ಕೋವಿಡ್-19: ಶಾಲೆಗಳ ಪುನರಾರಂಭಕ್ಕೆ ಲಸಿಕೆ ಪೂರೈಕೆಗೆ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿರುವ ಕೇಂದ್ರ ಸರ್ಕಾರ 

ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದ ಕಳೆದ ಒಂದೂವರೆ ವರ್ಷಗಳಿಂದ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲಿ ಉಳಿದಿದ್ದಾರೆ. ಈ ಬಾರಿ ಶಾಲೆಗಳನ್ನು ಆರಂಭಿಸಲೇಬೇಕೆಂಬ ಒತ್ತಾಯ ಬಹುತೇಕ ಪೋಷಕರಿಂದ ಕೇಳಿಬರುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದ ಕಳೆದ ಒಂದೂವರೆ ವರ್ಷಗಳಿಂದ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲಿ ಉಳಿದಿದ್ದಾರೆ. ಈ ಬಾರಿ ಶಾಲೆಗಳನ್ನು ಆರಂಭಿಸಲೇಬೇಕೆಂಬ ಒತ್ತಾಯ ಬಹುತೇಕ ಪೋಷಕರಿಂದ ಕೇಳಿಬರುತ್ತಿದೆ. ಈ ಸಂದರ್ಭದಲ್ಲಿ ಶಿಕ್ಷಕರಿಗೆ ಉಚಿತವಾಗಿ ಸಿಎಸ್ ಆರ್ ಯೋಜನೆ(ಕಂಪೆನಿ ಸಾಮಾಜಿಕ ಜವಾಬ್ದಾರಿ)ಯಡಿ ಲಸಿಕೆ ನೀಡಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಖಾಸಗಿ ಆಸ್ಪತ್ರೆಗಳನ್ನು ಕೇಳಿಕೊಳ್ಳುತ್ತಿದೆ.

ದೇಶದಲ್ಲಿ ಸುಮಾರು 75 ಲಕ್ಷ ಖಾಸಗಿ ಮತ್ತು ಸರ್ಕಾರಿ ಶಾಲಾ ಶಿಕ್ಷಕರಿದ್ದು ಅವರಲ್ಲಿ ಇದುವರೆಗೆ ಶೇಕಡಾ 20ಕ್ಕಿಂತ ಕಡಿಮೆ ಮಂದಿಗೆ ಲಸಿಕೆಯಾಗಿದೆ. ಶಿಕ್ಷಕರಿಗೆ ಲಸಿಕೆ ನೀಡಲು ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಇತರ ಬೃಹತ್ ಕಂಪೆನಿಗಳ ನೆರವನ್ನು ಖಾಸಗಿ ಆಸ್ಪತ್ರೆಗಳು ಬಯಸುತ್ತಿವೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ಲಭ್ಯವಾಗಿದೆ.

ಕಳೆದ ವಾರ ಆರೋಗ್ಯ ಸಚಿವಾಲಯ ಅಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಮಧ್ಯೆ ಸಭೆಯೊಂದು ನಡೆದಿದ್ದು, ಅದರಲ್ಲಿ ಸರ್ಕಾರ ಶಾಲೆಗಳನ್ನು ಪುನರಾರಂಭಿಸುವ ಮೊದಲು ಮಾರ್ಗಸೂಚಿ ಹೊರಡಿಸಲು ಕಾರ್ಪೊರೇಟರ್ ಗಳ ನೆರವನ್ನು ಕೇಳಿದೆ.

ಖಾಸಗಿ ಆಸ್ಪತ್ರೆಗಳು ಲಸಿಕೆ ನೀಡಲು ಆರಂಭಿಸಿದರೆ ಹೆಚ್ಚೆಚ್ಚು ಮಂದಿ ಶಿಕ್ಷಕರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುವಂತೆ ಮಾಡಬೇಕು ಎಂದು ಸಚಿವಾಲಯ ಅಧಿಕಾರಿಗಳು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಪೊರೇಟ್ ಕಂಪೆನಿಗಳು ಮುಂದೆ ಬರುವಂತೆ ಅಮೆಜಾನ್ ನಂತಹ ಬೃಹತ್ ಕಂಪೆನಿಗಳ ಸಹಾಯ ಕೇಳಲಾಗಿದೆ ಎಂದು ಅಸೋಸಿಯೇಷನ್ ಆಫ್ ಹೆಲ್ತ್ ಕೇರ್ ಆಫ್ ಇಂಡಿಯಾದ ಡಿಜಿ ಗಿರಿಧರ್ ಜೆ ಗ್ಯಾನಿ ತಿಳಿಸಿದ್ದಾರೆ.

ಈ ಕ್ರಮ ಕೈಗೊಂಡರೆ ಎರಡನೇ ಮತ್ತು ಮೂರನೇ ಹಂತದ ಪಟ್ಟಣಗಳಲ್ಲಿ ಸಣ್ಣ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ತ್ವರಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com