ಭೀಕರ ದೃಶ್ಯ: ಕಷ್ಟಪಟ್ಟು ತಾನೇ ತಯಾರಿಸುತ್ತಿದ್ದ ಹೆಲಿಕಾಪ್ಟರ್ ಬ್ಲೇಡ್ ನಿಂದ ಕತ್ತು ಸೀಳಿ ಯುವಕ ಸಾವು!
ತಾನೇ ತಯಾರಿಸಿದ್ದ ಹೆಲಿಕಾಪ್ಟರ್ ನಿಂದ ಯುವಕನೋರ್ವ ಮೃತಪಟ್ಟಿರುವ ದಾರುಣ ಘಟನೆ ಮಹಾರಾಷ್ಟ್ರದ ಯಾವತ್ಮಾಲ್ ಜಿಲ್ಲೆಯಲ್ಲಿ ನಡೆದಿದೆ.
Published: 12th August 2021 10:06 PM | Last Updated: 13th August 2021 01:12 PM | A+A A-

ಪ್ರತ್ಯಕ್ಷ ದೃಶ್ಯ
ಮುಂಬೈ: ತಾನೇ ತಯಾರಿಸಿದ್ದ ಹೆಲಿಕಾಪ್ಟರ್ ನಿಂದ ಯುವಕನೋರ್ವ ಮೃತಪಟ್ಟಿರುವ ದಾರುಣ ಘಟನೆ ಮಹಾರಾಷ್ಟ್ರದ ಯಾವತ್ಮಾಲ್ ಜಿಲ್ಲೆಯಲ್ಲಿ ನಡೆದಿದೆ.
24 ವರ್ಷದ ಶೇಖ್ ಇಸ್ಮಾಯಿಲ್ ಹೆಲಿಕಾಪ್ಟರ್ ನಿರ್ಮಿಸುವ ಪ್ರಯೋಗಕ್ಕೆ ಮುಂದಾಗಿದ್ದರು. ಅದರಂತೆ ಹೆಲಿಕಾಪ್ಟರ್ ನಿರ್ಮಿಸಿ ಅದರ ಟ್ರಯಲ್ ವೇಳೆ ಹೆಲಿಕಾಪ್ಟರ್ ನ ಬ್ಲೇಡ್ ಕತ್ತು ಸೀಳಿಸಿದೆ.
ಇಸ್ಮಾಯಿಲ್ ಹೆಲಿಕಾಪ್ಟರ್ ಪಕ್ಕದಲ್ಲೇ ನಿಂತು ಅದರಲ್ಲಿನ ದೋಷ ಪರೀಕ್ಷೆ ನಡೆಸುತ್ತಿದ್ದಾಗ ಬ್ಲೇಡ್ ಶೇಕ್ ಇಸ್ಮಾಯಿಲ್ ತಲೆ ತಾಗಿದೆ. ಶಾಲಾ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಮೆಕ್ಯಾನಿಕ್ ಆಗಿದ್ದ ಇಸ್ಮಾಯಿಲ್ ತಮ್ಮ ವರ್ಕ್ ಶಾಪ್ ನಲ್ಲಿ ಹೆಲಿಕಾಪ್ಟರ್ ಟೆಸ್ಟಿಂಗ್ ಮಾಡುತ್ತಿದ್ದರು.
ಆಗಸ್ಟ್ 15ಕ್ಕೆ ಸ್ವಾತಂತ್ರ್ಯ ದಿನಾಚರಣೆಯಂದು ತಾನು ಸಿದ್ಧಪಡಿಸಿ ಹೆಲಿಕಾಪ್ಟರ್ ಹಾರಿಸಬೇಕು ಎಂಬುದು ಶೇಕ್ ಇಸ್ಮಾಯಿಲ್ ಉದ್ದೇಶವಾಗಿತ್ತು. ಆದರೆ ಕಳೆದ ರಾತ್ರಿ ಹೆಲಿಕಾಪ್ಟರ್ ಟ್ರಯಲ್ ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ.