ರಾಹುಲ್ ಗಾಂಧಿ ಕಾಶ್ಮೀರ ಪ್ರವಾಸ: ಖೀರ್ ಭವಾನಿ ದೇಗುಲಕ್ಕೆ ಭೇಟಿ, ದುರ್ಗಾದೇವಿ ದರ್ಶನ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಜಮ್ಮು ಮತ್ತು ಕಾಶ್ಮೀರದ ತುಳಮಲ್ ಗಂದರ್‌ ಬಾಲ್‌ನಲ್ಲಿರುವ ಮಾತಾ ಖೀರ್ ಬವಾನಿ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದ್ದು, ಮಾತಾ ದುರ್ಗಾದೇವಿ ದರ್ಶನ ಪಡೆದಿದ್ದಾರೆ. 
ಮಾತಾ ದುರ್ಗಾದೇವಿ ದರ್ಶನ ಪಡೆಯುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಮಾತಾ ದುರ್ಗಾದೇವಿ ದರ್ಶನ ಪಡೆಯುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಶ್ರೀನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಜಮ್ಮು ಮತ್ತು ಕಾಶ್ಮೀರದ ತುಳಮಲ್ ಗಂದರ್‌ ಬಾಲ್‌ನಲ್ಲಿರುವ ಮಾತಾ ಖೀರ್ ಬವಾನಿ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದ್ದು, ಮಾತಾ ದುರ್ಗಾದೇವಿ ದರ್ಶನ ಪಡೆದಿದ್ದಾರೆ. 

ವಿಧಾನಸಭೆ ಚುನಾವಣೆ ಆರಂಭವಾಗುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತೆ ಚುರುಕುಗೊಳ್ಳುತ್ತಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಣಿವೆ ರಾಜ್ಯಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. 

ಇದರಂತೆ ಇಂದು ತುಳಮಲ್ ಗಂದರ್‌ ಬಾಲ್‌ನಲ್ಲಿರುವ ಮಾತಾ ಖೀರ್ ಬವಾನಿ ದೇವಸ್ಥಾನಕ್ಕೆ ಭೇಟಿ ಮಾತಾ ದುರ್ಗಾದೇವಿ ದರ್ಶನ ಪಡೆದಿದ್ದಾರೆ. ದೇವಾಲಯ ಭೇಟಿ ಬಳಿಕ ರಾಹುಲ್ ಗಾಂಧಿಯವರು ಶ್ರೀನಗರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯನ್ನು ಉದ್ಘಾಟಿಸಲಿದ್ದಾರೆಂದು ಹೇಳಲಾಗುತ್ತಿದೆ. 

ಈ ನಡುವೆ ದಕ್ಷಿಣ ಕಾಶ್ಮೀರದ ಶೋಫಿಯಾನ್ ಜಿಲ್ಲೆಯಲ್ಲಿ ಇಂದು ಸಿಆರ್ ಪಿಎಫ್ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಸಿಆರ್ ಪಿಎಫ್ ಯೋಧ ಗಾಯಗೊಂಡಿದ್ದಾರೆ. ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೇ ಉಗ್ರರು ದಾಳಿ ನಡೆಸಿರುವುದು ಆತಂಕವನ್ನು ಹೆಚ್ಚು ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com