ಉತ್ತರಪ್ರದೇಶದಲ್ಲಿ ನಕಲಿ ಕೋವಿಡ್ ಡೋಸ್ ನೀಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು!

ಕೋವಿಡ್ ಲಸಿಕೆಯ ಬದಲು ಡೆಕ್ಸೋನಾ ಮತ್ತು ರಾನಿಟಿಡಿನ್ ಚುಚ್ಚುಮದ್ದು ನೀಡುತ್ತಿದ್ದ ವಾರಣಾಸಿಯ ಪಿಂಡ್ರಾದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಯೋಗಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಖನೌ: ಕೋವಿಡ್ ಲಸಿಕೆಯ ಬದಲು ಡೆಕ್ಸೋನಾ ಮತ್ತು ರಾನಿಟಿಡಿನ್ ಚುಚ್ಚುಮದ್ದು ನೀಡುತ್ತಿದ್ದ ವಾರಣಾಸಿಯ ಪಿಂಡ್ರಾದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಯೋಗಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಪೊಲೀಸ್ ಅಧಿಕಾರಿಯ ಪ್ರಕಾರ, ಪಿಂಡ್ರಾ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಯೋಗಿ ಮೋಹನ್ ಲಾ ಎಂಬಾತ ಕೋವಿಶೀಲ್ಡ್ ಎಂದು ಹೇಳಿಕೊಂಡು ಲಸಿಕೆ ನೀಡಲು ಜನರಿಂದ 20 ರೂ. 50 ರೂ. ತೆಗೆದುಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ. 

ಸ್ಥಳೀಯ ವ್ಯಕ್ತಿಯೊಬ್ಬರು ಡೋಸ್ ತೆಗೆದುಕೊಂಡು ಲಸಿಕೆ ಪ್ರಮಾಣ ಪತ್ರ ನೀಡುವಂತೆ ಕೇಳಿದಾಗ ವಿಷಯ ಬೆಳಕಿಗೆ ಬಂದಿದೆ. ಅಲ್ಲದೆ ಲಾಲ್ ವ್ಯಕ್ತಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಇದರಿಂದ ಅನುಮಾನಗೊಂಡ ಆತ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ. ಹಿರಿಯ ಸಬ್ ಇನ್ಸ್‌ಪೆಕ್ಟರ್ ಸಂಜಿತ್ ಬಹದ್ದೂರ್ ಸಿಂಗ್ ಸ್ಥಳಕ್ಕೆ ಆಗಮಿಸಿ ಲಾಲ್‌ನಿಂದ ಎರಡು ಆಂಪೂಲ್ ಲಸಿಕೆ ವಶಪಡಿಸಿಕೊಂಡರು. ನಂತರ ಪಿಎಚ್‌ಸಿ ಉದ್ಯೋಗಿಯನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಪಿಎಚ್‌ಸಿ ವೈದ್ಯಕೀಯ ಅಧಿಕಾರಿ ಡಾ ಎಚ್‌ಸಿ ಮೌರ್ಯ ಅವರ ಕೃತ್ಯದ ಬಗ್ಗೆ ಮಾಹಿತಿ ನೀಡಿದರು.

ಡಾ. ಮೌರ್ಯರ ಪ್ರಕಾರ, ಪತ್ತೆಯಾದ ಬಾಟಲಿಯು ಡೆಕ್ಸೋನಾ ಇಂಜೆಕ್ಷನ್ ಮತ್ತು ಆಂಪೌಲ್ ರಾನಿಟಿಡಿನ್ ಆಗಿತ್ತು. ಕೆಲವು ರೋಗಗಳ ಚಿಕಿತ್ಸೆಯಲ್ಲಿ ಡೆಕ್ಸೋನಾ ಇಂಜೆಕ್ಷನ್ ನೀಡಲಾಗಿದ್ದರೂ, ರಾನಿಟಿಡಿನ್ ಒಂದು ಆಂಟಾಸಿಡ್ ಆಗಿತ್ತು.

ಲಾಲ್ ವಿರುದ್ಧ ಪೊಲೀಸ್ ಎಫ್ಐಆರ್ ದಾಖಲಿಸಿದ್ದಾರೆ ಎಂದು ಡಾ. ಮೌರ್ಯ ಹೇಳಿದ್ದಾರೆ. ಐಪಿಸಿ ಸೆಕ್ಷನ್ 268(ಸಾರ್ವಜನಿಕ ಉಪದ್ರವ) ಮತ್ತು 269(ರೋಗ ಅಥವಾ ಸೋಂಕು ಹರಡುವ ನಿರ್ಲಕ್ಷ್ಯ) ಮತ್ತು ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆ ಸೆಕ್ಷನ್ 15(2)(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಲಸಿಕೆ ನೀಡುವುದಕ್ಕಾಗಿ ಜನರಿಂದ 20 ಮತ್ತು 50 ರೂ. ವಸೂಲಿ ಮಾಡುತ್ತಿರುವುದಾಗಿ ಲಾಲ್ ಒಪ್ಪಿಕೊಂಡಿದ್ದು, ಅದು ಕೋವಿಶೀಲ್ಡ್ ಎಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com