ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಲ್ಲಿ ಐಟಿ ಪ್ರಶಸ್ತಿ: ಮಹಾರಾಷ್ಟ್ರ ಸರ್ಕಾರ ಘೋಷಣೆ 

ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರ ಖೇಲ್ ರತ್ನದ ಹೆಸರಿನಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹೆಸರನ್ನು ತೆಗೆದುಹಾಕಿದ ನಂತರ ಸಮಾಜಕ್ಕೆ ಸಹಾಯ ಮಾಡುವ ಮಾಹಿತಿ ತಂತ್ರಜ್ಞಾನ(ಐಟಿ) ಸಂಘಟನೆಗಳಿಗೆ ಸನ್ಮಾನ ಮಾಡುವ ಪ್ರಶಸ್ತಿಗೆ ಮಹಾರಾಷ್ಟ್ರ ಸರ್ಕಾರ ರಾಜೀವ್ ಗಾಂಧಿಯವರ ಹೆಸರನ್ನಿಟ್ಟಿದೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ

ಮುಂಬೈ: ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರ ಖೇಲ್ ರತ್ನದ ಹೆಸರಿನಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹೆಸರನ್ನು ತೆಗೆದುಹಾಕಿದ ನಂತರ ಸಮಾಜಕ್ಕೆ ಸಹಾಯ ಮಾಡುವ ಮಾಹಿತಿ ತಂತ್ರಜ್ಞಾನ(ಐಟಿ) ಸಂಘಟನೆಗಳಿಗೆ ಸನ್ಮಾನ ಮಾಡುವ ಪ್ರಶಸ್ತಿಗೆ ಮಹಾರಾಷ್ಟ್ರ ಸರ್ಕಾರ ರಾಜೀವ್ ಗಾಂಧಿಯವರ ಹೆಸರನ್ನಿಟ್ಟಿದೆ.

ಈ ಕುರಿತು ಸರ್ಕಾರದ ಆದೇಶ ಹೊರಬಿದ್ದಿದ್ದು 1984ರಿಂದ 1989ರವರೆಗೆ ದೇಶದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರು ಐಟಿ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದು, ಅವರ ಅವಧಿಯಲ್ಲಿಯೇ ದೇಶದ ಐಟಿ ಕ್ಷೇತ್ರ ಬೆಳವಣಿಗೆ ಕಂಡಿತ್ತು. ಅವರ ಕೊಡುಗೆಯನ್ನು ಸ್ಮರಿಸಿ ಸರ್ಕಾರ ರಾಜೀವ್ ಗಾಂಧಿ ಹೆಸರಿನಲ್ಲಿ ಪ್ರಶಸ್ತಿ ನೀಡಲಿದೆ ಎಂದು ಹೇಳಲಾಗಿದೆ.

ಇದೇ ತಿಂಗಳ 20ರಂದು ರಾಜೀವ್ ಗಾಂಧಿಯವರ ಜಯಂತಿಯಂದು ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುತ್ತದೆ, ಈ ವರ್ಷ ಅಕ್ಟೋಬರ್ 30ರೊಳಗೆ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗುವುದು ಎಂದು ಸರ್ಕಾರದ ಆದೇಶ ಹೇಳಿದೆ.

ಮಹಾರಾಷ್ಟ್ರ ಸರ್ಕಾರದಲ್ಲಿ ಶಿವಸೇನೆ ಮತ್ತು ಎನ್ ಸಿಪಿಯ ಭಾಗವಾಗಿ ಕಾಂಗ್ರೆಸ್ ಕೂಡ ಇರುವುದು ಇಲ್ಲಿ ಮಹತ್ವದ್ದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com