್ರೋಪಕರಣಗಳ ಕಾರ್ಯಾಚರಣೆ, ಹಡಗು ಸಂಚರಣೆ ಮತ್ತು ಬದುಕುಳಿಯುವಿಕೆಗೆ ಹೆಚ್ಚಿನ ಮಟ್ಟದ ಯಾಂತ್ರೀಕೃತಗೊಂಡ ಹಡಗನ್ನು ಸ್ಥಿರ-ವಿಂಗ್ ಮತ್ತು ರೋಟರಿ ವಿಮಾನಗಳ ವಿಂಗಡಣೆಗಾಗಿ ವಿನ್ಯಾಸಗೊಳಿಸಲಾಗಿದೆ.

ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಹೊಂದಿದೆ ಕೆಲವೇ ರಾಷ್ಚ್ರಗಳ ಪಟ್ಟಿಗೆ ಭಾರತ
ವಿಕ್ರಾಂತ್ ಸೇರ್ಪಡೆಯೊಂದಿಗೆ ಭಾರತವು ಸ್ಥಳೀಯವಾಗಿ ವಿಮಾನವಾಹಕ ನೌಕೆಯನ್ನು ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿರುವ ಆಯ್ದ ಕೇಲವೇ ರಾಷ್ಟ್ರಗಳ ಗುಂಪಿಗೆ ಸೇರಿದಂತಾಗಿದೆ. ಇದು ಕೇಂದ್ರ ಸರ್ಕಾರದ 'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ಉತ್ತೇಜನ ನೀಡುತ್ತದೆ. ಐಎಸಿಯ ಸೇರ್ಪಡೆಯು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. 

ವಿಕ್ರಾಂತ್ ಹೆಸರೇಕೆ?
ಈ ಹಿಂದೆ 1961ರಿಂದ 1997ರವರೆಗೂ ಐಎನ್ಎಸ್ ವಿಕ್ರಾಂತ್ ಭಾರತೀಯ ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸಿತ್ತು. ಈ ನೌಕೆಯ ಗೌರವಾರ್ಥ ಮತ್ತು ಸ್ಮರಣಾರ್ಥವಾಗಿ ದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆಗೆ ಅದೇ ಹೆಸರನ್ನಿಡಲಾಗಿದೆ.

ಭಾರತದ ಪಾಲಿಗೆ ಐತಿಹಾಸಿಕ ದಿನ
ಇದು ಭಾರತದ ಪಾಲಿಗೆ ಐತಿಹಾಸಿಕ ದಿನ. ಯುದ್ಧನೌಕೆಯ ಐದು ದಿನಗಳ ಪ್ರಯೋಗದ ನಂತರ ನಾವೀಗ ಕೊಚ್ಚಿಗೆ ವಾಪಸ್​ ಆಗುತ್ತಿದ್ದೇವೆ. ನಮಗೀಗ ಸಂಪೂರ್ಣ ತೃಪ್ತಿಯಿದೆ. ಇಡೀ ತಂಡದ ಶ್ರಮದಿಂದ ಇಂಥದ್ದೊಂದು ಮಹತ್ವದ ಕಾರ್ಯ ಸಾಧಿಸಲು ಸಾಧ್ಯವಾಗಿದೆ ಎಂದು ಉಪ ನೌಕಾ ಸೇನಾಪತಿ ಎ.ಕೆ.ಚಾವ್ಲಾ ತಿಳಿಸಿದ್ದಾರೆ.

'ಈ ಯುದ್ಧನೌಕೆ 262 ಮೀಟರ್​ ಉದ್ದವಿದ್ದು, 62 ಮೀಟರ್​ ಅಗಲವಾಗಿದೆ. 59 ಮೀಟರ್​ ಎತ್ತರವಿದೆ. ಒಟ್ಟಾರೆ 14 ಡೆಕ್​ಗಳಿವೆ. ಯುದ್ಧ ನೌಕೆಯ ಸಿಸ್ಟಂ ಪ್ಯಾರಾಮೀಟರ್​ಗಳು ತೃಪ್ತಿದಾಯಕವಾಗಿ ಕೆಲಸ ಮಾಡುತ್ತಿವೆ. ನೌಕೆಯ ಒಟ್ಟಾರೆ ಕಾರ್ಯಕ್ಷಮತೆ, ಹಲ್, ವಿದ್ಯುತ್​ ಉತ್ಪಾದನೆ, ಪ್ರೊಪಲ್ಷನ್, ಪೂರೈಕೆ ಸೇರಿ ಎಲ್ಲ ವಿಭಾಗಗಳನ್ನೂ ಪ್ರಯೋಗ ಹಂತದಲ್ಲಿ ಪರೀಕ್ಷಿಸಲಾಗಿದೆ ಎಂದು ನೌಕಾಪಡೆ ಮಾಹಿತಿ ನೀಡಿದೆ. 

ನೌಕೆಯ ಎಲ್ಲ ಪ್ರಯೋಗಗಳನ್ನು ವೈಸ್ ಅಡ್ಮಿರಲ್ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ದಕ್ಷಿಣ ನೌಕಾ ಕಮಾಂಡರ್ ಎಕೆ ಚಾವ್ಲಾ ಪರಿಶೀಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com