ತ್ರಿಪುರಾದಲ್ಲಿ ಅಭಿಷೇಕ್, ಟಿಎಂಸಿ ಕಾರ್ಯಕರ್ತರ ಮೇಲೆ ನಡೆದ ದಾಳಿ ಹಿಂದೆ ಅಮಿತ್ ಶಾ ಕೈವಾಡ: ಮಮತಾ ಬ್ಯಾನರ್ಜಿ
ಇತ್ತೀಚಿಗೆ ತ್ರಿಪುರಾದಲ್ಲಿ ತಮ್ಮ ಸೋದರಳಿಯ, ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹಾಗೂ ಇತರ ಪಕ್ಷದ ಕಾರ್ಯಕರ್ತರ ಮೇಲೆ ನಡೆದ ದಾಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಹೊಣೆ...
Published: 09th August 2021 01:15 PM | Last Updated: 09th August 2021 01:15 PM | A+A A-

ಮಮತಾ ಬ್ಯಾನರ್ಜಿ
ಕೋಲ್ಕತ್ತಾ: ಇತ್ತೀಚಿಗೆ ತ್ರಿಪುರಾದಲ್ಲಿ ತಮ್ಮ ಸೋದರಳಿಯ, ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹಾಗೂ ಇತರ ಪಕ್ಷದ ಕಾರ್ಯಕರ್ತರ ಮೇಲೆ ನಡೆದ ದಾಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಹೊಣೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಆರೋಪಿಸಿದ್ದಾರೆ.
ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಗಾಯಗೊಂಡ ಟಿಎಂಸಿ ಕಾರ್ಯಕರ್ತರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಮಮತಾ, ಅಂತಹವರಿಂದ ತಾನು ಧೃತಿಗೆಡುವುದಿಲ್ಲ ಎಂದು ಪ್ರತಿಪಾದಿಸಿದರು.
ಬಿಜೆಪಿ ಆಡಳಿತವಿರುವ ತ್ರಿಪುರಾದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಅಭಿಷೇಕ್ ಬ್ಯಾನರ್ಜಿ ಮತ್ತು ಟಿಎಂಸಿ ವಿದ್ಯಾರ್ಥಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದ ಕೆಲವು ದಿನಗಳ ನಂತರ ದೀದಿ ಕೇಂದ್ರ ಗೃಹ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
"ಬಿಜೆಪಿ ತ್ರಿಪುರಾ, ಅಸ್ಸಾಂ ಮತ್ತು ಉತ್ತರಪ್ರದೇಶದಲ್ಲಿ ಅರಾಜಕ ಸರ್ಕಾರವನ್ನು ನಡೆಸುತ್ತಿದೆ ಮತ್ತು ತ್ರಿಪುರಾದಲ್ಲಿ ಅಭಿಷೇಕ್ ಮತ್ತು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ನಡೆದ ಹಲ್ಲೆಯನ್ನು ನಾವು ಖಂಡಿಸುತ್ತೇವೆ" ಎಂದರು.
"ಕೇಂದ್ರ ಗೃಹ ಸಚಿವರ ಸಕ್ರಿಯ ಬೆಂಬಲವಿಲ್ಲದೆ ಇಂತಹ ದಾಳಿಗಳು ನಡೆಯಲು ಸಾಧ್ಯವಿಲ್ಲ" ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹೇಳಿದ್ದಾರೆ.