ವಿಧಾನಸಭೆ ಚುನಾವಣೆಗೂ ಮುನ್ನ ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಪುನಃಸ್ಥಾಪಿಸಬೇಕು: ಗುಲಾಂ ನಬಿ ಆಜಾದ್

ವಿಧಾನಸಭೆ ಚುನಾವಣೆ ನಡೆಯುವ ಮೊದಲು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮಂಗಳವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಗುಲಾಂ ನಬಿ ಆಜಾದ್
ಗುಲಾಂ ನಬಿ ಆಜಾದ್

ಶ್ರೀನಗರ: ವಿಧಾನಸಭೆ ಚುನಾವಣೆ ನಡೆಯುವ ಮೊದಲು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮಂಗಳವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಧ್ಯ ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ತುಲ್ಲಮುಲ್ಲಾ ಪ್ರದೇಶದ ಖೀರ್ ಭವಾನಿ ದೇವಸ್ಥಾನ ಸಂಕೀರ್ಣದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆಜಾದ್, ಕಾಶ್ಮೀರಿ ನಿವಾಸಿಗಳಿಗೆ ಭೂಮಿ ಮತ್ತು ಉದ್ಯೋಗ ಹಕ್ಕು ನೀಡಬೇಕು ಎಂದಿದ್ದಾರೆ.

1990ರ ದಶಕದ ಆರಂಭದಲ್ಲಿ ಉಗ್ರರ ದಾಳಿ ಹಿನ್ನೆಲೆಯಲ್ಲಿ ಕಣಿವೆಯನ್ನು ತೊರೆದ ಕಾಶ್ಮೀರಿ ಪಂಡಿತರನ್ನು ಮರಳಿ ಕರೆತರಬೇಕು ಎಂದು ಅವರು ಹೇಳಿದರು.

"ವಿಧಾನಸಭೆ ಚುನಾವಣೆ ಶೀಘ್ರವಾಗಿ ನಡೆಸಬೇಕು. ಆದರೆ ಚುನಾವಣೆಗೆ ಮುಂಚಿತವಾಗಿ, ರಾಜ್ಯತ್ವವನ್ನು ಪುನಃಸ್ಥಾಪಿಸಬೇಕು, ಇದು ಬಹಳ ಮುಖ್ಯವಾಗಿದೆ. ಕಾಶ್ಮೀರಿ ಪಂಡಿತರನ್ನು ಮರಳಿ ತರಬೇಕು." ನಮ್ಮ ಭೂಮಿ ಮತ್ತು ಉದ್ಯೋಗ(ಹಕ್ಕುಗಳು), 370 ನೇ ವಿಧಿಯ ನಂತರ ರದ್ದುಗೊಳಿಸಲಾಗಿದೆ, ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸಿದಾಗ ಹೊಸ ಕಾನೂನಿನ ಮೂಲಕ (ಆಗಸ್ಟ್ 5, 2019) ಮೊದಲಿನಂತೆ ನಮ್ಮ ಭೂಮಿ ಮತ್ತು ಉದ್ಯೋಗ ಭದ್ರಪಡಿಸಬೇಕು" ಎಂದು ಕಾಂಗ್ರೆಸ್ ನಾಯಕ ಹೇಳಿದರು.

ಆಗಸ್ಟ್ 5, 2019 ರಂದು, ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವುದಾಗಿ ಘೋಷಿಸಿತು ಮತ್ತು ಕಣಿವೆ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಮಾಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com