ಕೋವಿಡ್-19: ದೇಶದಲ್ಲಿ 41,195 ಹೊಸ ಸೋಂಕು ಪತ್ತೆ, 490 ಸಾವು

ಭಾರತದಲ್ಲಿ ಮಹಾಮಾರಿ ಕೊರೋನಾ ಸೋಂಕಿಗೆ ಗುರುವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 41 ಸಾವಿರದ 195 ಮಂದಿ ಒಳಗಾಗಿದ್ದಾರೆ. ದೇಶದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 3 ಲಕ್ಷದ 87 ಸಾವಿರದ 987 ಆಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಭಾರತದಲ್ಲಿ ಕೋವಿಡ್-19
ಭಾರತದಲ್ಲಿ ಕೋವಿಡ್-19

ನವದೆಹಲಿ: ಭಾರತದಲ್ಲಿ ಮಹಾಮಾರಿ ಕೊರೋನಾ ಸೋಂಕಿಗೆ ಗುರುವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 41 ಸಾವಿರದ 195 ಮಂದಿ ಒಳಗಾಗಿದ್ದಾರೆ. ದೇಶದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 3 ಲಕ್ಷದ 87 ಸಾವಿರದ 987 ಆಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 490 ಮಂದಿ ಸೋಂಕಿತರು ಬಲಿಯಾಗುವ ಮೂಲಕ ಮೃತಪಟ್ಟವರ ಸಂಖ್ಯೆ ಇಲ್ಲಿಯವರೆಗೆ 4 ಲಕ್ಷದ 29 ಸಾವಿರದ 669ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು ದೇಶದಲ್ಲಿ ಒಟ್ಟು ಸೋಂಕಿತರ ಶೇಕಡಾ 1.21ರಷ್ಟಾಗಿದ್ದು ಗುಣಮುಖ ಹೊಂದಿದವರ ಸಂಖ್ಯೆ ಶೇಕಡಾ 97.45ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಸಾವಿರದ 636 ಸೋಂಕಿತರು ಹೆಚ್ಚಾಗಿದ್ದಾರೆ.

ನಿನ್ನೆ ಒಂದೇ ದಿನ 21 ಲಕ್ಷದ 24 ಸಾವಿರದ 953 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು ಇದುವರೆಗೆ ದೇಶದಲ್ಲಿ 48 ಕೋಟಿಯ 73 ಲಕ್ಷದ 70 ಸಾವಿರದ 196 ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಇದುವರೆಗೆ ದೇಶದಲ್ಲಿ ಕೊರೋನಾ ವಿರುದ್ಧ ಲಸಿಕೆ ನೀಡಿರುವ ಡೋಸ್ ನ ಸಂಖ್ಯೆ 52 ಕೋಟಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 40 ಲಕ್ಷಕ್ಕೂ ಅಧಿಕ ಡೋಸ್ ಗಳನ್ನು ನಿನ್ನೆ ಒಂದೇ ದಿನ ನೀಡಲಾಗಿದೆ. ಇದುವರೆಗೆ 20 ಲಕ್ಷದ 58 ಸಾವಿರದ 952 ಮಂದಿಗೆ ಮೊದಲ ಡೋಸ್ ನೀಡಲಾಗಿದ್ದು 4 ಲಕ್ಷದ 30 ಸಾವಿರದ 665 ಮಂದಿಗೆ ಎರಡನೇ ಡೋಸ್ ನ್ನು 18ರಿಂದ 44 ವರ್ಷದವರೆಗೆ ನೀಡಲಾಗಿದೆ.

ಒಟ್ಟು, 18 ಕೋಟಿಯ 45 ಲಕ್ಷದ 43 ಸಾವಿರದ 154 ಜನರು, 18-44 ವರ್ಷ ವಯಸ್ಸಿನವರು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ತಮ್ಮ ಮೊದಲ ಡೋಸ್ ಪಡೆದಿದ್ದಾರೆ ಮತ್ತು 1 ಕೋಟಿಯ 34 ಲಕ್ಷದ 04 ಸಾವಿರದ 637 ಎರಡನೇ ಡೋಸ್ ಅನ್ನು ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ 3 ನೇ ಹಂತದ ಆರಂಭದಿಂದ ಪಡೆದಿದ್ದಾರೆ.

ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಲ್ಲಿ 18ರಿಂದ 44 ವರ್ಷ ವಯಸ್ಸಿನವರಲ್ಲಿ 1 ಕೋಟಿಗೂ ಹೆಚ್ಚು ಕೋವಿಡ್ -19 ಲಸಿಕೆಯನ್ನು ನೀಡಲಾಗಿದೆ. ಅಲ್ಲದೆ ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸ್‌ಗಢ, ದೆಹಲಿ, ಹರಿಯಾಣ, ಜಾರ್ಖಂಡ್, ಕೇರಳ, ತೆಲಂಗಾಣ, ಹಿಮಾಚಲ ಪ್ರದೇಶ, ಒಡಿಶಾ, ಪಂಜಾಬ್, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ 18-44 ವರ್ಷ ವಯಸ್ಸಿನ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಮೊದಲ ಡೋಸ್‌ಗೆ ಲಸಿಕೆ ಹಾಕಿದ್ದಾರೆ.

ನಿನ್ನೆ ಲಸಿಕೆ ಹಾಕುವಿಕೆಯ 208 ನೇ ದಿನ, ಒಟ್ಟು 40 ಲಕ್ಷದ 02 ಸಾವಿರದ 634 ಲಸಿಕೆ ಡೋಸ್‌ಗಳನ್ನು ನೀಡಲಾಯಿತು. ಒಟ್ಟು 29 ಲಕ್ಷದ 07 ಸಾವಿರದ 836 ಫಲಾನುಭವಿಗಳಿಗೆ ಮೊದಲ ಡೋಸ್‌ಗೆ ಲಸಿಕೆ ಹಾಕಲಾಗಿದೆ ಮತ್ತು 10 ಲಕ್ಷದ 94 ಸಾವಿರದ 798 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com