ಒಲಂಪಿಕ್ಸ್ ಚಿನ್ನದ ಸಂಭ್ರಮ: ಪೆಟ್ರೋಲ್ ಪಂಪ್ ನಿಂದ 'ನೀರಜ್' ಹೆಸರಿನವರಿಗೆ ಉಚಿತ ಪೆಟ್ರೋಲ್!
ಇತ್ತೀಚೆಗೆ ನಡೆದ ಟೋಕಿಯೊ ಒಲಂಪಿಕ್ಸ್‌ನಲ್ಲಿ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆದ್ದಿರುವುದನ್ನು ಸಂಭ್ರಮಿಸಲು, ಗುಜರಾತ್‌ನ ಭರೂಚ್ ಜಿಲ್ಲೆಯ ಪೆಟ್ರೋಲ್ ಪಂಪ್ ವೊಂದು ನೀರಜ್ ಎಂಬ ಹೆಸರಿನ ವ್ಯಕ್ತಿಗಳಿಗೆ ಉಚಿತ ಪೆಟ್ರೋಲ್ ನೀಡುತ್ತಿದೆ.
Published: 11th August 2021 02:49 PM | Last Updated: 11th August 2021 03:28 PM | A+A A-

ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ
ಭರೂಚ್: ಇತ್ತೀಚೆಗೆ ನಡೆದ ಟೋಕಿಯೊ ಒಲಂಪಿಕ್ಸ್‌ನಲ್ಲಿ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆದ್ದಿರುವುದನ್ನು ಸಂಭ್ರಮಿಸಲು, ಗುಜರಾತ್‌ನ ಭರೂಚ್ ಜಿಲ್ಲೆಯ ಪೆಟ್ರೋಲ್ ಪಂಪ್ ವೊಂದು ನೀರಜ್ ಎಂಬ ಹೆಸರಿನ ವ್ಯಕ್ತಿಗಳಿಗೆ ಉಚಿತ ಪೆಟ್ರೋಲ್ ನೀಡುತ್ತಿದೆ.
ನೇತ್ರಾಂಗ್ ಪಟ್ಟಣದಲ್ಲಿರುವ ಪೆಟ್ರೋಲ್ ಪಂಪ್ ಈ ಸಂಬಂಧ ಪೋಸ್ಟರ್ ಹಾಕಿದ್ದು, ಜನರು ತಮ್ಮ ಗುರುತಿನ ಚೀಟಿಯನ್ನು ತೋರಿಸುವ ಮೂಲಕ ಈ ಆಫರ್ ಅನ್ನು ಪಡೆದುಕೊಳ್ಳುವಂತೆ ಕೇಳಿಕೊಂಡಿದೆ.
ನಂತರ 'ನೀರಜ್' ಹೆಸರು ಹೊಂದಿರುವ 28 ಜನರು 501 ರೂಪಾಯಿಗಳ ಉಚಿತ ಪೆಟ್ರೋಲ್ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ಪೆಟ್ರೋಲ್ ಪಂಪ್ ಮಾಲೀಕರು ಪಿಟಿಐಗೆ ತಿಳಿಸಿದ್ದಾರೆ.
"ನನ್ನ ಸ್ನೇಹಿತರೊಬ್ಬರು ಈ ಆಫರ್ ಬಗ್ಗೆ ತಿಳಿಸಿದ ನಂತರ ನಾನು ನೇತ್ರಾಂಗ್‌ಗೆ ಬಂದಿದ್ದೇನೆ. ನನ್ನ ಹೆಸರನ್ನು ಚಿನ್ನದ ಪದಕ ಗೆದ್ದವರೊಂದಿಗೆ ಹಂಚಿಕೊಳ್ಳುವುದು ಬಹಳ ಹೆಮ್ಮೆಯ ವಿಷಯ ಎಂದು ಅದೃಷ್ಟಶಾಲಿ ಗ್ರಾಹಕರಲ್ಲಿ ಒಬ್ಬರಾಗಿದ್ದ ಹತ್ತಿರದ ಕೋಸಂಬಾ ಪಟ್ಟಣದ ನೀರಜ್ ಸಿನ್ಹಾ ಸೋಲಂಕಿ ಅವರು ಹೇಳಿದ್ದಾರೆ.
"ಪೆಟ್ರೋಲ್ ಪಂಪ್ ಮಾಲೀಕರ ಈ ಅದ್ಭುತ ಆಫರ್ ಅನ್ನು ನಾನು ಪ್ರಶಂಸಿಸುತ್ತೇನೆ. ನೀರಜ್ ಚೋಪ್ರಾ ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ನನ್ನ ಹೆಸರನ್ನು ಕ್ರೀಡಾ ಪ್ರತಿಭೆಯೊಂದಿಗೆ ಹಂಚಿಕೊಳ್ಳುವುದು ನನ್ನ ಅದೃಷ್ಟ" ಎಂದು ನೇತ್ರಾಂಗ್ ಪಟ್ಟಣದ ಮತ್ತೊಬ್ಬ ಅದೃಷ್ಟವಂತ ಗ್ರಾಹಕ ನೀರಜ್ ಪಟೇಲ್ ತಿಳಿಸಿದ್ದಾರೆ.