ನೀಟ್‌-ಎಂಡಿಎಸ್‌ ಪ್ರವೇಶಕ್ಕಾಗಿ ಕೌನ್ಸೆಲಿಂಗ್‌ ಯಾವಾಗ ನಡೆಸುತ್ತೀರಿ ಅಂತ ಬುಧವಾರದೊಳಗೆ ತಿಳಿಸಿ: ಕೇಂದ್ರಕ್ಕೆ ಸೂಪ್ರೀಂ ಸೂಚನೆ

ನೀಟ್‌ ಹಾಗೂ ಎಂಡಿಎಸ್‌ ಪ್ರವೇಶಕ್ಕೆ ಕೌನ್ಸೆಲಿಂಗ್‌ ಯಾವಾಗ ನಡೆಸುತ್ತೀರಿ ಎಂಬುದನ್ನು ಆಗಸ್ಟ್‌ 11 ರ ಒಳಗೆ ನಮಗೆ ತಿಳಿಸುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ನೀಟ್‌ ಹಾಗೂ ಎಂಡಿಎಸ್‌ ಪ್ರವೇಶಕ್ಕೆ ಕೌನ್ಸೆಲಿಂಗ್‌ ಯಾವಾಗ ನಡೆಸುತ್ತೀರಿ ಎಂಬುದನ್ನು ಆಗಸ್ಟ್‌ 11 ರ ಒಳಗೆ ನಮಗೆ ತಿಳಿಸುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಡಿಸೆಂಬರ್ 16, 2020 ರಂದು ನೀಟ್‌ ಹಾಗೂ ಎಂಡಿಎಸ್‌ ಪ್ರವೇಶ ಪರೀಕ್ಷೆ ನಡೆದಿತ್ತು.

ಕೇಂದ್ರ ಸರ್ಕಾರವು ಈಗ ವೈದ್ಯಕೀಯ ಸೀಟುಗಳಲ್ಲಿ ಒಬಿಸಿ ಮೀಸಲಾತಿಯನ್ನು ಅನುಮೋದಿಸಿದೆ. ಆದರೆ ಕೌನ್ಸೆಲಿಂಗ್ ಯಾವಾಗ ನಡೆಸುತ್ತೀರಿ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಮ್ ಆರ್ ಶಾ ಅವರ ಪೀಠ ಪ್ರಶ್ನಿಸಿದೆ.

ಕೇಂದ್ರದ ಪರ ವಿಚಾರಣೆಗೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್, ವಿಧಾನಗಳನ್ನು ರೂಪಿಸಲು ಮತ್ತು ಈ ಕುರಿತು ಅಧಿಸೂಚನೆಯನ್ನು ಹೊರಡಿಸಲು ಎರಡು ವಾರಗಳ ಕಾಲಾವಕಾಶ ಅಗತ್ಯವಿದೆ ಎಂದು ಹೇಳಿದರು.

'ಏನೀದು. ಕೇಂದ್ರ ಸರ್ಕಾರ ಒಬಿಸಿ ಕೋಟಾ ಅನುಮೋದಿಸಿದೆ ಎಂದು ನಾವು ಕಳೆದ ವಾರವೇ ಓದಿದ್ದೇವೆ. ಈಗ ಮತ್ತೊಮ್ಮೆ ನೀವು ಅದನ್ನು ಅಕ್ಟೋಬರ್ ಅಥವಾ ನವೆಂಬರ್‌ಗೆ ತೆಗೆದುಕೊಳ್ಳುತ್ತೀರಿ. ನಾವು ಇದನ್ನು ಅನುಮತಿಸುವುದಿಲ್ಲ. ನೀವು ಯಾವಾಗ ಕೌನ್ಸೆಲಿಂಗ್ ನಡೆಸಲಿದ್ದೀರಿ ಎಂದು ಬುಧವಾರದೊಳಗೆ ದಯವಿಟ್ಟು ನಮಗೆ ತಿಳಿಸಿ. ನಾವು ವಿಷಯವನ್ನು ಮೊದಲ ಪ್ರಕರಣ ಎಂದು ಪಟ್ಟಿ ಮಾಡುತ್ತಿದ್ದೇವೆ. ನೀವು ನಮಗೆ ತಿಳಿಸುತ್ತೀರಿ ಅಷ್ಟೇ' ಎಂದು ಸಪ್ರೀಂ ಪೀಠ ಹೇಳಿದೆ.

ಜುಲೈ 29 ರಂದು ಕೇಂದ್ರ ಸರ್ಕಾರ ಪ್ರಸ್ತುತ ಶೈಕ್ಷಣಿಕ ವರ್ಷ, 2021-22ರಲ್ಲಿ ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳಿಗಾಗಿ ಅಖಿಲ ಭಾರತ ಕೋಟಾ(ಎಐಕ್ಯೂ) ಯೋಜನೆಯಲ್ಲಿ ಒಬಿಸಿಗೆ ಶೇ. 27 ಮೀಸಲಾತಿ ಮತ್ತು ಆರ್ಥಿಕ ದುರ್ಬಲ ವಿಭಾಗಕ್ಕೆ(ಇಡಬ್ಲ್ಯೂಎಸ್) ಶೇ. 10 ಮೀಸಲಾತಿಯನ್ನು ಘೋಷಿಸಲು ಅನುಮೋದನೆ ನೀಡಿದೆ. 

ನೀಟ್-ಎಂಡಿಎಸ್ 2021ರ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಪ್ರಕಟಿಸುವಲ್ಲಿ ಎಂಸಿಸಿಯಿಂದ ಉಂಟಾದ "ಅನ್ಯಾಯ ಮತ್ತು ಅನಂತ ವಿಳಂಬವನ್ನು" ಪ್ರಶ್ನಿಸಿದೆ ವೈದ್ಯರು ವಕೀಲೆ ತನ್ವಿ ದುಬೆ ಅವರು ಮೂಲಕ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com