ಮೇಲ್ನೊಟಕ್ಕೆ ತೋರುವಂತೆ ಟ್ವಿಟರ್ ಹೊಸ ಐಟಿ ನಿಯಮ ಪಾಲನೆ ಮಾಡಿದೆ: ದೆಹಲಿ ಹೈಕೋರ್ಟ್ ಗೆ ಕೇಂದ್ರದ ಹೇಳಿಕೆ!

ಖಾಯಂ ಆಧಾರದಲ್ಲಿ ಮುಖ್ಯ ಕುಂದುಕೊರತೆ ಅಧಿಕಾರಿ, ಸ್ಥಾನಿಕ ಆಡಳಿತಾಧಿಕಾರಿ ಮತ್ತು ನೋಡಲ್ ಸಂಪರ್ಕಿತ ವ್ಯಕ್ತಿ ನೇಮಕದೊಂದಿಗೆ ಮೇಲ್ನೊಟಕ್ಕೆ ತೋರುವಂತೆ ಟ್ವಿಟರ್ ಹೊಸ ಐಟಿ ನಿಯಮಗಳನ್ನು ಪಾಲನೆ ಮಾಡಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ದೆಹಲಿ ಹೈಕೋರ್ಟ್ ಗೆ ತಿಳಿಸಿದೆ.
ಟ್ವಿಟರ್ ಲೊಗೋ
ಟ್ವಿಟರ್ ಲೊಗೋ

ನವದೆಹಲಿ: ಖಾಯಂ ಆಧಾರದಲ್ಲಿ ಮುಖ್ಯ ಕುಂದುಕೊರತೆ ಅಧಿಕಾರಿ, ಸ್ಥಾನಿಕ ಆಡಳಿತಾಧಿಕಾರಿ ಮತ್ತು ನೋಡಲ್ ಸಂಪರ್ಕಿತ ವ್ಯಕ್ತಿ ನೇಮಕದೊಂದಿಗೆ ಮೇಲ್ನೊಟಕ್ಕೆ ತೋರುವಂತೆ ಟ್ವಿಟರ್ ಹೊಸ ಐಟಿ ನಿಯಮಗಳನ್ನು ಪಾಲನೆ ಮಾಡಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ದೆಹಲಿ ಹೈಕೋರ್ಟ್ ಗೆ ತಿಳಿಸಿದೆ.

ಅಮೆರಿಕ ಮೂಲದ ಮೈಕ್ರೋ ಬ್ಲಾಗಿಂಗ್ ಯಿಂದ ಐಟಿ ಕಾನೂನುಗಳನ್ನು ಅನುಸರಿಸುತ್ತಿಲ್ಲ ಎಂಬು ಆರೋಪ ಕುರಿತ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಾಧೀಶೆ ರೇಖಾ ಪಲ್ಲಿ, ಎರಡು ವಾರಗಳಲ್ಲಿ ತನ್ನ ನಿಲುವು ಕುರಿತ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿದರು. 

ಮುಖ್ಯ ಕುಂದುಕೊರತೆ ಅಧಿಕಾರಿ, ನೋಡಲ್ ಸಂಪರ್ಕಿತ ವ್ಯಕ್ತಿ ಮತ್ತು ಸ್ಥಾನಿಕ ಆಡಳಿತ ಅಧಿಕಾರಿಯನ್ನು ಹೊಸ ಕಾನೂನಿನ ಅನುಸಾರ ನೇಮಕ ಮಾಡಲಾಗಿದೆ. ಆ ಕುರಿತಂತೆ ಇ-ಮೇಲ್ ಸ್ವೀಕರಿಸಿದ್ದೇನೆ. ಅಫಿಡವಿಟ್ ಹೊಂದುವುದು ಉತ್ತಮ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಹೇಳಿದರು. ಐಟಿ ನಿಯಮಗಳ ಪಾಲನೆ ಕುರಿತಂತೆ ಟ್ವಿಟರ್ ಅಫಿಡವಿಟ್ ಅಂತಿಮ ದಾಖಲೆ ಎಂದು ನ್ಯಾಯಾಲಯ ಹೇಳಿತು. 

ಟ್ವಿಟರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಜನ್ ಪೂವಯ್ಯ,  ಮುಖ್ಯ ಕುಂದುಕೊರತೆ ಅಧಿಕಾರಿ, ಸ್ಥಾನಿಕ ಆಡಳಿತಾಧಿಕಾರಿ ಮತ್ತು ನೋಡಲ್ ಸಂಪರ್ಕಿತ ವ್ಯಕ್ತಿಯನ್ನು ನೇಮಕ ಮಾಡಾಗಿದೆ ಎಂದು ತಿಳಿಸಿದರು. ನೇಮಕವಾದ ವ್ಯಕ್ತಿಗಳು ಪೂರ್ಣಾವಧಿ ಆಧಾರದ ಮೇಲೆ ಕಾರ್ಯ ನಿರ್ವಹಿಸಲಿದ್ದಾರೆ. ಕಾನೂನಿನ ಅನುಸಾರ ಕಾರ್ಯನಿರ್ವಹಿಸಲು ಸಂಪೂರ್ಣ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರು ಹೇಳಿದರು. 

ಮುಖ್ಯ ಕುಂದುಕೊರತೆ ಅಧಿಕಾರಿ ಪೂರ್ಣವಧಿಗೆ ನೇಮಕ ಮಾಡದ ಹಿನ್ನೆಲೆಯಲ್ಲಿ ಜುಲೈ 28 ರಂದು ನ್ಯಾಯಾಲಯ ಟ್ವಿಟರ್ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೇ ಟ್ವಿಟರ್ ಹೊಸ ಐಟಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಹೇಳಿತ್ತು. ಹೊಸ ಐಟಿ ನಿಯಮಗಳನ್ನು ಪಾಲಿಸುವಲ್ಲಿ ಟ್ವಿಟರ್ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ಹೇಳಲಾಗಿತ್ತು.  

ಐಟಿ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಲು ನ್ಯಾಯಾಲಯ ಈ ಹಿಂದೆ ಟ್ವಿಟರ್ ಗೆ ಸಮಯಾವಕಾಶ ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 5 ರಂದು ಮುಂದಿನ ವಿಚಾರಣೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com