ವಿಡಿಯೋ: ಪಾತಾಳಕ್ಕೆ ಕುಸಿದ ಬೃಹತ್ ಗುಡ್ಡ, ಕೂದಲೆಳೆ ಅಂತರದಲ್ಲಿ ವಾಹನ ಸವಾರರು ಪಾರು

ಕಣಿವೆ ರಾಜ್ಯ ಉತ್ತರಾಖಂಡದಲ್ಲಿ ಬೃಹತ್ ಗುಡ್ಡವೊಂದು ನೋಡನೋಡುತ್ತಿದ್ದಂತೆಯೇ ಧರೆಗುರುಳಿದ್ದು, ರಸ್ತೆಯಲ್ಲಿದ್ದ ವಾಹನ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಟೋಟಾಘಾಟಿ ಭೂಕುಸಿತ ದೃಶ್ಯ
ಟೋಟಾಘಾಟಿ ಭೂಕುಸಿತ ದೃಶ್ಯ

ಡೆಹ್ರಾಡೂನ್: ಕಣಿವೆ ರಾಜ್ಯ ಉತ್ತರಾಖಂಡದಲ್ಲಿ ಬೃಹತ್ ಗುಡ್ಡವೊಂದು ನೋಡನೋಡುತ್ತಿದ್ದಂತೆಯೇ ಧರೆಗುರುಳಿದ್ದು, ರಸ್ತೆಯಲ್ಲಿದ್ದ ವಾಹನ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿರುವ ವಿಡಿಯೋ ಇದೀಗ ವೈರಲ್ ಆಗಿದೆ.

 ಉತ್ತರಾಖಂಡದಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗುತ್ತಿದ್ದು, ಮಳೆ ಸಂಬಂಧಿ ಹಲವು ದುರಂತಗಳು ಸಂಭವಿಸಿ ಹಲವರು ಸಾವಿಗೀಡಾಗಿದ್ದಾರೆ. ಇದೀಗ ಇಂತಹುದೇ ಮತ್ತೊಂದು ಘಟನೆ ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ 58ರಲ್ಲಿ ನಡೆದಿದ್ದು, ಬೃಹತ್ ಗುಡ್ಡದ ಭಾಗವೊಂದು ನೋಡ ನೋಡುತ್ತಿದ್ದಂತೆಯೇ ಕುಸಿದಿದೆ. 

ರಸ್ತೆಯಲ್ಲಿದ್ದ ನೂರಾರು ವಾಹನ ಸವಾರರು ಅಪಾಯದ ಮುನ್ಸೂಚನೆ ಅರಿತು ಸುರಕ್ಷಿತ ಸ್ಖಳದಲ್ಲಿ ನಿಂತಿದ್ದರು.  ಹೀಗಾಗಿ ಅದೃಷ್ಟವಾಶಾತ್ ಯಾವುದೇ ದುರಂತ ಸಂಭವಿಸಿಲ್ಲ. ಆದರೆ ಭೂಕುಸಿತ ಪರಿಣಾಮ ರಾಷ್ಟ್ರೀಯ ಹೆದ್ದಾರಿ 58 ()ರಿಷಿಕೇಶ-ಶ್ರೀನಗರ) ಟೋಟಾ ಘಾಟಿ ರಸ್ತೆ ಬಂದ್ ಆಗಿದೆ. 

ಕೆಲ ವಾಹನ ಸಾವರರು ಭೂಕುಸಿತದ ಭೀಕರ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಸಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com